ಈದ್ ಎಂದರೆ ಅದು ಸಂಭ್ರಮ, ಈದ್ ಎಂದರೆ ಅದು ಸಂಗಮ, ಈದ್ ಎಂದರೆ ಅದು ಸಡಗರ, ಈದ್ ಎಂದರೆ ಅದು ಸಂತಸ, ಈದ್ ಎಂದರೆ ಅದು ಸಾಮರಸ್ಯ ಈದ್ ಎಂದರೆ ಅದು ಸಮಭಾವ, ಈದ್ ಎಂದರೆ ಅದು ಸಮಾಧಾನ, ಈದ್ ಎಂದರೆ ಅದು ಸಮಚಿತ್ತ, ಈದ್ ಎಂದರೆ ಅದು ಸಹಾಯ ಹಸ್ತ ಈದ್ ಎಂದರೆ ಅದು ಸಮನ್ವಯತೆ ಈದ್ ಎಂದರೆ ಅದು ಸಕ್ರಿಯತೆ, ಈದ್ ಎಂದರೆ ಅದು ಸರಳತೆ, ಈದ್ ಎಂದರೆ ಅದು ಸಂಪನ್ನತೆ, ಈದ್ ಎಂದರೆ ಅದು ಸಹಿಷ್ಣುತೆ ಈದ್ ಎಂದರೆ ಅದು ಸಮರ್ಪಣೆ, ಈದ್ ಎಂದರೆ ಅದು ಸಂಭಾಷಣೆ, ಈದ್ ಎಂದರೆ ಅದು ಸಮಾಲೋಚನೆ ಈದ್ ಎಂದರೆ ಅದು ಸಂರಕ್ಷಣೆ, ಈದ್ ಎಂದರೆ ಅದು ಸಹಕಾರ ಈದ್ ಎಂದರೆ ಅದು ಸಾಕ್ಷಾತ್ಕಾರ, ಈದ್ ಎಂದರೆ ಅದು ಸಂಚಾರ, ಈದ್ ಎಂದರೆ ಅದು ಸದ್ಭಳಕೆ, ಈದ್ ಎಂದರೆ ಅದು ಸಚ್ಚಾರಿತ್ರ್ಯ, ಈದ್ ಎಂದರೆ ಅದು ಕೆಡುಕಿನ ಸಂಹಾರ, ಈದ್ ಎಂದರೆ ಅದು ಒಳಿತಿನ ಸಂಗ್ರಹ, ಈದ್ ಎಂದರೆ ಅದು ಇದೆಲ್ಲದರ ಸದುಪಯೋಗ! ಹೌದು. ಈ ಎಲ್ಲಾ ಸದ್ಗುಣಗಳ ಸಮಾಹಾರ ವೇ ಈದ್.
(www.vknews.in) : ಈದ್ ಆಚರಣೆಗೆ ನಿಮಿತ್ತರಾದ ಇಬ್ರಾಹಿಂ ,ಇಸ್ಮಾಯಿಲ್,ಹಾಜರ ಅಲೈಹಿಮುಸ್ಸಲಾಂ ಇವರ ಸ್ಮರಣೆಗಾಗಿ ನಡೆಯುವ ಹಜ್ ನಲ್ಲಿ ಕೂಡಾ ಈ ಸದ್ಗುಣಗಳಿಗೇ ಅಗ್ರ ಸ್ಥಾನ.. ಬರೀ ಬಿರಿಯಾಣಿ ಹೊಸ ಧಿರಿಸಿಗೆ ಸೀಮಿತವಾಗಬಾರದು ನಮ್ಮ ಈದ್. ಜಾತಿ ಮತ ಭೇದ ವಿಲ್ಲದೇ ಪ್ರತೀ ಪ್ರಜೆಗಳಿಗೂ ಶಾಂತಿ ಸಹಬಾಳ್ವೆ ಒಳಿತನ್ನು ಬಯಸುವ ಈದ್ ಆಗಬೇಕು ನಮ್ಮದು.
ಇಸ್ಲಾಂ ಧರ್ಮ ಪ್ರತೀಯೊಂದು ವೈಚಾರಿಕತೆಗಳಲ್ಲೂ ಕೂಡ ವಿಭಿನ್ನತೆ ಹೊಂದಿರುವ ಧರ್ಮವಾಗಿದೆ.ವಿಭಿನ್ನ ಎಂದರೆ ಕೇವಲ ಧಾರ್ಮಿಕ ಕಾರ್ಯಗಳಲ್ಲಿ ಮಾತ್ರವಲ್ಲ ಇದರ ಆಶಯಗಳಲ್ಲಿ, ಆಚಾರ-ವಿಚಾರಗಳಲ್ಲಿ ಮತ್ತು ಸಂದೇಶಗಳಲ್ಲಿ ಪ್ರಭುದ್ದತೆ ಸಾದಿಸಿರುವುದರಿಂದಲೇ ಗತ ಕಾಲದಿಂದ ಹಿಡಿದು ಭವಿಷ್ಯದವರೆಗೂ ಜನರನ್ನು ಹೆಚ್ಚು ಸ್ವಾದೀನಗೊಳಿಸಿದ ಧರ್ಮವಾಗಿ ಇಸ್ಲಾಂ ಬೆಳೆಯುತ್ತಲೇ ಇದೆ. ಪ್ರಸ್ತುತ ವಿಷಯವಾಗಿರುವ ಬಕ್ರೀದ್ ಹಬ್ಬವು ಇಸ್ಲಾಂ ಧರ್ಮದ ಅತೀ ಮುಖ್ಯ ಹಬ್ಬಗಳಲ್ಲಿ ಒಂದಾಗಿದೆ ಬಕ್ರೀದ್ ಈ ಹಬ್ಬದ ಸಾಂಸ್ಕೃತಿಕ ಸಂದೇಶದ ಅಧ್ಯಯನವನ್ನು ಈ ಲೇಖನದ ಮೂಲಕ ವಿಸ್ತರಿಸುತ್ತಿದ್ದೇನೆ.ತ್ಯಾಗ ಬಲಿದಾನದ ಸಂದೇಶವಾಗಿದೆ ಬಕ್ರೀದ್ ಹಬ್ಬದ ಮುಖ್ಯ ಪ್ರಮೇಯ.
