(www.vknews. in) ; ಸಾಮಾಜಿಕ ಮುಖಂಡ, ಸಾಹಿತಿ ಡಿ.ಐ.ಅಬೂಬಕರ್ ಕೈರಂಗಳ ಅವರು ಕಳೆದ ಏಳುನೂರು ದಿನಗಳಿಂದ ಪ್ರತಿದಿನ ನುಡಿಮುತ್ತುಗಳನ್ನು ಬರೆಯುತ್ತಿದ್ದಾರೆ. ಸಾಮಾನ್ಯವಾಗಿ ಹಲವಾರು ನುಡಿಮುತ್ತುಗಳು ಸಾಮಾಜಿಕ ತಾಣಗಳಲ್ಲಿ ಬರುತ್ತಿದ್ದರೂ ಡಿ.ಐ.ಅಬೂಬಕರ್ ಕೈರಂಗಳ ಅವರ ನುಡಿಮುತ್ತುಗಳು ಜನಮಾನಸದಲ್ಲಿ ಸ್ಥಾನ ಹಿಡಿದು ಹೊಸ ಕ್ರಾಂತಿ ಸೃಷ್ಟಿಸಿದೆ.
ಇಂದು ಡಿ.ಐ.ಅಬೂಬಕರ್ ಕೈರಂಗಳ ಅವರ ನುಡಿಮುತ್ತು ಮತ್ತೊಂದು ವಿಶಿಷ್ಟತೆಯನ್ನು ಪಡೆಯಿತು. ಲೇಖಕರೂ ಕ್ಯಾಲಿಗ್ರಫಿ ಪ್ರವೀಣರೂ ಆದ ಕೆ.ಎಂ.ಅಶ್ರಫ್ ಕುರ್ನಾಡು ಅವರು ತಾನು ಸೇವೆ ಸಲ್ಲಿಸುವ ಮದ್ರಸ ತರಗತಿಯಲ್ಲಿ ಕ್ಯಾಲಿಗ್ರಫಿ ಡಿಸೈನ್ ಮಾಡುವಾಗ ” ಪೆನ್ನು ಐದು ರೂಪಾಯಿಗೆ ಸಿಗಬಹುದು,ಬರೆಯುವ ಪ್ರತಿಭೆ ಸುಲಭದಲ್ಲಿ ಸಿಗಲ್ಲ ” ಎಂಬ ನುಡಿಮುತ್ತನ್ನು ಸುಂದರವಾಗಿ ಮದ್ರಸದ ಗೋಡೆಯಲ್ಲಿ ಪಡಿಮೂಡಿಸುವ ಮೂಲಕ ಇಂದಿನ ನುಡಿಮುತ್ತನ್ನು ಶಾಶ್ವತ ಗೊಳಿಸಿದ್ದಾರೆ !!! ಹಿಂದೆ ಹಿರೇಮಠ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಸಾದ ವಿತರಿಸುವ ಜಾಗದಲ್ಲಿ ” ಮಾತು ಮಲಿನವಾಗಬಾರದು,ಮಾತಿಗೆ ಮಹತ್ವವಿರಬೇಕು ” ಎಂಬ ನುಡಿಮುತ್ತನ್ನು ಬರೆದಿದ್ದರು! ಹಿಂದೆ ದೇವಸ್ಥಾನದಲ್ಲಾದರೆ ಇಂದು ಮದ್ರಸದಲ್ಲಿ! ನಿಜಕ್ಕೂ ಇದು ಡಿ.ಐ.ಅಬೂಬಕರ್ ಕೈರಂಗಳ ಅವರ ಬರಹದ ಪವರ್ ಎಂದೇ ಹೇಳಬೇಕು.
ಹಿಂದಿನಿಂದಲೂ ಸರ್ವ ಜನ ಬಾಂಧವರ ಜತೆ ಆತ್ಮೀಯ ಸಂಬಂಧವನ್ನಿಟ್ಟಿರುವ ಡಿ.ಐ.ಅಬೂಬಕರ್ ಕೈರಂಗಳ ಪತ್ರಿಕೆಗಳ ಮೂಲಕ ಇತಿಹಾಸ ಸೃಷ್ಟಿಸಿದ ಒಬ್ಬ ಅತ್ಯುತ್ತಮ ಪತ್ರಕರ್ತ ಕೂಡ ಹೌದು. ಜನರನ್ನು ಗೌರವ ದಿಂದ ಕಂಡು ಅವರ ಸುಖ ದುಃಖ ಗಳನ್ನು ಕೇಳಿ ತಿಳಿಯುವುದು ಡಿ.ಐ.ಅಬೂಬಕರ್ ಕೈರಂಗಳ ಅವರ ಗುಣಗಳಲ್ಲೊಂದು. ಈಗ ತುಳುನಾಡ ರಕ್ಷಣಾ ವೇದಿಕೆಯ ಮೂಲಕ ಸಾರ್ವಜನಿಕ ರಂಗದಲ್ಲಿ ಮಿಂಚುತ್ತಿರುವ ಇವರು ಮದರಂಗಿ ಪತ್ರಿಕೆ ಪ್ರಕಾಶಕರಾಗಿದ್ದಾರೆ.
ಕೆ.ಎ.ಅಬ್ದುಲ್ ಅಝೀಝ್ ಪುಣಚ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.