ಉಪ್ಪಳ () : ಗಲ್ಫ್ ವ್ಯಕ್ತಿಯೊಬ್ಬರ ಮನೆಯಲ್ಲಿ 30000 ರೂಪಾಯಿ ಹಾಗೂ ಐದು ಪವನ್ ಚಿನ್ನಾಭರಣ ಕಳ್ಳತನವಾಗಿದೆ. ಉಪ್ಪಳದ ಪಟವಾಡಿ ರಸ್ತೆಯ ಮುಹಮ್ಮದಲಿ ಬೀದಿಯಲ್ಲಿರುವ ಅಬ್ದುಲ್ ರಝಾಕ್ ಎಂಬವರ ಮನೆಯಲ್ಲಿ ದರೋಡೆ ನಡೆದಿದೆ. ಮಾ.18ರಂದು ಮನೆಯ ಮಾಲೀಕರು ಹಾಗೂ ಅವರ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಗಲ್ಫ್ಗೆ ತೆರಳಿದ್ದರು.
ಭಾನುವಾರ ಮನೆಯ ಹಿಂಬಾಗಿಲು ತೆರೆದಿರುವುದನ್ನು ನೆರೆಮನೆಯ ಯೂಸುಫ್ ಕಂಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದಾಗ ಮನೆಯೊಳಗಿದ್ದ ಕಪಾಟುಗಳು ತೆರೆದಿರುವುದು ಕಂಡು ಬಂದಿದೆ. ನಂತರ ಮನೆಯವರನ್ನು ಸಂಪರ್ಕಿಸಿದಾಗ ಕಬೋರ್ಡ್ ನಲ್ಲಿದ್ದ ಐದು ಪವನ್ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಾಪತ್ತೆಯಾಗಿರುವುದು ಸ್ಪಷ್ಟವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.