ಬಕ್ರೀದ್ ವಿವಿಧ ನಾಮಗಳಿಂದ ಕರೆಯಲ್ಪಡುತ್ತದೆ ಆದರೆ ಇದರ ಮೂಲ ಪದವನ್ನು ಇಸ್ಲಾಂ ಧರ್ಮಗ್ರಂಥವಾಗಿರುವ ಕುರಾನ್ ಹೇಳಿರುವುದು “يوم الحخ الاكبر” ಹದೀಸ್ ಗ್ರಂಥಗಳು,ಅರಬಿ ಸಾಹಿತ್ಯ ಗ್ರಂಥಗಳು, ಅರಬ್ ಪ್ರಾದೇಶಿಕ ಭಾಷೆಗಳು ವಿವಿಧ ಹೆಸರುಗಳಲ್ಲಿ ಕರೆಯಲ್ಪಡುತ್ತಿದೆ “ಯಾವ್ಮು-ಅನ್-ನಹರ್ “,”ಈದ್ -ಅಲ್ -ಅಕ್ಬರ್ “ಮತ್ತು “ಈದ್ -ಅಲ್ -ಹಜ್ಜಾಜ್” ಹೀಗೆ ಜಾಗತಿಕ ಮಟ್ಟದಲ್ಲಿ ವಿವಿಧ ಹೆಸರುಗಳಿಂದ ಕರೆಯಲ್ಪಟ್ಟಿದ್ದರೆ ಭಾರತದ ಉಪಖಂಡಗಳಲ್ಲಿ ಬಕ್ರೀದ್,ಮಲಯ್ ಮತ್ತು ಕುರ್ಬಾನ್ ಎಂಬ ಹೆಸರಿಂದ ಕರೆಯಲ್ಪಡುತ್ತದೆ.ಬಕ್ರೀದ್ ಎಂಬ ಪದದ ಮೂಲ ಬಕರ್ -ಈದ್ ನಿಂದ ಸಂಧಿಯಾಗಿದೆ ಅಂದರೆ ಜಾನುವಾರುಗಳ ಬಲಿ ಕೊಡುವ ಹಬ್ಬ ಎಂದು ಅರ್ಥವನ್ನು ಹೊಂದಿದೆ. ಒಟ್ಟು ಜಾಗತಿಕ ಮಟ್ಟದಲ್ಲಿ ಹೆಸರುಗಳ ಈ ಹಬ್ಬದ ಅರ್ಥವೆಲ್ಲವೂ ಪ್ರಮೇಯವನ್ನು ಆಶ್ರಯಿಸಿಯಾಗಿದೆ ಎಂಬುದರಲ್ಲಿ ಪದದ ಅರ್ಥವನ್ನು ಚರ್ಚಿಸುವಾಗ ತಿಳಿಯುತ್ತದೆ.
ಬಕ್ರೀದ್ ಆಚರಣೆ : ಚಂದ್ರಮಾನದ ಕೊನೆಯ ತಿಂಗಳಾದ ದುಲ್-ಹಿಜ್ಜ್ (ಹಿಜರಿ ಕ್ಯಾಲಂಡೆರ್ ನ ಕೊನೆಯ ತಿಂಗಳು )ನ 10 ರಂದು ಆಗಿದೆ ಬಕ್ರೀದ್ ಹಬ್ಬದ ಪ್ರಾರಂಭ ಅಲ್ಲಿಂದ 13 ನೇ ದಿನದವರೆಗೂ ಬಕ್ರೀದ್ ಆಚರಣೆಯಿದೆ ಈ ದಿನಗಳನ್ನು “ಅಯ್ಯಾಮ್ ತಷ್ರೀಕ್”ಎಂದು ಧಾರ್ಮಿಕ ಗ್ರಂಥಗಳು ಪ್ರತಿಪಾದಿಸುತ್ತದೆ.ಈ ಹಬ್ಬ ಹಝ್ರತ್ ಇಬ್ರಾಹಿಂ (ಅ. ಸ) ರವರ ಅವಿಸ್ಮರಣೀಯ ಮಾಡುವ ಪೂರ್ಣ ರೂಪವಾಗಿದೆ. ಅನುಸ್ಮರಣೆ ಅನಿಸ್ಲಾಮಿಕ ಎಂಬ ವಾದಕ್ಕೆ ಪ್ರಾಥಮಿಕ ಉತ್ತರ ಈ ಹಬ್ಬವಾಗಿದೆ. ತ್ಯಾಗದ ಪ್ರತೀಕವಾಗಿದ್ದಾರೆ ಹಝ್ರತ್ ಇಬ್ರಾಹಿಂ (ಅ. ಸ) ರವರು ಪರಿಶುದ್ಧ ಕುರುಆನ್ ವರ್ಣಿಸಿದ್ದು “ಖಂಡಿತ ಇಬ್ರಾಹೀಮರು ಅಲ್ಲಾಹನ ಅಜ್ಞಾನುವರ್ತಿಯಾದ, ಸನ್ಮಾರ್ಗದಲ್ಲಿ (ತಪ್ಪದೆ) ನೆಲೆಗೊಳ್ಳುವ ಒಂದು ಸಮುದಾಯವಾಗಿದ್ದರು.
