ಬಂಟ್ವಾಳ (www.vknews. in) : ಬಾಡಿಗೆ ಇದೆ ಎಂದು ಮನೆಯಿಂದ ಗುರುವಾರ ಮುಂಜಾನೆ ತೆರಳಿದ್ದ ಬಳಿಕ ನಾಪತ್ತೆಯಾಗಿದ್ದ ಅಟೋ ರಿಕ್ಷಾ ಚಾಲಕ ಕುಕ್ಕಿಪ್ಪಾಡಿ ನಿವಾಸಿ ಗಿರೀಶ್ (37) ಅವರ ಮೃತದೇಹ ಶುಕ್ರವಾರ ಸಂಜೆ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.
ಗಿರೀಶ್ ಗುರುವಾರ ಮುಂಜಾನೆ ಬಾಡಿಗೆ ಹೋಗಲು ಇದೆ ಎಂದು ಹೇಳಿ ಮನೆಯಿಂದ ತೆರಳಿದ್ದು, ಈ ವೇಳೆ ಗಸ್ತು ಕಾರ್ಯನಿರ್ವಹಿಸುತ್ತಿದ್ದ ಪೋಲೀಸರು ಪೊಳಲಿ ಸೇತುವೆ ಮೇಲೆ ರಿಕ್ಷಾ ನಿಂತಿದ್ದನ್ನು ಗಮನಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸಿದ ಪೋಲೀಸರು ರಿಕ್ಷಾದಲ್ಲಿ ಯಾರೂ ಇಲ್ಲದೇ ಇರುವುದರಿಂದ ಗಿರೀಶನ ಮನೆಗೆ ಮಾಹಿತಿ ನೀಡಿದ್ದರು. ಗಿರೀಶ್ ಅವರು ಅಡ್ಡೂರು-ಪೋಳಲಿ ಸೇತುವೆಯ ಮೇಲೆ ವಾಹನ ನಿಲ್ಲಿಸಿ ಫಲ್ಗುಣಿ ನದಿಗೆ ಹಾರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದೀಗ ಗಿರೀಶ್ ಅವರ ಮೃತದೇಹವು ಅಡ್ಡೂರು-ಕೆಳಗಿನಕೆರೆಯಲ್ಲಿ ಪತ್ತೆಯಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಿರೀಶ್ ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.