(www.vknews. in) ; ಭಾರತದ ಹಜ್ ಕಮಿಟಿ ದಿನಾಂಕ 03-07-2024ರಂದು ಹೊರಡಿಸಿದ ಅತಿ ಮುಖ್ಯ ಸುತ್ತೋಲೆಯನ್ನು ಈ ಮೇಲೆ ಲಗತ್ತಿಸಲಾಗಿದೆ. ಆ ಸುತ್ತೋಲೆಯಲ್ಲಿ ತಿಳಿಸಿರುವಂತೆ ಸೌದಿ ಅರೇಬಿಯಾ ಸರ್ಕಾರದ “ಹಜ್ ಮತ್ತು ಉಮ್ರಾಹ್” ಸಚಿವಾಲಯದ ಸೂಚನೆಯಂತೆ , ಸೌದಿಯ ರಿಯಾದ್ನಲ್ಲಿರುವ ಭಾರತೀಯ ದೂತವಾಸವು 2025ರ ಹಜ್ ಯಾತ್ರಾ ಪ್ರಕ್ರಿಯೆಗಳನ್ನು ಬಲು ಬೇಗ ಪ್ರಾರಂಭಿಸಬೇಕಾಗಿದೆ.
ಭಾರತ ಹಜ್ ಕಮಿಟಿಯ ಮೂಲಕ 2025ರಲ್ಲಿ ಹಜ್ ಯಾತ್ರೆ ಕೈಗೊಳ್ಳ ಬಯಸುವವರು ಗಮನಿಸ ಬೇಕಾದ ಅತಿ ಮುಖ್ಯ ವಿಷಯವೆಂದರೆ:-
1. ಹಜ್ ಕಮಿಟಿ 2025ರ ಹಜ್ ಪ್ರಕ್ರಿಯೆಗಳನ್ನು ಇದೇ 2024ರ ಜುಲೈ ತಿಂಗಳ ಕೊನೇಯ ವಾರದಲ್ಲಿ ಅಥವ ಆಗಷ್ಟ್ ತಿಂಗಳ ಪ್ರಥಮ ವಾರದಲ್ಲಿ ಪ್ರಾರಂಭಿಸಲಿದೆ
2. 2025ರಲ್ಲಿ ಹಜ್ ಯಾತ್ರೆ ಕೈಗೊಳ್ಳ ಬಯಸುವವರು ದಿನಾಂಕ 15-01-2026ರ ವರೆಗೆ ಸಿಂಧುತ್ವ ಹೊಂದಿರುವ ಅಂತರ್ರಾಷ್ಟ್ರೀಯ ಮಿಷನ್ ರೀಡಬಲ್ ಪಾಸ್ಪೋರ್ಟ್ ಸಿದ್ದಪಡಿಸಿ ಇಟ್ಟುಕೊಳ್ಳ ಬೇಕು.
2025ರ ಹಜ್ ಬಗ್ಗೆ ಹೆಚ್ಚಿನ ವಿವರಗಳು ಅಗತ್ಯವಿದ್ದರೆ ಸೆಂಟ್ರಲ್ ಕಮಿಟಿಯ ಜನಾಬ್ ಗಫೂರ್ರವರನ್ನು ಸಂಪರ್ಕಿಸಿರಿ. ಮೊಬೈಲ್ ನಂಬರ್ : 9916647651
— ಮುಹಮ್ಮದ್ ಅಲಿ ಕಮ್ಮರಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.