ಅವರು ಮುಶ್ರಿಕರ ಕೂಟದವರಾಗಿರಲಿಲ್ಲ.”(ಅಧ್ಯಾಯ: 16 ಶ್ಲೋಕ: 120) ಈ ಸೂಕ್ತವನ್ನು ಕುರುಆನ್ ವ್ಯಾಖ್ಯಾನಕರಾರು ವಿಶ್ಲೇಷಣೆ ಮಾಡಿದ್ದು “ಒಂದು ಸಮುದಾಯದ ಅಂದರೆ ಸಾವಿರಾರು ಅಥವಾ ಲಕ್ಷಗಟ್ಟಲೆ ಅಥವಾ ಕೋಟಿಗಟ್ಟಲೆ ಜನರ ಕೂಟಕ್ಕಾಗಿದೆ ಸಮುದಾಯವೆಂದು ಹೇಳುವುದು ಆದರೆ ಈ ಸೂಕ್ತದಲ್ಲಿ ಅಲ್ಲಾಹನು ವಿಶೇಷಣೆಗೊಳಿಸಿದ್ದು ಇಬ್ರಾಹಿಮ್ (ಅ. ಸ ) ಏಕವ್ಯಕ್ತಿಯನ್ನು ಸಮುದಾಯವೆಂದು ಯಾಕಾಗಿ ಕರಿಯಲ್ಪಟ್ಟಿತು ಎಂಬುದರ ಕುರಿತು ವಿಶ್ಲೇಷಣೆಯನ್ನು ಕುರಾನ್ ವ್ಯಾಖ್ಯಾನಕಾರರು ಹೇಳಿದ್ದು ಒಂದು ಸಮೂಹ ಪಡುವಂತಹ ಕಷ್ಟವನ್ನಾಗಿದೆ,ತ್ಯಾಗವನ್ನಾಗಿದೆ ಇಸ್ಲಾಮಿನ ಪ್ರಭೋದನೆಯ ಸಂದರ್ಭದಲ್ಲಿ ಇಬ್ರಾಹಿಂ (ಅ. ಸ )ರು ಅನುಭವಿಸಿದ್ದು. ಇದರ ಅವಿಸ್ಮರಣೆಯ ಆರಾಧನೆಯಾಗಿದೆ ಹಜ್ಜ್ ಈ ಕಾರಣದಿಂದಲೇ ಹಜ್ಜ್ ನಿರ್ವಹಿಸಿದಂತಹ ಹಾಜಿಗಳನ್ನು ಎಲ್ಲಾ ಪಾಪಗಳಿಂದ ವಿಮುಕ್ತಿಗೊಳಿಸಿ,ಈ ವಿಮುಕ್ತಿಯ ಶೈಲಿಯನ್ನು ಕರ್ಮ ಶಾಸ್ತ್ರ ವ್ಯಕ್ತಪಡಿಸಿರುವುದು ಪ್ರಸ್ತುತ ಹುಟ್ಟಿದ ಮಗುವಿಗೆ ಹೇಗೆ ಪಾಪದಿಂದ ವಿಮುಕ್ತಿ ಪಡೆದಿದೆ ಅದೇ ರೀತಿಯಲ್ಲಾಗಿರುತ್ತಾರೆ ಹಾಜಿಗಳು ಎಂದು.ಬಕ್ರೀದ್ ಹಬ್ಬದ ಸಂಸ್ಕೃತಿಕ ವಿಶ್ಲೇಷಣೆ ನಡೆಸುವಾಗ ಮುಖ್ಯವಾಗಿ 2 ವಿಭಾಗವಾಗಿ ಕಾಣಬಹುದು.
1. ಆಧ್ಯಾತ್ಮಿಕ ಸಂಸ್ಕೃತಿ 2. ಮಾನವೀಯ ಸಂಸ್ಕೃತಿ
1. ಆಧ್ಯಾತ್ಮಿಕ ಸಂಸ್ಕೃತಿ: ಆಧ್ಯಾತ್ಮಿಕ ಮೌಲ್ಯಗಳು ಇಸ್ಲಾಂ ಧರ್ಮದ ಎಲ್ಲಾ ಕಾರ್ಯಗಳಲ್ಲಿ ಕಾಣಬಹುದಾಗಿದೆ.ಈ ಮೌಲ್ಯವನ್ನು ಅನುಸರಿಸದೇ ಎಷ್ಟೇ ದೀರ್ಘವಾದ ಪ್ರಾರ್ಥನೆಯಾಗಿದ್ದರು ಸಿಂಧು ಆಗಲಾರವು ಎನ್ನುವುದು ಇಸ್ಲಾಮಿಕ ನಿಲುವು. ಇದು ಬರೀ ಪ್ರಾರ್ಥನೆಗೆ ಮಾತ್ರ ಸೀಮಿತವಾಗಿರದೆ ಸಕಲ ಕಾರ್ಯಗಳಲ್ಲೂ ಅನ್ವಯವಾಗಿದೆ ಅಂದರೆ ಆರಾಧನೆಯಲ್ಲಿ,ನಿತ್ಯ ಜೀವನದಲ್ಲಿ, ವ್ಯವಹಾರದಲ್ಲಿ ಮತ್ತು ಆಚರಣೆಯಲ್ಲಿ.ಬಕ್ರೀದ್ ಹಬ್ಬದ ಆದ್ಯಾತ್ಮಿಕ ಘಟಕವನ್ನು ಚರ್ಚಿಸುವಾಗ ಇಬ್ರಾಹೀಂ(ಅ. ಸ)ರು ಅಲ್ಲಾಹನನ್ನು ಒಳಿಸಲು ಜೀವನದಲ್ಲಿ ಪಟ್ಟ-ಪಾಡನ್ನು ಈ ಹಬ್ಬದ ಆಚರಣೆಯ ಮೂಲಕ ಸ್ಮರಣೆ ಮಾಡುವುದರೊಂದಿಗೆ ವಿಶ್ವಾಸಿಗಳಲ್ಲಿ ಆಧ್ಯಾತ್ಮಿಕ ಬೆಳೆವಣಿಗೆಗೆ ಘಾಡ ಪರಿಣಾಮ ಬೀರಿದೆ.
