(www.vknews. in) ; ತುಮಕೂರಿನ ಕನ್ನಡ ಭವನದಲ್ಲಿ ನಡೆದ ಮುಸ್ಲಿಂ ಬಾಂಧವ್ಯ ವೇದಿಕೆಯ ವಾರ್ಷಿಕ ಪದಗ್ರಹಣ ಸಮಾರಂಭಕ್ಕಿಂತ ಮುಂಚೆ ವೇದಿಕೆಯ ಸದಸ್ಯರೆಲ್ಲರೂ ಸಿದ್ದಗಂಗಾ ಮಠ ಭೇಟಿ ಮಾಡಿ ಸಿದ್ದಲಿಂಗ ಸ್ವಾಮೀಜಿಗಳೊಂದಿಗೆ ಪ್ರಸಕ್ತ ರಾಜಕೀಯ ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚಿಸಿದರು.
ತಂಡದ ನೇತೃತ್ವ ವಹಿಸಿದ ವೇದಿಕೆಯ ಗೌರವಾಧ್ಯಕ್ಷ ಎಸ್ ಬಿ ದಾರಿಮಿ” ರಾಜ್ಯದಲ್ಲಿ ಕೋಮು ಸೌಹಾರ್ದ ಹದೆಗಡುತ್ತಿರುವ ಸಂದರ್ಭದಲ್ಲಿ ಮಠಾಧಿಪತಿಗಳು ಮಧ್ಯಪ್ರವೇಶಿಸಿ ದುಷ್ಟ ಶಕ್ತಿಗಳ ಮೇಲೆ ನಿಯಂತ್ರಣವನ್ನು ಹೊಂದಬೇಕು,, ಕೆಲವೊಮ್ಮೆ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮೌನ ಸಮಾಜಘಾತುಕರ ಪಾಲಿಗೆ ಸಮ್ಮತಿಯಾಗಿ ಕಾಣಿಸಿಕೊಳ್ಳುವ ಸಂಭವನೀಯತೆ ಇರುತ್ತದೆ. ಹಾಗಾಗಬಾರದು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿಯ ಮರುಸ್ಥಾಪನೆಯ ಅಗತ್ಯವಿದೆ, ಮಠಾಧೀಶರು ಸೇರಿದಂತೆ ಸಮಾಜದ ಎಲ್ಲರೂ ಇದಕ್ಕೆ ಕೈಜೋಡಿಸಬೇಕು. ರಾಜ್ಯದ ಪ್ರಮುಖ ಮಠವೆಂಬ ನೆಲೆಯಲ್ಲಿ ಪೀಠಾಧಿಪತಿಗಳಾದ ತಾವು ಕೋಮು ಸೌಹಾರ್ದ ಗಟ್ಟಿಗೊಳ್ಳಲು ನಿರ್ಣಾಯಕ ಭೂಮಿಕೆ ನಿಭಾಯಿಸಬೇಕು” ಎಂದು ಸಿದ್ದಲಿಂಗ ಸ್ವಾಮಿಗಳಿಗೆ ಮನವಿ ಮಾಡಿದರು..
ಮಠ ಭೇಟಿಯ ನಂತರ ತುಮಕೂರು ಪ್ರೆಸ್ ಕ್ಲಬ್ ನಲ್ಲಿ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿ ನಡೆಯಿತು. ನಂತರ ಕನ್ನಡ ಭವನದಲ್ಲಿ ನಡೆದ ವೇದಿಕೆಯ ವಾರ್ಷಿಕ ಪದಗ್ರಹಣ ಸಮಾರಂಭದಲ್ಲಿ ಈ ವರ್ಷದ ನೂತನ ಅಧ್ಯಕ್ಷರಾಗಿ ಮೈಸೂರಿನ ಸುಹೇಲ್ ಅಹಮದ್ ಮರೂರ್, ಕಾರ್ಯದರ್ಶಿಗಳಾಗಿ ಶಿವಮೊಗ್ಗ ಜಿಲ್ಲೆಯ ಡಾ. ಹಕೀಮ್ ತೀರ್ಥಹಳ್ಳಿ ಅಧಿಕಾರ ವಹಿಸಿಕೊಂಡರು. ರಾಜ್ಯ ಪ್ರಶಸ್ತಿ ವಿಜೇತ ಚಾರ್ಮಾಡಿ ಹಸನಬ್ಬರನ್ನು ಜೀವಮಾನದ ಸಮಾಜಸೇವೆಗಾಗಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ಮುಂದಾಳುಗಳಾದ ಅನಿಸ್ ಪಾಷಾ, ಮುಷ್ತಾಕ್ ಹೆನ್ನಾಬೈಲ್, ರಫೀಕ್ ನಾಗುರ್, ಜಮೀರ್ ಅಹಮದ್ ರಷಾದಿ, ಇಬ್ರಾಹಿಂ ಸಾಹೇಬ್ ಕೋಟ, ಅಶ್ರಫ್ ಕುಂದಾಪುರ, ಮುಬಾರಕ್ ಗುಲ್ವಾಡಿ, ಅಬ್ದುಲ್ ರೌಫ್, ಅಸ್ಲಾಂ ಹೈಕಾಡಿ, ನಜೀರ್ ಬೆಳುವಾಯಿ, ರೆಹಮತ್ ದಾವಣಗೆರೆ, ಮುಹಮ್ಮದ್ ಪೀರ್ ಲಟಗೇರಿ, ಮುಜಫರ್ ಹುಸೇನ್, ನಾಸಿರ್ ಅಹಮದ್ ಚಿಕ್ಕಮಗಳೂರು, ಚಮನ್ ಷರೀಫ್, ಅಸ್ಲಮ್ ಪಾಷಾ ನ್ಯಾಮತಿ, ದಸ್ತಗೀರ್ ತುಮಕೂರು ಮುಂತಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.