(www.vknews.in) : ಹಝ್ರತ್ ನೂಹ್ರವರಿಗೆ ತನ್ನ ಎರಡು ಪತ್ನಿಗಳಲ್ಲಾಗಿ ನಾಲ್ಕು ಮಕ್ಕಳಿದ್ದವು. ಅದರಲ್ಲಿ ಕನ್ಆನ್ ಎಂಬ ಮಗ ಅವರನ್ನು ಬಿಟ್ಟುಹೋದ ಮುನಾಫಿಖ್ ಆದ ಹೆಂಡತಿಯಿಂದ ಜನಿಸಿದ್ದಾಗಿತ್ತು. ಆತ ತನ್ನ ತಾಯಿಯೊಂದಿಗೆಯೇ ಗಂಟುಮೂಟೆ ಕಟ್ಟಿಕೊಂಡು ಹೋಗಿದ್ದ. ಅಲ್ಲದೆ ಆತ ತಾಯಿಯಂತೆ ಅಮುಸ್ಲಿಮನಾಗಿದ್ದ. ಇವರಿಬ್ಬರೂ ತೂಫಾನಿನಿಂದ ಸತ್ತು ಹೋಗಿದ್ದರು. ಮತ್ತೊಂದು ಸತ್ಯ ವಿಶ್ವಾಸಿಯಾದ ಪತ್ನಿಯಲ್ಲಿ ಸಾಮ್, ಹಾಮ್ ಮತ್ತು ಯಾಫಿಸ್ ಎಂಬ ಮೂರು ಮಕ್ಕಳಿದ್ದವು. ಅವರೆಲ್ಲರೂ ಪ್ರವಾಹದ ವೇಳೆಯಲ್ಲಿ ಹಡಗಿನಲ್ಲಿದ್ದರು.
ಹಡಗು ಲಂಗರು ಹಾಕಿ ಜನರೆಲ್ಲರೂ ಪೂರ್ವ ಸ್ಥಿತಿಗೆ ಮರಳಿದಾಗ ಒಂದು ದಿನ ಹಝ್ರತ್ ನೂಹ್ (ಅ) ರವರು ತನ್ನ ಎರಡನೆಯ ಮಗ ಹಾಮ್ ನನ್ನು ಕರೆದು ಹೇಳಿದರು. “ನನಗೆ ನಿದ್ರೆ ಬರುತ್ತಿದೆ. ಹಡಗು ಹತ್ತಿದಂದಿನಿಂದ ಈ ತನಕ ಒಮ್ಮೆ ಆರಾಮವಾಗಿ ನಿದ್ರೆ ಮಾಡಲಾಗಿಲ್ಲ. ದಿನಾಲೂ ಟೆನ್ಶನ್ ಮತ್ತು ಬಿಝಿಯೇ ಆಯಿತು. ಆದ್ಧರಿಂದ ಈಗ ಒಂದು ಆರಾಮವಾದ ನಿದ್ರೆ ಮಾಡಬೇಕಾಗಿದೆ ” ಎಂದು ಹೇಳಿ ಮನೆಯ ಹೊರ ಜಗಲಿಯಲ್ಲಿ ಮಗನ ತೊಡೆಯ ಮೇಲೆ ತಲೆಯಿಟ್ಟು ನಿದ್ರೆಗೆ ಜಾರಿದರು. ಗಾಢ ನಿದ್ರೆಯಲ್ಲಿರುವಾಗ ಗಾಳಿ ಬಂದು ಅವರ ಅವುರತ್ (ರಹಸ್ಯ ಭಾಗ) ತೆರೆಯಿತು. ತಂದೆಯ ಅವುರತ್ ನೋಡಿದ ಮಗ ಹಾಮ್ ನಕ್ಕುಬಿದ್ದನು. ಆದರೆ ಹತ್ತಿರದಲ್ಲಿದ್ದ ಮೊದಲ ಪುತ್ರ ಸಾಮ್ ನಗಾಡದೆ ಕೂಡಲೇ ಅದನ್ನು ಮುಚ್ಚಿದನು. ಎಚ್ಚರಗೊಂಡ ಹಝ್ರತ್ ನೂಹ್ರವರು ಹೇಳಿದರು “ಏನಿದು? ನಗುವುದು ಕೇಳಿತಲ್ವಾ? ಏನು ಸಂಗತಿ?” ಆಗ ಸಾಮ್ ನಡೆದ ಸಂಗತಿ ಅವರಲ್ಲಿ ಹೇಳಿದ. ಕೋಪಗೊಂಡ ಹಝ್ರತರು “ನಿನಗೆ ನಾಚಿಕೆ ಆಗೋದಿಲ್ವಾ? ನಿನ್ನ ತಂದೆಯ ಅವುರತ್ ಕಾಣುವಾಗ ನಗುವುದಾ? ಇದು ಯಾವ ಧರ್ಮ? ಅಲ್ಲಾಹು ನಿನ್ನ ಮುಖವನ್ನು ಕಪ್ಪು ಮಾಡಿ ನಿನ್ನ ರೂಪ ಬದಲಾಯಿಸಲಿ” ಎಂದು ಹೇಳಿ ಆತನನ್ನು ಶಪಿಸಿದರು.