ದುಲ್ ಹಿಜ್ಜ್ 9ನೇ ಸೂರ್ಯಅಸ್ತಮದ ನಂತರ 13ನೇ ಸೂರ್ಯ ಅಸ್ತಮದ ವರೆಗೂ ನಿರಂತರವಾಗಿ ಅಲ್ಲಾಹನ ನಾಮವನ್ನು ಜಪಿಸುತ್ತಲೇ ಇರುತ್ತಾರೆ. ಬಕ್ರೀದ್ ಹಬ್ಬದ ಬೆಳಗ್ಗೆ ಪ್ರತ್ಯೇಕವಾದಂತಹ ಪ್ರಾರ್ಥನೆ ನಡೆಯುತ್ತದೆ. ಈ ಪ್ರಾರ್ಥನೆಯು ನಮಾಜ್ ಮತ್ತು ಧಾರ್ಮಿಕ. ಪ್ರವಚನಗಳಿಂದ ಕೂಡಿರುತ್ತದೆ. ಈ ಎಲ್ಲಾ ಆರಾಧನೆಯ ಸಂದರ್ಭದಲ್ಲಿ ವಿಶಿಷ್ಟ ರೀತಿಯಲ್ಲಿ ಅಲ್ಲಾಹನ ನಾಮವನ್ನು ಜಪಿಸುತ್ತಾರೆ, ಪ್ರವಚನದ ಮುಖ್ಯ ಉದ್ದೇಶಗಳೆಲ್ಲವೂ ಕೂಡ ಹಜರತ್ ಇಬ್ರಾಹಿಮ(ಅ. ಸ)ರ ಜೀವನ ಚರಿತ್ರೆಯನ್ನು ಸ್ಮರಿಸುವ ರೀತಿಯಲ್ಲಿ ವಿಶ್ವಾಸಿಗಳ ಆಧ್ಯಾತ್ಮಿಕ ಬೆಳವಣಿಗೆಗೆ ಪ್ರೇರಣೆಯನ್ನು ಈ ಮೂಲಕ ನೀಡುವರು. ತಮ್ಮ ಕುಟುಂಬಸ್ಥರಿಂದ ವಿಧಿವಶರಾದವರ ಸಮಾಧಿ ಬಲಿ ತೆರಳಿ ವಿಶೇಷ ಸಂದರ್ಶನವನ್ನು ಕೂಡ ಆ ದಿನದಂದು ನಡೆಸುತ್ತಾರೆ. ಈ ದಿನ ನಡೆಸುವಂತಹ ವಿಶೇಷವಾದ ಬಲಿಯೂ ಕೂಡ ವಿಶ್ವಾಸ ವ್ಯಕ್ತಪಡಿಸುವ ಅಲ್ಲಾಹನ ನಾಮದಲ್ಲಾಗಿರುತ್ತದೆ. ಇದರ ಹಿಂದಿನ ಶೈಲಿ ನಶ್ವರವನ್ನು ತ್ಯಜಿಸಿದ ಹಜರತ್ ಇಬ್ರಾಹಿಂ (ಅ.ಸ) ರ ಮತ್ತು ಪುತ್ರ ಇಸ್ಮಾಯಿಲ್ (ಅ. ಸ )ರ ಆತ್ಮಸಮರ್ಪಣೆಯ ಚರಿತ್ರೆಯಾಗಿದೆ.
ಹಲವಾರು ವರ್ಷಗಳಿಂದ ಮಗುಯಿಲ್ಲದೆ ನಿರಂತರ ಪ್ರಾರ್ಥನೆಯಲ್ಲಿ ಕೂಸು ಕನಸಿನ ಇರಾದೆ ಹೇಳಿ ಪ್ರತಿಫಲವಾಗಿ ಲಭಿಸಿದ ಇಸ್ಮಾಯಿಲ್ (ಅ. ಸ )ರನ್ನು ದೈವವಿಧಿಯಂತೆ ಅಲ್ಲಾಹನಿಗಾಗಿ ಬಲಿ ನೀಡಬೇಕಾಗಿ ಆಜ್ಞೆ ಇಟ್ಟಾಗ, ತಂದೆ ಮತ್ತು ಮಗನ ಅಗಾದವಾದ ದೇವ ಸಂಪ್ರೀತಿಯೇ ಬಲಿದಾನದ ಮುಖ್ಯ ಆಶಯವಾಗಿದೆ. ಈ ಆಧ್ಯಾತ್ಮಿಕತೆಯಲಿ ಮುಳುಗಿದ ತಂದೆ ಮಗನ ದೈವ ಭಕ್ತಿ ಯಾವ ರೀತಿಯಲ್ಲಿತ್ತು ಎಂಬುದನ್ನು ಇತಿಹಾಸದ ಗ್ರಂಥಗಳು ವರ್ಣಿಸುವಂಥದ್ದು ಇಷ್ಟು ವರ್ಷದ ಕನಸಾದ ತನ್ನ ಎಲೆ ಕೂಸನ್ನು ಬಲಿ ಸಮರ್ಪಣೆಗಾಗಿ ಆಜ್ಞೆ ಬಂದಾಗ ತಂದೆ ಆ ಮಗನ ಮುಖವನ್ನು ನೋಡಿ ವಾತ್ಸಲ್ಯದ ಕಣ್ಣೀರು ಇಟ್ಟರೂ ಅಲ್ಲಾಹನ ಆಜ್ಞೆ ಸಮರ್ಪಣೀಯ ಮುಂದೆ ನನ್ನ ಕರುಣೆಯ ಮಮತೆಗೆ ಎಡೆಯಿಲ್ಲ ಎಂಬ ರೀತಿಯಲ್ಲಾಗಿದ್ದರೆ, ಮಗನ ಕತ್ತಿಗೆ ಇಟ್ಟ ಖಡ್ಗ ಎಷ್ಟು