(www.vknews.in) : ಮಲಕೊಬ್ಬರಿಂದ ಪತ್ನಿಯಾಗಿ ಲೈಂಗಿಕ ಸಂಪರ್ಕ ಮಾಡಲು ಕರೆ ಬಂದಾಗ ಕೂಡಲೇ ಅವರು ಮನೆಗೆ ಹೋದರು. ಅದರೆ ಅಲ್ಲಿ ತಲುಪಿದಾಗ ಪುನಃ ಧೈರ್ಯ ಕಡಿಮೆಯಾಯಿತು. ಬೆಳಗಾಗುವಾಗ ಅವರ ಮುಖದಲ್ಲಿ ಒಂದು ಪ್ರಕಾಶ ಹೊರ ಹೊಮ್ಮಿದಂತೆ ಭಾಸವಾಗುತ್ತಿತ್ತು.
ನಮ್ರೂದನ ವಿಗ್ರಹಗಳ ಶುಶ್ರೂಷೆ ಮಾಡುತ್ತಿದ್ದ ತಾರಹ್ರವರು ಯಾವಾಗಲೂ ಅವುಗಳಿಗೆ ಆಹಾರ ಇಟ್ಟು ಸಂಜೆಯಾಗುವಾಗ ಮನೆಗೆ ಬರುವುದು ವಾಡಿಕೆಯಾಗಿತ್ತು. ರಾತ್ರಿ ಶೈತಾನರು ಬಂದು ಅದನ್ನು ತಿಂದು ಹೋಗುತ್ತಿದ್ದರು. ಒಂದು ದಿನ ಶೈತಾನರ ಗುಂಪು ಬರುವಾಗ ಅಲ್ಲಿ ಮಲಕುಗಳ ಒಂದು ಸಂಘ ಹಾಜರಾಗಿತ್ತು. ಮಲಕುಗಳನ್ನು ಕಂಡಾಗ ಶೈತಾನರು ಓಡಿ ಹೋದರು. ತಾರಹ್ರವರು ತಂದಿಟ್ಟಿದ್ದ ಆಹಾರ ತಿನ್ನದೆ ಹಾಗೆಯೇ ಉಳಿಯಿತು.
ಮರುದಿನ ತಾರಹ್ರವರು ಹೋದಾಗ ಆಹಾರವು ಹಾಗೆಯೇ ಉಳಿದಿರುವುದು ಕಂಡಾಗ ಅವರಿಗೆ “ಇದು ನಾನೇನೋ ವಿಗ್ರಹಗಳಿಗೆ ತಪ್ಪು ಮಾಡಿದ ಕಾರಣದಿಂದ ಹೀಗೆ ಆಗಿರಬಹುದು” ಎಂದು ಭಾವಿಸಿ ಬೇಸರದಿಂದ ಅಂದು ರಾತ್ರಿ ಮನೆಗೆ ಹೋಗದೆ ಅಲ್ಲೇ ತಂಗಿದರು. ನಿಜವಾಗಿ ತಾರಹ್ರವರಿಗೆ ಇದು ಶೈತಾನರ ತಿಂದು ಹೋಗುವುದೆಂದು ತಿಳಿದಿರಲಿಲ್ಲ. ಅವರ ಭಾವನೆ ವಿಗ್ರಹಗಳು ತಿನ್ನುವುದೆಂದಾಗಿತ್ತು. ಇತ್ತ ಪತ್ನಿಯು ಪತಿಯು ಮನೆಗೆ ಬಾರದೆ ತಡವಾದಾಗ ಅವರನ್ನು ಹುಡುಕಿ ಅಲ್ಲಿಗೆ ಹೋದರು. ಒಟ್ಟಿನಲ್ಲಿ ಆ ರಾತ್ರಿ ಪತಿಯನ್ನು ಹುಡುಕಿ ಹೋದ ಪತ್ನಿಯೂ ಪತಿಯೊಂದಿಗೆ ಅಲ್ಲೇ ತಂಗಿದರು.