ಸುಬ್ಹಾನಲ್ಲಾಹ್! ಅಷ್ಟು ಹೇಳಿದ್ದೇ ತಡ. ಆತನ ಮುಖ ಕಪ್ಪಾಗಿ ಕುರೂಪಿಯಾದನು. ಬಳಿಕ ಸಾಮಿನಲ್ಲಿ ಹೇಳಿದರು. “ತಂದೆಯ ಅವುರತನ್ನು ಮುಚ್ಚಿದ ನಿನ್ನ ತಪ್ಪುಗಳನ್ನು ಅಲ್ಲಾಹನು ಮರೆಮಾಚಲಿ. ನಿನ್ನ ಸಂತಾನದಲ್ಲಿ ಪ್ರವಾದಿಗಳು ಹುಟ್ಟುವಂತಾಗಲಿ. ನಿನ್ನ ಸಹೋದರ ಹಾಮ್ ನಿಗೆ ರೂಪವಿಲ್ಲದ ಗುಲಾಮರು ಹುಟ್ಟುವಂತಾಗಲಿ” ಎಂದು.
ಹಝ್ರತ್ ನೂಹ್ರವರಿಗೆ ನುಬುವ್ವತ್ ಲಭಿಸುವಾಗ ಇನ್ನೂರ ಐವತ್ತು ವರ್ಷ ಪ್ರಾಯವಾಗಿತ್ತು. ಬಳಿಕ ಒಟ್ಟು ಒಂಬೈನೂರ ಐವತ್ತು ವರ್ಷ ಬೋಧನೆ ಮಾಡಿದರು. ತೂಫಾನ್ ಕಳೆದ ನಂತರವೂ ಇನ್ನೂರು ವರ್ಷ ಬದುಕಿದರು. ಅಂದರೆ ಒಟ್ಟು ಸಾವಿರದ ಇನ್ನೂರು ವರ್ಷ ಬದುಕಿದರು. ಬೇರೊಂದು ವರದಿ ಪ್ರಕಾರ ಸಾವಿರದ ನಾಲ್ಕು ನೂರು ಎಂದೂ ಸಾವಿರದ ಏಳುನೂರು ಎಂದೂ ಅಭಿಪ್ರಾಯವಿದೆ.