ಕೊಯ್ದರೂ ಕೊಯ್ಯಲ್ಪಡದೆ ತದಾ ಸ್ಥಿತಿಯಲ್ಲಿದ್ದಾಗ ಖಡ್ಗದ ಹರಿತವನ್ನು ಇನ್ನೂ ಚೂಪುಗೊಳಿಸುವರು ಮತ್ತೆ ಕೊಯ್ಯಲ್ಪಡದೆ ಇರುವಾಗ ಹತ್ತಿರದ ಬಂಡೆಗೆ ಖಡ್ಗದಿಂದ ಒಂದು ಏಟು ಕೊಡುವರು, ಖಡ್ಗದ ಏಟಿನಿಂದ ಬಂಡೆಕಲ್ಲುಗಳು ಇಬ್ಬಾಗವಾಗಿ ಮಾರ್ಪಟ್ಟರೂ ದೇವ ಸಮರ್ಪಣೀಯ ಜೀವದ ಕತ್ತು ಮಾತ್ರ ಆ ಖಡ್ಗದ ಹರಿತಕ್ಕೆ ಕೊಯ್ಯಲು ಸಾಧ್ಯವಾಗಿಲ್ಲ ಎಂದು ಆ ಕ್ಷಣವನ್ನು ವಿಸ್ಮರಿಸುವ ಮನಸ್ಸಿಗೆ ಹೇಳಬಹುದು.
ನನ್ನ ಮುಖವನ್ನು ನೋಡಿ ನಿಮಗೆ ಕರುಣೆ ತೋರಿ ಕೊಯ್ಯಲು ಮನಸ್ಸು ಬರುತ್ತಿಲ್ಲ ಇದರಿಂದ ಈ ಬಲಿದಾನ ನಡೆಯದೇ ಇರಕೂಡದು ಎಂದು ಹೇಳಿ ಮಗ ಇಸ್ಮಾಯಿಲ್ (ಅ. ಸ)ರು ತಿರುಗಿಸಿ “ದೈವ ಸಮರ್ಪಣೆಯ ಬಲಿದಾನವಿದು ಇದರಲ್ಲಿ ಕನಿಕರದ ನೋಟ ಬೇಡ ತಂದೆ” ಎಂದು ಹೇಳಿದ ತಂದೆ ಮಗನ ಈ ಶಕ್ತಿಯುತ ವಿಶ್ವಾಸದ ಸ್ಮರಣೀಯವಾಗಿದೆ ಬಲಿದಾನ. ಹೀಗೆ ಮೊದಲಾದ ರೀತಿಯಲ್ಲಿ ಈ ಹಬ್ಬದ ಸಮಯದಲ್ಲಿ ಸಂಭ್ರಮದೊಂದಿಗೆ ವಿಶ್ವಾಸಿಗಳು ಆಧ್ಯಾತ್ಮಿಕದೊಂದಿಗೆ ಹೆಚ್ಚು ಲಯಿಸುತ್ತಾರೆ.
2. ಮಾನವೀಯ ಸಂಸ್ಕೃತಿ : ಬಕ್ರೀದ್ ಹಬ್ಬವು ಆಚರಣೆಯೊಂದಿಗೆ ಮಾನವೀಯ ಮೌಲ್ಯವನ್ನು ಹೊಂದಿರುವಂತದ್ದು ವಿಶೇಷಣಿಯ ಎಂಬುದರಲ್ಲಿ ತಪ್ಪಿಲ್ಲ. ಸಂಭ್ರಮದೊಂದಿಗೆ ಮಾನವೀಯ ಮೌಲ್ಯ ಹೊಂದಿರುವುದೇ ಈ ಹಬ್ಬವೂ ಇನ್ನೂ ವ್ಯತ್ಯಾಸ ರೀತಿಯಲ್ಲಿ ಸುಸಂಸ್ಕೃತವಾಗಿರುವಂತದ್ದು. ಮಾನವೀಯ ಮೌಲ್ಯಗಳು ಹೊಂದಿರಲು ಪ್ರಾಥಮಿಕ ಕಾರಣ ಒಂದು ಇಸ್ಲಾಂ ಧರ್ಮವು ಮಾನವೀಯ ಮೌಲ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟಿದ್ದು ಮತ್ತು ಹಜರತ್ ಇಬ್ರಾಹಿಂ (ಅ. ಸ )ರ ಜೀವನ ಚರಿತ್ರೆ ಮಾನವೀಯ ಮೌಲ್ಯಗಳು ಹೊಂದಿರುವ ಅಧ್ಯಾಯವಾಗಿರುವುದರಿಂದ ಬಕ್ರೀದ್ ಮಾನವೀಯ ಮೌಲ್ಯಗಳು ಹೊಂದಿರುವ ಹಬ್ಬವಾಗಿದೆ. ಈ ಹಬ್ಬ ಯಾವ ರೀತಿಯಲ್ಲಿ ಮಾನವೀಯ ಸಂಸ್ಕೃತಿಯನ್ನು ಹೊಂದಿದೆ ಎಂಬ ಚರ್ಚೆಯನ್ನು ನಡೆಸಿದರೆ ಆಧ್ಯಾತ್ಮಿಕ, ಆರಾಧನೆಕ್ಕಿಂತ ಹೆಚ್ಚಿನ ರೀತಿಯಲ್ಲಿ ವೈಚಾರಿಕತೆಯನ್ನು ಹೊಂದಿರುವಂಥದ್ದು ಮಾನವೀಯ ಮೌಲ್ಯಗಳ ವಿಷಯದಲ್ಲಾಗಿದೆ.
