(www.vknews.in) : ಶೈಖುನ ತಾಜುಲ್ ಉಲಮಾ ಸೈಯದ್ ಅಬ್ದುಲ್ ರಹಮಾನ್ ಅಲ್ ಬುಖಾರಿ ಉಳ್ಳಾಲ ತಂಞಳ್ ರವರ ಸುಪುತ್ರರೂ, ತನ್ನ ಇರುವಿಕೆಯ ಮೂಲಕ ಕುಗ್ರಾಮವಾಗಿದ್ದ ಈಗಿನ ಕಡಬ ತಾಲೂಕಿಗೆ ಒಳಪಟ್ಟ ‘ಕೂರ’ ಪ್ರದೇಶವನ್ನು ಪ್ರಪಂಚಕ್ಕೆ ಪರಿಚಯಿಸಿದ ಶೈಖುನ ಸೈಯದ್ ಫಜಲ್ ಕೊಯಮ್ಮ ಅಲ್ ಬುಖಾರಿ ಕೂರತ್ ತಂಙಳ್ ರವರು ಇಂದು ನಮ್ಮನ್ನಗಲಿದ್ದಾರೆ.
ತನ್ನ ಬದುಕಿನದ್ದಕ್ಕೂ ಸರಳ ಮತ್ತು ಉದಾತ್ತ ಚಿಂತನೆಗಳ ಮೂಲಕ ಸಮುದಾಯದ ಮತ್ತು ಸಮಾಜದ ಮಾರ್ಗದರ್ಶಕರಾಗಿದ್ದು, ಸರ್ವಸಮುದಾಯದವರು ಅತ್ಯಂತ ಪ್ರೀತಿಯಿಂದ, ಗೌರವದಿಂದ ಕಾಣುತ್ತಿದ್ದ ಕೂರತ್ ತಂಗಳ್ ರವರು, ಧಾರ್ಮಿಕ ವಿಚಾರದಲ್ಲಿ ಎಂದು ರಾಜಿ ಮಾಡಿಕೊಂಡವರಲ್ಲ.ಅವರ ಮಾತುಗಳು ನಿಷ್ಟುರವಾಗಿದ್ದರೂ, ಆ ಮಾತಿನಲ್ಲಿ ಧಾರ್ಮಿಕ ವಿಚಾರ ಅಡಕವಾಗಿತ್ತು.ಲೌಕಿಕ ಜೀವನಕ್ಕಿಂತ ಪರಲೋಕದ ಜೀವನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದ ಅವರು,ಅತಿ ಬೇಗನೆ, ಬಾರದ ಲೋಕಕ್ಕೆ ಪಯಣ ಬೆಳೆಸುವುದರ ಮೂಲಕ, ಅಸಂಖ್ಯಾತ ಅನುವಾಯಿಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿದರು.
ಕಷ್ಟಕಾಪಣ್ಯಗಳನ್ನು ಹೇಳಿ ತನ್ನ ಹತ್ತಿರ ಬರುತ್ತಿರುವವರನ್ನು ಸಮಾನವಾಗಿ ಕಾಣುತ್ತಿದ್ದ ಇವರು, ಧನಿಕ,ಬಡವ, ಪ್ರಭಾವಿ ಎಂದು ನೋಡುತ್ತಿರಲಿಲ್ಲ. ಏನನ್ನು ಹೇಳಬೇಕು ಅದನ್ನು ಅತ್ಯಂತ ನಿಖರವಾಗಿ ಹೇಳುತ್ತಿದ್ದರು. ಹಲವಾರು ಜಮಾಹತುಗಳಿಗೆ ಖಾಝಿಗಳಾಗಿದ್ದ, ಇವರು, ಖಾಝಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಅಪರೂಪದಲ್ಲಿ ಅಪರೂಪದ ವ್ಯಕ್ತಿಯಾಗಿದ್ದರು.ಅಲ್ಲಾಹು ಅವರಿಗೆ ಸ್ವರ್ಗ ಕರುಣಿಸಲಿ. ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ನಮ್ಮೆಲ್ಲರಿಗೂ ನೀಡಲಿ. ಆಮೀನ್.
ನೂರುದ್ದೀನ್ ಸಾಲ್ಮರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.