ಒಂದು ದಿನ ಅವರು ಮನೆಯಲ್ಲಿರುವಾಗ ಒಬ್ಬರು ಬಂದು ಸಲಾಮ್ ಹೇಳಿದರು. ಹಝ್ರತ್ ನೂಹ್ರವರು ಸಲಾಮ್ಗೆ ಜವಾಬ್ ಕೊಟ್ಟು ಅವರಲ್ಲಿ ಕೇಳಿದರು. “ನೀವು ಯಾರು? ನೀವು ಸಲಾಮ್ ಹೇಳುವಾಗಲೇ ನನ್ನನ್ನು ಒಂತರ ಭಯ ಆವರಿಸಿತು” ಆಗ ಆ ಬಂದ ವ್ಯಕ್ತಿ ಹೇಳಿದರು. “ನಾನು ಮಲಕುಲ್ ಮೌತ್ ಅಝ್ರಾಯೀಲ್. ನಿಮ್ಮ ರೂಹ್ ಹಿಡಿಯಲು ಬಂದಿದ್ದೇನೆ.” ಇದನ್ನು ಕೇಳಿದಾಕ್ಷಣ ಹಝ್ರತ್ ನೂಹ್ರವರ ಮುಖದ ಬಣ್ಣ ಬದಲಾಯಿತು. ಭಯಭೀತಿ ಅವರನ್ನು ಅವರಿಸಿತು. ಆಗ ಅವರಲ್ಲಿ ಮಲಕ್ ಕೇಳಿದರು. “ಏನಿದು ಇಷ್ಟೊಂದು ಭಯ? ಬಣ್ಣವೇ ಬದಲಾಗಿದೆ. ಈ ಜಗತ್ತಿನಲ್ಲಿ ಇಷ್ಟೊಂದು ದೀರ್ಘ ಆಯುಷ್ಯ ಕೊಟ್ಟು ಅಲ್ಲಾಹನು ನಿಮ್ಮನ್ನು ಅನುಗ್ರಹಿಸಿದ. ಈ ಸುದೀರ್ಘ ಸಮಯದಲ್ಲಿ ಈ ಇಹಲೋಕದಲ್ಲಿನ ದಾಹ ಮತ್ತು ಪ್ರೀತಿ ನಿಮಗೆ ಮುಗಿಯಲಿಲ್ಲವೇ?” ಅದಕ್ಕೆ ಅವರು ಮನೆಯ ಒಂದು ಬಾಗಿಲಿನಿಂದ ಪ್ರವೇಶಿಸಿ ಮತ್ತೊಂದು ಬಾಗಿಲಿನಿಂದ ಹೊರಬಂದ ಅನುಭವ ಮಾತ್ರ ಆಯಿತಷ್ಟೇ ನನಗೆ” ಎಂದು ಉತ್ತರ ಕೊಟ್ಟರು. ಬಳಿಕ ಮಲಕುರವರು ಒಂದು ಗ್ಲಾಸಿನಲ್ಲಿ ಅವರಿಗೆ ಕುಡಿಯಲು ಒಂದು ಪಾನೀಯವನ್ನು ಕೊಟ್ಟರು. ಅದನ್ನು ಕುಡಿದಾಕ್ಷಣ ಅವರ ಭಯ ಹೋಗಿ ಪ್ರಾಣ ಹಾರಿತು.
ಹಝ್ರತ್ ನೂಹ್ರವರ ವಫಾತಿನ ಬಳಿಕ ಮಗ ಹಾಮ್ ನಿಗೆ ಎರಡು ಮಕ್ಕಳು ಹುಟ್ಟಿದವು. ಒಂದು ಗಂಡು ಮತ್ತು ಒಂದು ಹೆಣ್ಣು. ಅದು ಬಹಳ ಕೆಟ್ಟ ರೂಪದಲ್ಲಾಗಿತ್ತು. ಅದ್ದರಿಂದ ಆತ ಒಮ್ಮೆಯೂ ಆ ಮಕ್ಕಳ ಮುಖ ನೋಡುತ್ತಿರಲಿಲ್ಲ. ಮಾತ್ರವಲ್ಲ ಯಾವತ್ತೂ ತನ್ನ ಹತ್ತಿರ ಕೂಡ ಮಾಡುತ್ತಿರಲಿಲ್ಲ. ಆಗ ಆತನ ಪತ್ನಿ ಹೇಳಿದಳಂತೆ. “ನಿಮಗೆ ನಿಮ್ಮ ತಂದೆಯ ಶಾಪ ಮುಟ್ಟಿದೆ” ಎಂದು. ನಂತರ ಇದನ್ನು ಹೆದರಿ ತುಂಬಾ ಸಮಯದಿಂದ ಪತ್ನಿಯ ಜತೆ ಸಂಪರ್ಕಿಸುವುದನ್ನೇ ಬಿಟ್ಟಿದ್ದ. ಮತ್ತೆ ಪುನಃ ಲೈಂಗಿಕವಾಗಿ ಸಂಪರ್ಕ ಮಾಡಿದಾಗ ಆಗಲೂ ಅದೇ ರೀತಿ ಎರಡು ಕುರೂಪಿ ಮಕ್ಕಳು ಜನಿಸಿದರು. ಇದರ ಕೋಪದಿಂದ ಆತ ಅಲ್ಲಿಂದ ಊರುಬಿಟ್ಟು ಹೋದನು.