ಈದ್ ದಿನದಂದು ನಮಾಜಿಗಾಗಿ ವಿಶ್ವಾಸಿಗಳು ಮಸೀದಿ ಅಥವಾ ಈದ್ಗಾದಲ್ಲಿ ಬೆಳಗಿನ ಸಮಯದಲ್ಲಿ ಸೇರುತ್ತಾರೆ. ಅಲ್ಲಿ ಯಾವುದೇ ರೀತಿಯ ಬಡವ-ಶ್ರೀಮಂತ ಮೇಲು- ಕೀಳು, ಕಪ್ಪು-ಬಿಳಿ, ಜಾತಿ, ಪಂಗಡ ಎಂಬ ಭೇದ ಭಾವಗಳಿಲ್ಲದೆ ಎಲ್ಲರೂ ಒಂದೇ ರೀತಿಯಲ್ಲಿ ಆರಾಧನೆಯಲ್ಲಿ ತೊಡಗುತ್ತಾರೆ. ಅಲ್ಲಿ ಕಾಣಿಸಿಕೊಳ್ಳುವಂತದ್ದು ಮನುಷ್ಯ ಎಂಬ ವರ್ಗಮಾತ್ರ, ಅಲ್ಲಿ ವಿಭಾಗಿಸಲು ಇರುವಂತದ್ದು ವಿಶ್ವಾಸಿಗಳು ಮಾತ್ರ. ಇದರ ನಡುವೆ ವ್ಯತ್ಯಾಸದ ಕಣ್ಣುಗಳಿಲ್ಲ, ಸೃಷ್ಟಿಕರ್ತನ ಮುಂದೆ ನಾವೆಲ್ಲರೂ ಅವನ ದಾಸರು ಎಂಬ ರೀತಿಯಲ್ಲಾಗಿದೆ ವಿಶ್ವಾಸಿಯ ಮನಸ್ಥಿತಿ ಇರಬೇಕಾದದ್ದು. ನಮಾಜ್ ಮತ್ತು ಪ್ರವರ್ಚನದ ನಂತರ ವಿಶ್ವಾಸಿಗಳು ಪರಸ್ಪರ ಹಸ್ತಲಾಘವ ಮತ್ತು ಅಪ್ಪುಗೆಯನ್ನು ಮಾಡುತ್ತಾ ಪರಸ್ಪರ ಒಬ್ಬರಿಗೊಬ್ಬರು ವಿಮೋಚನೆಯ ಪ್ರಾರ್ಥನೆಯನ್ನು ಮಾಡುತ್ತಾರೆ. ಮೊದಲೇ ಹೇಳಿದ ರೀತಿಯಲ್ಲಿ ಯಾವುದೇ ಬೇಧ ಭಾವನೆಗಳನ್ನು ಹೊಂದದೆ ಪರಸ್ಪರ ಸಹೋದರತೆಯ ಕೊಂಡಿಯನ್ನು ಜೋಡಿಸುತ್ತಾರೆ. ಮನುಷ್ಯ ಕುಲವೆಲ್ಲವೋ ಒಂದೇ ಎಂಬ ಮಾನವೀಯ ಮೌಲ್ಯವನ್ನಾಗಿದೆ ಈ ಆರಾಧನೆಯ ಶೈಲಿಯನ್ನು ನೋಡುವಾಗ ಅರ್ಥವಾಗುವುದು
ಪ್ರಾರ್ಥನೆಯ ನಂತರ ವಿಶ್ವಾಸಿಗಳೆಲ್ಲರೂ ತಮ್ಮ ತಮ್ಮ ನೆರಹೊರೆಯ, ಸಂಬಂಧಿಕರ ಮನೆಗೆ ಭೇಟಿ ನೀಡಿ ಪರಸ್ಪರ ಕುಶಲೊಪಚಾರ ಮಾತಾಡಿ, ಭಕ್ಷ ಭೋಜನಗಳನ್ನು ಮಾಡಿ ಪರಸ್ಪರ ಹಂಚಿ ಸ್ನೇಹ ಬಾಂಧವ್ಯವನ್ನು ಮನುಷ್ಯರ ನಡುವೆ ಪಸರಿಸಲು ಈ ಹಬ್ಬ ಹೆಚ್ಚು ಒತ್ತು ಕೊಟ್ಟಿದೆ. ಪರಸ್ಪರ ದ್ವೇಷದಿಂದ ಬಾಳುತ್ತಿದ್ದ ಅದೆಷ್ಟು ವಿಶ್ವಾಸಿಗಳು ಈ ದಿನದಂದು ಎಲ್ಲವನ್ನು ಬಿಟ್ಟು ಸ್ನೇಹ ಬಾಂಧವ್ಯದ ರಸವನ್ನು ಮತ್ತೆ ಹೀರಲು ಶುರುಮಾಡುತ್ತಾರೆ. ಬಲಿಕೊಟ್ಟ ಮೃಗದ ಮಾಂಸವನ್ನು ಸಮಾನ ತೂಕದಲ್ಲಿ ವಿಭಜಿಸಿ ಹಂಚುತ್ತಾರೆ. ದಾನದೊಂದಿಗೆ ಸಮಾನತೆಯನ್ನು ಕಂಡುಕೊಳ್ಳುತ್ತಾರೆ. ಈ ದಾನದ ಪ್ರಯೋಜನವು ಸಾವಿರಾರು ಬಡ ಕುಟುಂಬದ ಹಸಿವನ್ನು ನೀಗಿಸುತ್ತದೆ. ಇದರಿಂದ ಉಳ್ಳವನಿಗೆ ಮಾತ್ರ ಆಚರಣೆಯು ಸೀಮಿತವಾಗದೆ, ಎಲ್ಲರನ್ನೂ ಆಚರಣೆಯಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಹೊಸ ಉಡುಪುಗಳನ್ನು ಧರಿಸಿ ಮನುಷ್ಯರಲ್ಲಿ ಹೊಸತನದ ಹರುಪನ್ನು ಬೀರುತ್ತದೆ.