ಮಧ್ಯ ರಾತ್ರಿಯಾದಾಗ ತಾರಹ್ರಿಗೆ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಕೆಂಬ ಅಭಿಲಾಷೆ ಹುಟ್ಟಿತು. ಆಚೀಚೆ ನೋಡದೆ ಅಲ್ಲೇ ಲೈಂಗಿಕ ಸಂಪರ್ಕ ಮಾಡಿದರು. ಒಂದೇ ಸಂಪರ್ಕದಲ್ಲಿ ಪತ್ನಿ ಗರ್ಭಿಣಿಯಾದರು. ನಿಮಿಷದಲ್ಲೇ ಎಲ್ಲಾ ವಿಗ್ರಹಗಳು ತಲೆಕೆಳಗಾಗಿ ಬಿದ್ದವು. ಮಾತ್ರವಲ್ಲ ಆಕಾಶದಲ್ಲಿ ಬಹಳ ಪ್ರಕಾಶಮಾನವಾದ ಒಂದು ನಕ್ಷತ್ರ ಕೂಡ ಹೊಸತಾಗಿ ಉದಯವಾಯಿತು. ಇಡೀ ಜಗತ್ತೇ ಇದನ್ನು ನೋಡಿದಾಗ ಪರಿಭ್ರಾಂತರಾದರು. ನಮ್ರೂದನು ಕೂಡ ಆ ನಕ್ಷತ್ರವನ್ನು ನೋಡಿ ಬೆರಗಾದನು. ಕೂಡಲೇ ಖ್ಯಾತ ಜ್ಯೋತಿಷ್ಯರನ್ನು ಸಂಪರ್ಕಿಸಿ ಇದರ ಬಗ್ಗೆ ವಿವರಣೆ ಕೇಳಿದನು. ಎಲ್ಲರೂ ಹೇಳಿದರು. “ಈ ಹೊಸ ನಕ್ಷತ್ರ ಈ ಜಗತ್ತಿನ ದಿಶೆ ಬದಲಾಯಿಸುವ ಒಂದು ಮಗುವಿನ ಜನನದ ಸೂಚನೆಯಾಗಿದೆ. ಮಗುವಿನ ತಾಯಿ ಈಗಾಗಲೇ ಗರ್ಭ ಧರಿಸಿಯಾಗಿದೆ. ಇದರಿಂದ ನಿಮ್ಮ ಆಡಳಿತ ಕೊನೆಗೊಳ್ಳಲಿದೆ” ಎಂದು.
ಪತ್ನಿ ಯಾರಿಗೂ ತಿಳಿಯದೆ ಒಂಬತ್ತು ತಿಂಗಳ ಗರ್ಭಿಣಿಯಾಗಿ ಹೆರಿಗೆ ಹತ್ತಿರವಾದಾಗ ಪತಿಯಲ್ಲಿ ಹೇಳಿದರು. “ನಾನು ಇವತ್ತು ವಿಗ್ರಹಾಲಯಕ್ಕೆ ಹೋಗಿ ನನ್ನ ಹೆರಿಗೆ ಸುಖಮಯವಾಗಲು ಪ್ರಾರ್ಥನೆ ಮಾಡಿ ಬರುತ್ತೇನೆ” ಎಂದು. ಅದಕ್ಕೆ ಪತಿ ತಾರಹ್ರವರು ಅನುಮತಿ ಕೊಟ್ಟರು. ಅವರು ವಿಗ್ರಹಾರಾಧನಾಲಯಕ್ಕೆ ಪ್ರವೇಶಿಸಿದ ಕೂಡಲೇ ವಿಗ್ರಹಗಳು ತಲೆಕೆಳಗಾಗಿ ಬಿದ್ದವು. ಆ ಕಾರಣದಿಂದ ಆ ಮಹಿಳೆಗೆ ಅಲ್ಲಿಂದ ಹೊರಬರಲು ಭಯವಾಯಿತು. ಯಾರೂ ಹೊರಗೆ ಇಲ್ಲದ ಸಮಯ ನೋಡಿ ಹೊರ ಬರುವಾಗ ನಮ್ರೂದನು ಅವನ ಸಹಚರರೊಂದಿಗೆ ದಾರಿಯಲ್ಲಿ ಗಸ್ತು ತಿರುಗುತ್ತಿದ್ದರು. ರಾತ್ರಿ ವೇಳೆ ಮಹಿಳೆಯೊಬ್ಬಳು ಒಂಟಿಯಾಗಿ ಹೋಗುವುದನ್ನು ಕಂಡಾಗ ನಮ್ರೂದನು ಕೇಳಿದನು. “ನೀನು ಯಾರು” ಆಗ ಆ ಮಹಿಳೆ ಹೇಳಿದರು. “ನಾನು ನಿಮ್ಮ ದರ್ಬಾರಿನಲ್ಲಿ ನಿಮಗೆ ಆಪ್ತನಾಗಿರುವ ತಾರಹ್ರವರ ಪತ್ನಿ ” ಎಂದು. ಆಗ ನಮ್ರೂದನು ಏನೂ ಶಿಕ್ಷೆ ಕೊಡದೆ ಹಾಗೆಯೇ ಬಿಟ್ಟನು.
