(www.vknews.in) ; ರಾಜ್ಯದಲ್ಲೇ ಹೆಸರುವಾಸಿ ಬಾಟಲ್ ಕುಡಿಯುವ ನೀರಿನ ಸಂಸ್ಥೆ ಬಿಂದು ಮೇಘ ಇಂಡಸ್ಟ್ರೀಸ್ ನರಿಮೊಗರು ಪುತ್ತೂರು ರವರ ವಾರ್ಷಿಕ ಬೋರ್ ವೆಲ್ ರಿಫ್ರೆಶ್ ಹೆಸರಿನಲ್ಲಿ ಹೊಸ ಬೋರ್ ವೆಲ್ ಕೊರೆತದಲ್ಲಿ ಅಧಿಕಾರಿಗಳು ಕೂಡಾ ಶಾಮೀಲು ಆಗಿದ್ದಾರೆಯೇ ಎನ್ನುವ ಸಂಶಯ ಸಾರ್ವಜನಿಕ ರಲ್ಲಿ ಮೂಡಿದೆ.
ನರಿಮೊಗರು ಗ್ರಾಮದ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿರುವಾಗ ಮೇಘ ಇಂಡಸ್ಟ್ರೀಸ್ ಬಿಂದು ಫ್ಯಾಕ್ಟರಿಯಲ್ಲಿಯಲ್ಲಿ ಅಕ್ರಮವಾಗಿ ಕೊರೆಯಲಾಗುತ್ತಿರುವ ಕೊಳವೆ ಬಾವಿಗಳ ಬಗ್ಗೆ ಎಲ್ಲಾ ವರ್ಷವೂ ಸಾರ್ವಜನಿಕರ ಪ್ರತಿಭಟನೆ ಸಮಯದಲ್ಲಿ ಅಧಿಕಾರಿಗಳು ಬಂದು ದಾಖಲೆ ಪರಿಶೀಲನೆ ಮಾಡುವುದು ಸ್ವಾಭಾವಿಕ ವಾಗಿ ಮಾರ್ಪಟ್ಟಿದೆ
ಈ ದಾಖಲೆ ಪರಿಶೀಲನೆ ನಡೆದ ನಾಟಕವು ಮುಂದಿನ ವರ್ಷದಲ್ಲಿ ಇದೇ ಸಂಸ್ಥೆಗೆ ಪುನಹ ಅನುಮತಿ ಕೊಡುವಲ್ಲಿ ಬಂದು ತಲುಪುತ್ತಿರುವುದು ವಿಷಾದಣಿಯವಾಗಿದ್ದು, ಅಲ್ಲಿಯ ಜನ ಸಾಮಾನ್ಯರನ್ನು ಅಧಿಕಾರಿಗಳು ಅಣಕಿಸುತ್ತಾ ಇದ್ದಾರೆ ಎನ್ನುವುದು ಸಾರ್ವಜನಿಕರು ಮಾತನಾಡಲು ಶುರುಮಾಡಿದ್ದಾರೆ.
ಎಲ್ಲಾ ವರ್ಷದಂತೆ ಈ ವರ್ಷವೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಹೆಸರಾಂತ ಸಂಸ್ಥೆಯಾಗಿರುವ ಮೇಘ ಇಂಡಸ್ಟ್ರೀಸ್ ಬಿಂದು ಕಂಪನಿಯಲ್ಲಿ ಅಕ್ರಮವಾಗಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ . ಸಾರ್ವಜನಿಕರು ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರೂ ಕೂಡ ಅದನ್ನೆಲ್ಲ ಗಾಳಿಗೆ ತೂರಿ ರಾಜಾರೋಷವಾಗಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಬೋರ್ ರೀ ಫ್ರೆಶ್ ಎಂಬ ಅನುಮತಿಯನ್ನು ಪಡೆದು ಎರಡೆರಡು ಬೋರ್ ವೆಲ್ ಗಾಡಿಯನ್ನು ತರಿಸಿ ಹೊಸತಾಗಿ ಕೊಳವೆಬಾವಿಯನ್ನು ಕೊರೆದು ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಇಂದು ಮತ್ತೊಮ್ಮೆ ಎಚ್ಚೆತ್ತ ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾದ(DC) ಮುಲ್ಲೈ ಮುಹಿಲನ್ ,ತಹಶೀಲ್ದಾರ್ ಪುತ್ತೂರು ,ಪುತ್ತೂರು ಸಹಾಯಕ ಆಯುಕ್ತರು ,ಏಕ್ಸೆಕ್ಯೂಟಿವ್ ಆಫೀಸರ್ (EO) ,ರೈತ ಸಂಘದ ಜಿಲ್ಲಾಧ್ಯಕ್ಷರಾದ ಅಮರನಾಥ ಆಳ್ವ ಕರ್ನೂರ್ ಗುತ್ತು ಮುಂತಾದವರುಗಳಿಗೆ ದೂರು ಸಲ್ಲಿಸಿದರು. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮೇಘ ಕಂಪನಿಗೆ ಫೋನ್ ಮಾಡಿ ಕೊಳವೆ ಬಾವಿಯ ಕೆಲಸವನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿದ್ದಾರೆ . ಇದರ ಬಗ್ಗೆ ತನಿಖೆ ಮಾಡಿ ಇನ್ನು ಮುಂದೆ ಯಾವುದೇ ಕೊಳವೆ ಬಾವಿಯನ್ನು ಕೊರೆಯಬಾರದೆಂದು ರೈತ ಸಂಘದ ಜಿಲ್ಲಾ ಅಧ್ಯಕ್ಷರು ಮತ್ತು ಸಾರ್ವಜನಿಕರು ಎಚ್ಚರಿಕೆಯನ್ನು ಹಾಗೂ ಪ್ರತಿಭಟನೆಯ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಆದರೆ ವರ್ಷಾಂಪ್ರತಿ ನಡೆಯುವ ಪ್ರತಿಭಟನೆ,ಅಧಿಕಾರಿಗಳ ಎಚ್ಚರಿಕೆಗಳಿಗೆ ಸೊಪ್ಪು ಹಾಕದ ಮೇಘ ಇಂಡಸ್ಟ್ರೀಸ್ ನವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸದೆ ಎಚ್ಚರಿಕೆಗೆ ಸೀಮಿತ ಗೊಳಿಸುತ್ತಿರುವುದರ ಕಾರಣವೇನು?
ಈ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕಿದೆ..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.