(www.vknews.in) : ಬಿಹಾರದ ಭಾಗಲ್ಪುರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಭೋಜ್ಪುರಿ ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆಯಾಗಿದ್ದಾರೆ. ಅಮೃತಾ ತನ್ನ ಸೀರೆಯಿಂದ ತಮ್ಮ ನಿವಾಸದ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ.
ಅಮೃತಾ ಪಾಂಡೆ ಅವರು ತನ್ನ ಪತಿಯೊಂದಿಗೆ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ ಬಿಹಾರದ ಭಾಗಲ್ಪುರಕ್ಕೆ ಭೇಟಿ ನೀಡಿದ್ದರು. ಆದರೆ ಭಾಗಲ್ಪುರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಅಮೃತಾ ಪಾಂಡೆ ನೇಣಿಗೆ ಶರಣಾಗಿದ್ದಾರೆ.
ಅಮೃತಾ ಪಾಂಡೆ ಅವರು ಅಪಾರ್ಟ್ಮೆಂಟ್ನಲ್ಲಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಕೆಲವೇ ಗಂಟೆ ಮುಂಚೆ ಅಮೃತಾ ಪಾಂಡೆ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಾಕಿದ್ದು, ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಾಕಿದ ಮೇಲೆ ತನ್ನ ರೂಮಿಗೆ ಹೋಗಿ ನೇಣಿಗೆ ಶರಣಾಗಿದ್ದಾರೆ.
ಆಕೆಯ ಅಪಾರ್ಟ್ಮೆಂಟ್ನಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲವಾದರೂ, ಅಮೃತ ಪಾಂಡೆ ಅವರು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ “ಎರಡು ದೋಣಿಗಳಲ್ಲಿ ಜೀವನ ಸಾಗುತ್ತಿತ್ತು, ನಾವು ದೋಣಿಯನ್ನು ಮುಳುಗಿಸಿ ಪ್ರಯಾಣವನ್ನು ಸುಲಭಗೊಳಿಸಿದೆವು” ಎನ್ನುವ ಹಿಂದಿ ಸಾಲುಗಳನ್ನು ಹಾಕಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.