ಬಳಿಕ ಅವರು ಮನೆಗೆ ಹೋದರು. ಮನೆ ತಲುಪಿದಾಗ ಹೆರಿಗೆ ಬೇನೆ ಶುರುವಾಯಿತು. ಅಷ್ಟರಲ್ಲಿ ಅಲ್ಲಾಹನ ಮಲಕ್ ಒಬ್ಬರು ಬಂದು ಹೇಳಿದರು. “ಭಯಪಡಬೇಡಿ. ನಿಮಗೆ ಹೆರಿಗೆ ಮಾಡಲು ಒಂದು ಜಾಗ ಸಿದ್ಧವಾಗಿದೆ. ನೀವು ನನ್ನೊಂದಿಗೆ ಬನ್ನಿರಿ” ಎಂದು. ಮಲಕ್ರವರು ಹೇಳಿದಂತೆ ಅವರನ್ನು ಹಿಂಬಾಲಿಸಿ ನಡೆದರು. ಸ್ವಲ್ಪ ಹೋದಾಗ ಒಂದು ದೊಡ್ಡ ಗುಹೆ ಕಂಡಿತು. ಮಲಕವರು ಅದರೊಳಗೆ ಹೋಗಲು ಇವರಲ್ಲಿ ಹೇಳಿದರು. ಸುಬ್ಹಾನಲ್ಲಾಹ್! ಅಲ್ಲಿ ಹೋಗಿ ನೋಡುವಾಗ ಸುಸಜ್ಜಿತವಾದ ಒಂದು ಹೆರಿಗೆ ಕೊಠಡಿಯಾಗಿತ್ತು. ಒಳ ಪ್ರವೇಶಿಸಿದ ಇವರು ನಿಮಿಷದಲ್ಲೇ ಒಂದು ಗಂಡು ಮಗುವಿಗೆ ಜನ್ಮ ನೀಡಿದರು.
ಅದು ಒಂದು ಮುಹರ್ರಮ್ ತಿಂಗಳ ಹತ್ತರಂದು ರಾತ್ರಿಯಾಗಿತ್ತು. ಈ ಗುಹೆ ಹಝ್ರತ್ ನೂಹ್ ಮತ್ತು ಹಝ್ರತ್ ಇದ್ರೀಸ್ ರವರ ಹೆರಿಗೆಯಾದ ಬಹಳ ಬರಕತಿನ ಗುಹೆಯಾಗಿತ್ತು. ಮಗು ಹುಟ್ಟಿದ ಕೂಡಲೇ ಹಝ್ರತ್ ಜಿಬ್ರೀಲರು ಬಂದು ಮಗುವಿನ ಹೊಕ್ಕುಳನ್ನು ತುಂಡು ಮಾಡಿದರು. ಬಳಿಕ ಎರಡು ಕಿವಿಗಳಲ್ಲಿ ಬಾಂಗು ಮತ್ತು ಇಖಾಮತ್ ಕೊಟ್ಟರು. ಅನಂತರ ಒಳ್ಳೆಯ ಬಿಳಿ ಬಟ್ಟೆ ತೊಡಿಸಿ ಮಗುವನ್ನು ಅಲ್ಲೇ ಬಿಟ್ಟು ಹಝ್ರತ್ ಜಿಬ್ರೀಲರು ಈ ಮಹಿಳೆಯನ್ನು ಅವರ ಮನೆಗೆ ಕರಕೊಂಡು ಹೋದರು. ಹೋಗುವಾಗ ಮಹಿಳೆಗೆ ಹೆರಿಗೆಯಾದ ಯಾವುದೇ ಲಕ್ಷಣ ಅಥವಾ ಸುಸ್ತು ಇರಲಿಲ್ಲ. ಮಗು ಯಾರೂ ಇಲ್ಲದ ಗುಹೆಯಲ್ಲಿ ಏಕಾಂತವಾಯಿತು.
✍🏻 ಯೂಸುಫ್ ನಬ್ಹಾನಿ, ಕುಕ್ಕಾಜೆ
ಸಂಗ್ರಹ: ಇಮಾಮ್ ನುಮೈರಿಯ ನಿಹಾಯತುಲ್ ಅರಬ್ ಎಂಬ ಗ್ರಂಥದಿಂದ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.