(www.vknews. in) ; ಸುಮಾರು 186 ವರ್ಷ ಇತಿಹಾಸ ಇರುವ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಸಾಮೂಹಿಕವಾಗಿ ಆರೋಗ್ಯ ಸಮಸ್ಯೆಗೆ ದೂಡುತ್ತಿರುವ ಉಪ್ಪಿನಂಗಡಿ ಪಂಚಾಯತ್
ರಾಜ್ಯದಲ್ಲಿಯೇ ಅತೀ ಹೆಚ್ಚು ವರಮಾನ ಇರುವಂತಹ ಗ್ರಾಮ ಪಂಚಾಯತ್ ಆಗಿರುವ ಉಪ್ಪಿನಂಗಡಿಯಲ್ಲಿ ಚರಂಡಿಗಳು ಅವ್ಯವಸ್ತೆಯ ಆಗರವಾಗಿದ್ದು, ಇದ್ದವರಿಗೆ ಒಂದು ಹಾಗೂ ಇಲ್ಲದವರಿಗೆ ಒಂದು ನೀತಿಯನ್ನು ಮಾಡಿಕೊಂಡು, ಮಳೆ ನೀರು ಹೋಗಬೇಕಾದ ಚರಂಡಿಯಲ್ಲಿ ಎಲ್ಲಾ ಮನೆ,ಅಂಗಡಿಗಳ ಕೊಳಚೆ ನೀರು ನೇರವಾಗಿ ಬಿಡುವ ಕಾರಣ ,ಉಪ್ಪಿನಂಗಡಿ ಪೇಟೆ ಮತ್ತು ಪರಿಸರ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿವೆ.
ವಾರ್ಷಿಕವಾಗಿ ಅತೀ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲು ಆಗುವ ಪ್ರದೇಶ ಕೂಡ ಆಗಿದ್ದು, ಪಂಚಾಯತ್ ನ ಅವಗಣನೆಯಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದ್ದು ಅನಾರೋಗ್ಯಕ್ಕೆ ಗುರಿಹಾಗುವ ಬಗ್ಗೆ ಪೋಷಕರು ಆಶಂಕೆಯನ್ನು ವ್ಯಕ್ತ ಪಡಿಸುತ್ತಾ ಇದ್ದಾರೆ.
ನೀರು ಮತ್ತು ನೈರ್ಮಲ್ಯ ಎನ್ನುವ ಸಮಿತಿ ಇದ್ದು ಅವರ ಕಣ್ಣ ಮುಂದೆ ಇರುವ ಈ ಶೋಚನೀಯ ಸ್ಥಿತಿಯ ಬಗ್ಗೆ ಮೌನವಾಗಿದ್ದಾರೆ. ಎಲ್ಲವೂ ಕಾಂಚಾಣಮಯ ಆಗಿರುವ ಈ ವ್ಯವಸ್ಥೆಯಲ್ಲಿ ಈ ಪುಟ್ಟ ಪುಟ್ಟ ಮಕ್ಕಳಿಗೆ ನ್ಯಾಯ ಯಾವಾಗ?, ಅಭಿವೃದ್ಧಿ ಅಧಿಕಾರಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರವಾಗುವುದು ಯಾವಾಗ ?
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.