(www.vknews. in) ; ಕೆನಡಾದ ಪ್ರತಿಷ್ಟಿತ ಬ್ರಾಂಪ್ಟನ್ ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್. ಉಡುಪಿ ಅನಿವಾಸಿ ಭಾರತೀಯ ಶೈಖ್ ಅಬ್ದುಲ್ ವಾಹಿದ್ ದಾವೂದ್ ರವರ “ಆರೋಗ್ಯ ಸುರಕ್ಷತೆ, ಪರಿಸರ ಮತ್ತು ಸಾಮಾಜಿಕ ಕಾರ್ಯ ” ನೆಲೆಯಲ್ಲಿ ಅವರ ಅನುಭವ ಹಾಗೂ ಸೇವೆಯನ್ನು ಪರಿಗಣಿಸಿ ಗೌರವ ಡಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಈ ಪದವಿ ಪ್ರದಾನ ಸಮಾರಂಭ ಬೆಂಗಳೂರಿನ ಘಂದಿನಗರದ್ ” ಥಿ ಜಿಯನ್ ಲಕ್ಸುರಿಯಸ್ ಹೋಟೆಲ್” ನಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಭಾರತ ಸರ್ಕಾರದ ಮಾಜಿ ಅರ್ಥಶಾಸ್ತ್ರ ಸಲಹೆಗಾರನ್ ಹೆಚ್.ವಿ ಶಿವಪ್ಪ ,ಬಿಷಪ್ ಜೋಸೆಫ್ ಕಂಡಲ್,ರಾಯಲ್ ಅಕಾಡೆಮಿ ಸ್ಯಾಮ್ಸನ್,ಮೊದಲಾದವರು ಉಪಸ್ಥಿತರಿದ್ದರು. ಶೈಖ್ ಅಬ್ದುಲ್ ವಾಹಿದ್ ರವರು ವ್ಯವಸ್ಥಾಪಕ ನಿರ್ದೇಶಕರು ಸ್ಟಾರ್ ಪಿವಿಏಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಡುಪಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರದಾನ ಕಾರ್ಯದರ್ಶಿ, ನಿಕಟಪೂರ್ವ ಅನಿವಾಸಿ ಭಾರತೀಯ ಕಾಂಗ್ರೆಸ್ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷ, ನಮ್ಮ ನಾಡ ಒಕ್ಕೂಟ ಪರ್ಯವರಣಾ ಸಮಿತಿ ಕರ್ನಾಟಕ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಕುವೈಟ್ ಅಲ್ ಖಾರಾಪೀ ಕಂಪೆನಿಯ ಆರೋಗ್ಯ ಮತ್ತು ಸುರಕ್ಷಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಆರೋಗ್ಯ ಮತ್ತು ಸುರಕ್ಷಾ ವಿಭಾಗದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ 40 ವರ್ಷಕ್ಕೂ ಹೆಚ್ಚು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.