ಬಂಟ್ವಾಳ (www.vknews. in) : ಪಾಣೆಮಂಗಳೂರು ಸಮೀಪದ ನೆಹರುನಗರ-ಪಿತ್ತಿಲಗುಡ್ಡೆ ನಿವಾಸಿ ಮರ್ ಹೂಂ ಪಿ.ಎ. ಹಸನ್ ಅವರ ಪುತ್ರಿ ಇರ್ಫಾನಾ ಅವರ ವಿವಾಹವು ಕಲ್ಲಡ್ಕ ಸಮೀಪದ ಕೆ.ಸಿ.ರೋಡ್ ನಿವಾಸಿ ಕೆ ಇಸ್ಮಾಯಿಲ್ ಅವರ ಪುತ್ರ ಅಬ್ದುಲ್ ಅಝೀಝ್ ಎಂಬ ವರನೊಂದಿಗೆ ಹಾಗೂ ಇಸ್ಮಾಯಿಲ್ ಅವರ ಪುತ್ರಿ ಝುಬೈದಾ ಬಾನು ಅವರ ವಿವಾಹವು ಮೂಡಬಿದ್ರೆ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಮುಹಮ್ಮದ್ ಫಯಾಝ್ ಎಂಬ ವರನೊಂದಿಗೆ ಜುಲೈ 4 ರ ಗುರುವಾರ ಬಿ.ಸಿ.ರೋಡು ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಕಮ್ಯುನಿಟ್ ಸಭಾಂಗಣದಲ್ಲಿ ನೆರವೇರಿತು.
ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ದಾರಿಮಿ, ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್ ಉಸ್ಮಾನ್ ದಾರಿಮಿ ಫರಂಗಿಪೇಟೆ, ಬಶೀರ್ ಮದನಿ ಕೂಳೂರು, ಇಸ್ಮಾಯಿಲ್ ಸಅದಿ ಮಾಚಾರ್, ಅಬ್ದುಲ್ ಮಜೀದ್ ಮುಸ್ಲಿಯಾರ್ ಬಡಕಬೈಲು, ಉದ್ಯಮಿ ಹಾಜಿ ಪಿ ಎಸ್ ಅಬ್ದುಲ್ ಹಮೀದ್, ನೂರುದ್ದೀನ್ ಮಾಸ್ಟರ್, ಅಬ್ದುಲ್ ಹಮೀದ್ ಮಾಸ್ಟರ್ ಅಕ್ಕರಂಗಡಿ ಮೊದಲಾದವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.