(www.vknews. in) ; ಮಕ್ಕಳಿಗೆ ಚುನಾವಣೆ ಮಹತ್ವ ವನ್ನು ತಿಳಿಯಲು ಮತ್ತು ವಿದ್ಯಾರ್ಥಿ ಗಳಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡುವುದು , ಅವರಿಂದ ಶಾಲೆಯ ಸರ್ವಾಂಗೀಣ ಪ್ರಗತಿ ಮಾಡುವುದರ ಅರಿವು ಮೂಡಿಸುವ ಕಾರ್ಯಕ್ರಮ.
ಶಾಲಾ ಸಂಚಾಲಕರಾದ ರವೂಫ್ ಯು ಟಿ ಯವರು ಮಾತಾನಾಡುತ್ತಾ ನಮ್ಮ ಮಕ್ಕಳಿಗೆ ಚುನಾವಣಾ ಮಹತ್ವ ಮತ್ತು ಸಮಾಜದಲ್ಲಿ ರಾಜಕೀಯ ಮಹತ್ವ ತಿಳಿಯುವುದು ವಿದ್ಯಾರ್ಥಿಗಳ ಜೀವನದ ಪ್ರಮುಖ ಅಂಶ ಎಂದು ವಿವರಿಸಿದರು.
ಶಾಲಾ ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ , ಭವಿಷ್ಯದಲ್ಲಿ ಉತ್ತಮ ನಾಯಕರನ್ನು ಬೆಳೆಸಲು ಈ ಶಾಲಾ ಚುನಾವಣೆ ನಮ್ಮ ಮಕ್ಕಳಿಗೆ ಸ್ಪೂರ್ತಿ ನೀಡಲಿ ಎಂದು ಹೇಳಿದರು. ಮತ್ತು ಶಾಲೆಯ ಮುಖ್ಯ ಚುನಾವಣಾ ಅಧಿಕಾರಿಯಾಗಿ ಸವಿತಾ ಮೇಡಮ್ ಮತ್ತು ಕಾರ್ಯಕ್ರಮ ಮಾಧ್ಯಮ ನಿರ್ವಹಣೆ ವಿಭಾಗದಲ್ಲಿ ಶಿಕ್ಷಕಿ ಫಾತಿಮ ಮಕ್ಕಳಿಗೆ ಸ್ಪೂರ್ತಿ ನೀಡಿದರು.
ಇತರ ಚುನಾವಣಾ ಅಧಿಕಾರಿಯಾಗಿ ಉಷಾ ,ನೇತ್ರಾ ,ಸುಹೇರ ,ಸಫ್ರಾ ಕಾರ್ಯ ನಿರ್ವಹಿಸಿದರು. ಆರಕ್ಷಕರಾಗಿ 10 ನೇ ತರಗತಿಯ ವಿದ್ಯಾರ್ಥಿಗಳಾದ ಸರ್ಫುದ್ದೀನ್ ಮತ್ತು ಮಹಮ್ಮದ್ ರಾಫಿಹ್ ಕಾರ್ಯ ನಿರ್ವಹಿಸಿದರು.ಶಾಲೆಯ 3 ರಿಂದ 10 ನೇ ತರಗತಿ ವರೆಗೆ ಸುಮಾರು 300 ವಿದ್ಯಾರ್ಥಿಗಳು ಮತದಾನ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.