(www.vknews. in) ; ತನ್ನ 16 ವರ್ಷದಲ್ಲಿ ಪಾಣಕ್ಕಾಡ್ ಮುಹಮ್ನದ್ ಅಲಿ ಶಿಹಾಬ್ ತಂಙಳ್ ರವರ ಆಲಿಂಗನದಿಂದ ಪುಳಕಿತರಾಗಿ ಮುಸ್ಲಿಂ ಲೀಗಿನಲ್ಲಿ ಸಕ್ರೀಯರಾದ ಎ.ಪಿ ಉನ್ನಿಕೃಷ್ಣನ್ ರವರಿಗೆ ಮುಸ್ಲಿಂ ಲೀಗಿನ ಇತಿಹಾಸದಲ್ಲಿ ಬಹುದೊಡ್ಡ ಸ್ಥಾನವಿದೆ. 12 ಶಾಸಕರಿರುವ ಪಾಣಕ್ಕಾಡ್ ಸಾದಾತುಗಳು ಮಾತ್ರ ನೇತೃತ್ವ ವಹಿಸುವ ಮುಸ್ಲಿಂ ಲೀಗಿನ ಶಕ್ತಿ ಕೇಂದ್ರವಾಗಿರುವ ಮಲಪ್ಪುರಂ ಜಿಲ್ಲಾ ಮುಸ್ಲಿಂಲೀಗಿನ ಕಾರ್ಯಕಾರಣಿಯಲ್ಲಿ ಕಾರ್ಯದರ್ಶಿ ಎನ್ನುವ ಮಹತ್ತರವಾದ ಜವಾಬ್ದಾರಿ ನಿರ್ವಹಿಸಿದ್ದ ಎ.ಪಿ ಉನ್ನಿ ಕೃಷ್ಣನ್ ಸಾರ್, ಮಲಪ್ಪುರಂ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಗೈದರು.
ಕೇರಳ ರಾಜ್ಯ ದಲಿತ ಲೀಗ್ ಅಧ್ಯಕ್ಷರಾಗಿ ಪಕ್ಷಕ್ಕೆ ದಲಿತ -ಮುಸ್ಲಿಂ ಸಖ್ಯದ ನಿಟ್ಟಿನಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಅವರು ಇಂದು ನಿಧನರಾದರು. ಅವರ ಪ್ರಸರ್ಥವ ಶರೀರವನ್ನು ಪಾಣಕ್ಕಾಡ್ ಸಾದಾತುಗಳು ಸಂದರ್ಶಿಸಿ ಕುಟುಂಬ ವರ್ಗಕ್ಜೆ ಸಾಂತ್ವನ ಹೇಳಿದರು.
ಎ ಪಿ ಉನ್ನಿ ಕೃಷ್ಣನ್ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಸಂತಾಪ
ಎ ಪಿ ಉನ್ನಿಕೃಷ್ಣನ್ ನಿಧನದ ವರ್ತೆ ಹೇಳಿ ತುಂಬ ದುಃಖವಾಯಿತು ಅವರ ನಿಧನವು ಮುಸ್ಲಿಂ ಲೀಗ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾದ ಸಿ ಅಬ್ದುಲ್ ರಹಮಾನ್ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಜಿಲ್ಲಾ ಕೋಶ ಅಧಿಕಾರಿ ರಿಯಾಝ್ ಹರೇಕಳ ಸಂತಾಪ ವ್ಯಕ್ತಪಡಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.