ಜೆದ್ದಾ(www.Vknews.in): ಈ ಬಾರಿಯು ಹಜ್ ಕರ್ಮಗಳ ಸಮಯದಲ್ಲಿ ಮಕ್ಕಾದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದ್ದು, ಅತಿಯಾದ ಬಿಸಿಲಿನಿಂದ ಅನೇಕ ಹಜ್ಜಾಜ್ ಗಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ಕಾರಣದಿಂದಾಗಿ ಅನೇಕ ಹಜ್ಜಾಜ್ ಗಳನ್ಮು ವಿವಿದ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಇವರ ಪೈಕಿ ನೂರಾರು ಹಜ್ಜಾಜ್ ಗಳು ಮರಣ ಹೊಂದಿದ್ದು, ಇವರಲ್ಲಿ 60 ಕ್ಕೂ ಅಧಿಕ ಭಾರತೀಯ ಹಜ್ಜಾಜ್ ಗಳು ಸೇರಿದ್ದಾರೆ ಎಂದು ಸೌದಿ ಹಜ್ ಮಂತ್ರಾಲಯ ದೃಢಪಡಿಸಿದ. ಹೆಚ್ಚಿನ ಭಾರತೀಯ ಹಜ್ಜಾಜ್ ಗಳು ಅರಫಾ ಸಂಗಮ ಪೂರ್ತಿಗೊಳಿಸಿ ತಮ್ಮ ಹಜ್ ಕರ್ಮ ನೆರವೇರಿಸಿದ ನಂತರ ಮೃತರಾಗಿದ್ದಾರೆ ಎಂದು ವರದಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.