ಯಜಮಾನನು ತಾನು ಕಡ್ಡಾಯವಾಗಿ ಖರ್ಚು ನೀಡಬೇಕಾದವರಿಗೆ ಈ ಹಬ್ಬದ ಸಂದರ್ಭದಲ್ಲಿ ಉಡುಗೆ ತೊಡುಗೆಯನ್ನು ನೀಡಲು ಭಾದ್ಯಸ್ಥನಾಗಿರುತ್ತಾನೆ. ಈ ಕಡ್ಡಾಯಗೊಳಿಸುವಿಕೆಯೊಂದಿಗೆ ಮನುಷ್ಯ ಜೀವನಕ್ಕೆ ಈ ಹಬ್ಬದ ದಿನದಂದು ಇಸ್ಲಾಂ ಹೊಸತನದ ಛಾಯೆಯನ್ನು ನೀಡುತ್ತದೆ. ಈ ಎಲ್ಲಾ ವೈಚಾರಿಕತೆಗಳು ವ್ಯಕ್ತಪಡಿಸುವಂತದ್ದು ಮಾನವೀಯ ಸಿದ್ದಾಂತಗಳನ್ನಾಗಿದೆ.
ಹಜ್ಜ್ : ಇಸ್ಲಾಂ ಧರ್ಮದ ಆಧಾರಸ್ತಂಭಗಳಲ್ಲಿ ಐದನೇ ಕರ್ಮವಾಗಿದೆ ಹಜ್ಜ್. ಇದು ಈ ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರತ್ಯೇಕ ಆರಾಧನೆಯಾಗಿದೆ. ದುಲ್ ಹಿಜ್ಜ ತಿಂಗಳ 1ನೇ ದಿನದಿಂದ ಪ್ರಾರಂಭಗೊಂಡು ಪ್ರಾರಂಭಗೊಂಡು 13ನೇ ದಿನದವರೆಗೂ ನಡೆಸುವ ವಿಶ್ವಾಸ ಕರ್ಮವಾಗಿದೆ. ಲೋಕದ ಎಲ್ಲಾ ಭಾಗದಿಂದ ಇಸ್ಲಾಂ ಧರ್ಮಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಮುಸ್ಲಿಮರು ಈ ಆರಾಧನೆಯನ್ನು ಮಾಡಲು ವರ್ಷದಲ್ಲಿ ಒಮ್ಮೆ ಬಂದು ಸೇರುತ್ತಾರೆ. ಈ ಆರಾಧನೆಯ ಎಲ್ಲಾ ಘಟಕಗಳನ್ನು ತೆಗೆದು ನೋಡುವಂತಹ ಸಂದರ್ಭದಲ್ಲಿ ಚರಿತ್ರೆಯು ಇಬ್ರಾಹಿಂ (ಅ.ಸ)ರು ಮತ್ತು ಹಾಜರ ಬೀವಿ( ರ. ಅ ) ಈ ಧರ್ಮದ ಪ್ರಬೋಧನೆಯಲ್ಲಿ ತೊಡಗಿದ್ದಾಗ ಪಟ್ಟ ಕಷ್ಟವನ್ನು ಸಣ್ಣ ಮಟ್ಟಿಗೆಯಲ್ಲಿ ಸ್ಮರಿಸುವ ರೀತಿಯಲ್ಲಾಗಿದೆ.
ಲೋಕದ ಎಲ್ಲಾ ಕಡೆಯ ವಿಶ್ವಾಸಿಗಳು ಈ ಆರಾಧನೆಯ ಸಂದರ್ಭದಲ್ಲಿ ಸರಳವಾದ ಉಡುಗೆಯನ್ನು ತೊಟ್ಟು “ಲಬೈಕ್ ಅಲ್ಲಾಹುಮ್ಮ ಲಬೈಕ್” ಎಂಬ ಜಪವನ್ನು ಪಠಿಸುತ್ತಾ ನಿರಂತರ ಆರಾಧನೆಗಳನ್ನು ಮಾಡುತ್ತಾರೆ.ಈ ಆರಾಧನೆಯ ಸಂದರ್ಭದಲ್ಲೂ ಮತ್ತು ಇಸ್ಲಾಮಿನ ಎಲ್ಲಾ ಘಟಕದಲ್ಲೂ ಯಾವುದೇ ರೀತಿಯ ಭೇದ ಭಾವಗಳು ಇಲ್ಲದೆ ಮನುಷ್ಯ ಕುಲ ಎಲ್ಲವೂ ಒಂದೇ ಎಂಬ ರೀತಿಯಲ್ಲಿ ಆರಾಧನೆಯಲ್ಲಿ ತೊಡಗುತ್ತಾರೆ ಎಂಬುದಾಗಿದೆ ಇಸ್ಲಾಮಿನ ಅತ್ಯಂತ ಮಹತ್ತರವಾದಂತಹ ವೈಶಿಷ್ಟತೆ.
