(www.vknews. in) ; ಕಡಬ ತಾಲೂಕಿನ ಬಲ್ಯ ಗ್ರಾಮ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಯ ಇಲ್ಲಿಯ ಹಂಚಿನ ಮಾಡು(14/04/2024) ನಿನ್ನೆಯ ದಿನ ಬೀಸಿದ ಬಾರೀ ಗಾಳಿ ಮಳೆಗೆ ಸಂಪೂರ್ಣವಾಗಿ ಹಾರಿ ಹೋಗಿದ್ದು, ಮಕ್ಕಳಿಗೆ ರಜೆ ಇದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ದಿನ ಮದ್ಯಾಹ್ನ 12 ಗಂಟೆಗೆ ಬೀಸಿದ ಸುಂಟರಗಾಳಿಗೆ ಶಾಲೆಯ ಹಂಚಿನ ಮಾಡು ಪೂರ್ಣವಾಗಿ ಹಾರಿ ಹೋಗಿದ್ದು ಇದರ ಬಗ್ಗೆ ಈಗಾಗಲೇ ಇಲಾಖೆಗಳ ಗಮನಕ್ಕೆ ತರಲಾಗಿದ್ದು ಸ್ಥಳೀಯ ಶಾಸಕರು, ಪಂಚಾಯತ್ ಅಧ್ಯಕ್ಷರು ,ಪಂಚಾಯತ್ ಸದಸ್ಯರು, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ರ ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು,ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಲ್ಲರೂ ಬಂದು ಸ್ಥಳ ಪರಿಶೀಲನೆ ಮಾಡಿದ್ದು ಮಕ್ಕಳು ಅನಾಹುತದಿಂದ ಪಾರಾಗಿರುವ ಬಗ್ಗೆ ,ಹಾಗೂ ಮುಂದಿನ ಕ್ರಮಗಳನ್ನು ಕೈ ಗೊಳ್ಳುವ ಬಗ್ಗೆ ಚರ್ಚಿಸಿದರು.
ಆದರೆ ಜಿಲ್ಲಾ ವಿಪತ್ತು ನಿರ್ವಹಣೆಯ ಹೊಣೆಯಿರುವಂತಹ ಸ್ಥಳೀಯ ಗ್ರಾಮ ಕರಣಿಕರು ಹಾಗೂ ತಹಶೀಲ್ದಾರ್ ರವರು ಘಟನೆ ನಡೆದು 24 ಗಂಟೆ ಕಳೆದರೂ ಕೂಡ ಸ್ಥಳ ಪರಿಶೀಲನೆ ಮಾಡಿ ತುರ್ತು ಕ್ರಮ ಕೈ ಗೊಳ್ಳದೆ ಇರುವ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪೋಷಕರು ಮಕ್ಕಳ ಶಿಕ್ಷಣ ಹಾಗೂ ಸುರಕ್ಷೆಯ ಬಗ್ಗೆ ವ್ಯಾಕುಲರಾಗಿದ್ದು, ಶಾಲೆಯ ಎಲ್ಲಾ ಕೊಠಡಿಗಳು ಕೂಡ ಸರಿ ಮಾಡಿ ಕೊಡುವಂತೆಯೂ ಇಲ್ಲದಿದ್ದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯ ಬಗ್ಗೆ ದುಃಖವನ್ನು ಹಂಚಿಕೊಂಡಿದ್ದರು.
ಐದು ವರ್ಷದಿಂದ ಶಾಲೆಯ ಸುರಕ್ಷೆಯ ಬಗ್ಗೆ ಹಲವು ಮನವಿಗಳನ್ನು ಕೊಟ್ಟಿದ್ದು ಕೂಡ ಯಾವುದೇ ರೀತಿಯ ಪ್ರತ್ರಿಕ್ರಿಯೆ ಇಲ್ಲದೆ ಮಕ್ಕಳಿಗೆ ಏನಾದರೂ ಅನಾಹುತವನ್ನು ಆಗಿ ಕಾಣಲು ಸರಕಾರ ಹಾಗೂ ಇಲಾಖೆಯು ಕಾಯುತ್ತಿದೆಯೇ ಎನ್ನುವ ಸಂಶಯ ಸಾರ್ವಜನಿಕರಲ್ಲಿ ಮನೆ ಮಾಡುತ್ತಿವೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.