ವರ್ಷಗಳು ಕಳೆದರೂ ಈ ಬಡಪಾಯಿ ಹಾಮಿನ ಸುಳಿವೇ ಇರಲಿಲ್ಲ. ಒಂದು ದಿನ ಮೊದಲನೆಯ ಎರಡು ಮಕ್ಕಳು ತಂದೆಯನ್ನು ಹುಡುಕುತ್ತಾ ಊರೂರು ಸುತ್ತಾಡಿ ಹೋದರು. ಕೊನೆಗೆ ತಂದೆಯ ಪತ್ತೆಯಾಗದಾಗ ಒಂದು ಸಮುದ್ರ ಕಿನಾರೆಯಲ್ಲಿ ತಂಗಿದರು. ಈ ವೇಳೆ ಆಲ್ಲಿ ಅಣ್ಣ ತಂಗಿಯರಾದ ಅವರಿಬ್ಬರೂ ಪರಸ್ಪರ ಲೈಂಗಿಕ ಸಂಪರ್ಕದಲ್ಲಿ ತೊಡಗಿದರು. ಬಳಿಕ ಅದರಲ್ಲಿ ಮಕ್ಕಳಾಯಿತು. ಕೊನೆಗೆ ಅದೊಂದು ಕುಟುಂಬದಂತೆ ಅಲ್ಲೇ ಸಮುದ್ರ ಕಿನಾರೆಯಲ್ಲಿ ಕಡಲಿನಿಂದ ಮೀನು ಹಿಡಿದು ತಿಂದು ಬದುಕಿ ಜೀವನ ಸಾಗಿಸ ತೊಡಗಿದರು.
ಇತ್ತ ತಂದೆ ಒಂದು ದಿನ ಮನೆಗೆ ಬಂದನು. ಬರುವಾಗ ವರ್ಷಗಳ ಮೊದಲು ಊರು ಬಿಟ್ಟ ತನ್ನ ಎರಡು ಮಕ್ಕಳ ಕತೆ ತಿಳಿದಾಗ ಆತ ಬಹಳ ದುಃಖಿತನಾದ. ಆ ವೇಳೆಯಲ್ಲಿ ಪತ್ನಿ ಕೂಡ ಮರಣಹೊಂದಿದ್ದಳು.
ಬಳಿಕ ತಂದೆಯ ನಿರ್ದೇಶದಂತೆ ಎರಡನೆಯ ಹೆರಿಗೆಯ ಎರಡು ಮಕ್ಕಳು, ಈ ಮೊದಲೇ ಊರು ಬಿಟ್ಟುಹೋದ ತಮ್ಮ ಸಹೋದರ ಸಹೋದರಿಯರನ್ನು ಹುಡುಕಿ ಹೋದರು. ಕೊನೆಗೆ ಅವರು ವಾಸವಿರುವ ಕಡಲ ಕಿನಾರೆಗೆ ತಲುಪಿದರು. ಇವರು ಕೂಡ ಅಲ್ಲೇ ಅವರೊಂದಿಗೆ ವಾಸ ಮಾಡಲು ಶುರುಮಾಡಿದರು. ಬಳಿಕ ಇವರು ಅಣ್ಣ, ಅಕ್ಜ, ತಮ್ಮ, ತಂಗಿ ಇತ್ಯಾದಿ ಯಾವುದನ್ನೂ ಗಮನಿಸದೆ ಪರಸ್ಪರ ಲೈಂಗಿಕವಾಗಿ ಸಂಪರ್ಕ ಮಾಡತೊಡಗಿದರು. ಬಳಿಕ ಅವರ ಸಂತಾನ ಅಲ್ಲಿ ಹರಡಿತು. ನೀಗ್ರೋ, ಆಫ್ರಿಕ, ಸುಡಾನ್ ಅಂತೆಯೇ ಏಶ್ಯಾ ಖಂಡದ ಸಿಂದ್ ಪ್ರಾಂತ್ಯದಲ್ಲಿರುವವರು ಈ ಪರಂಪರೆಯಲ್ಲಿ ಬಂದವರು. ಆದ್ದರಿಂದ ಈ ಪ್ರದೇಶದಲ್ಲಿ ಜನಿಸುವವರ ಬಣ್ಣ ಕೂಡ ಕಪ್ಪಾಗಿರುತ್ತದೆ.
✍🏻ಯೂಸುಫ್ ನಬ್ಹಾನಿ ಕುಕ್ಕಾಜೆ
✍🏻ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ.
ಮುಂದುವರಿಯುವುದು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.