ಇಸ್ಮಾಯಿಲ್ (ಅ. ಸ )ರು ಮಗು ಆಗಿದ್ದ ಸಂದರ್ಭದಲ್ಲಿ ಬಾಯಾರಿಕೆಯಿಂದ ಚಡಪಡಿಸುತ್ತಿದ್ದ ವೇಳೆ ತಾಯಿ ಹಾಜರ ಬೀವಿ (ರ. ಅ ) ನೀರಿಗಾಗಿ ಸಫ ಮತ್ತು ಮರ್ವ ಎಂಬ ಎರಡು ಬೆಟ್ಟಗಳಲ್ಲಿ 7 ಬಾರಿ ಓಡಿದ ರೀತಿಯಲ್ಲಿಯೇ, ಕರ್ಮ ನಿರ್ವಹಿಸುವಂತಹ ಸಂದರ್ಭದಲ್ಲಿ ಕೂಡ ಕಡ್ಡಾಯವಾಗಿ ಮಾಡಬೇಕಾದ ಆರಾಧನೆಯಲ್ಲಿ ಒಂದಾಗಿದೆ ಸಫ ಮತ್ತು ಮರ್ವ ನಡುವೆ ಸಂಚಾರ ಮಾಡುವಂತದ್ದು. ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸುವಾಗ ದುಲ್ಹಿಜ್ಜ, ಬಕ್ರೀದ್, ಹಜ್ಜ್, ಎಲ್ಲವೂ ಕೂಡ ಹಜರತ್ ಇಬ್ರಾಹಿಂ(ಅ. ಸ), ಇಸ್ಮಾಯಿಲ್ ( ಅ. ಸ ), ಹಾಜರಾ(ರ. ಅ ) ಜೀವನ ಚರಿತ್ರೆಯನ್ನು ಸ್ಮರಿಸುವ ರೀತಿಯಲ್ಲಾಗಿದೆ.
21ನೇ ಶತಮಾನವು ಎಲ್ಲಾ ವೈಚಾರಿಕತೆಗಳನ್ನು ಅನ್ವೇಷಣಾ ರೀತಿಯಲ್ಲಿ ತೊಡಗಿಸುವಾಗ ಪ್ರಸ್ತುತದಲ್ಲಿ ಇಸ್ಲಾಂ ಧರ್ಮವನ್ನು ಕೂಡ ಈ ಸಂಶೋಧನಾ ಘಟಕಕ್ಕೆ ತಂದಿರುವಂತದ್ದು ಮತ್ತು ಚರ್ಚೆ ವಿಷಯವಾಗಿ ಇಸ್ಲಾಮಿನ ಪ್ರತಿ ವೈಚಾರಿಕತೆಗಳನ್ನು ತೆಗೆಯುವಾಗ ಬಕ್ರೀದ್ ಹಬ್ಬದ ಸಾಂಸ್ಕೃತಿಕ ಅಧ್ಯಾಯನವೂ ಈ ಕಾಲಕ್ಕೆ ಅತೀ ಮುಖ್ಯವಾಗಿದೆ. ಮಾನವ ಕುಲದ ಬೆಲೆ ಅರಿಯದಂತಹ ಒಂದು ನಾಗರಿಕತೆಯ ಎಡೆಯಲ್ಲಿ ಸಾವಿರ ವರ್ಷಗಳಿಂದ ನಿರಂತರವಾಗಿ ಹಲವು ನಾಗರಿಕತೆಯ ಎಡೆಗೂ ಪ್ರಸರಣಗೊಂಡು ನಾಗರೀಕ ಮನುಕುಲವನ್ನು ಸೃಷ್ಟಿ ಮಾಡುವಲ್ಲಿ ತನ್ನದೇ ಆದ ಚರಿತ್ರೆಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಬಕ್ರೀದ್ ನೀಡುವಂತಹ ತ್ಯಾಗ ಬಲಿದಾನದ ಸಂದೇಶವು ಮತ್ತು ಈ ಹಬ್ಬದ ಆಚರಣೆಯ ಸಾಂಸ್ಕೃತಿಕ ಘಟಕವನ್ನು ಅಧ್ಯಯನ ಮಾಡುವುದರೊಂದಿಗೆ ಉತ್ತಮ್ಮ ನಾಗರಿಕತೆಗೆ ಯಾವ ರೀತಿಯಲ್ಲಿ ಇಸ್ಲಾಮಿನ ಸಂದೇಶ ಪಸರಿಸಿದೆ ಎಂಬುದರ ಕುರಿತು ಈ ಲೇಖನವೂ ಚರ್ಚಿಸಿದೆ. ಮನುಕುಲವನ್ನು ಉತ್ತಮ ನಾಗರಿಕತೆಗೆ ಬದಲಾಯಿಸಲು ಸುಮಾರು 4000 ವರ್ಷಕ್ಕಿಂತ ಮುಂಚೆ ಶ್ರಮಿಸಿದ ಹಜರತ್ ಇಬ್ರಾಹಿಂ (ಅ. ಸ )ರ ಜೀವನ ಚರಿತ್ರೆಯನ್ನು ಅರಿತುಕೊಂಡು ಉತ್ತಮ ನಾಗರಿಕತೆಗೆ ಸೃಷ್ಟಿಸಲು ಶ್ರಮಿಸೋಣ. ನಮ್ಮೆಲ್ಲರನ್ನು ಇಹಪರ ವಿಜಯಗೋಸಲಿ ನಮ್ಮೆಲ್ಲರ ಕಷ್ಟ ಗಳು ನಿವಾರಣೆ ಯಾಗಳಿ ಎಲ್ಲಾ ರೀತಿಯ ರೋಗದಿಂದ ವಿಮುಕ್ತಿ ದೊರಯಲಿ ಎಂಬ ಪ್ರಾರ್ಥನೆಯೊಂದಿಗೆ ಅಮೀನ್ ಯಾರಬ್ಬಲ್ ಆಲೆಮೀನ್ 💐💐
ಈದ್ ಉಲ್ ಅದ್ಹ ಹಬ್ಬದ ಶುಭಾಶಯಗಳು..
— ನಝೀರ್, ಹೊಸಮೋಗ್ರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.