ಮೂಲ್ಕಿ (www.vknews.in) : ಶಾಫಿ ಜುಮ್ಮಾ ಮಸೀದಿ(ರಿ.)ಕೆ.ಎಸ್.ರಾವ್ ಕೊಲ್ನಾಡ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ಮಸೀದಿ ವಠಾರದಲ್ಲಿ ನಡೆಸಲಾಯಿತು.
ಆಡಳಿತ ಸಮಿತಿಯ ಅಧ್ಯಕ್ಷರಾದ ಬಶೀರ್ ಅಹಮ್ಮದ್ ಧ್ವಜಾರೋಹಣ ಗೈದರು ಮಸೀದಿಯ ಖತಿಬ್ ಉಸ್ತಾದರಾದ ಶರೀಫ್ ದಾರಿಮಿ ಅಲ್ ಹೈತಮಿ ರವರು ಸ್ವಾತಂತ್ರ ಸಂಗಮದ ಕುರಿತು ಹಿತವಚನ ನೀಡಿದರು.ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ M.E ಹನೀಫ್,ಉಪಾಧ್ಯಕ್ಷರಾದ ಹಸನಬ್ಬ ಕೋಟೇಶ್ವರ,ಕೋಶಾಧಿಕಾರಿ M.M ಬಾವ,ಆಡಳಿತ ಸಮಿತಿಯ ಪದಾಧಿಕಾರಿಗಳು,ಮದರಸದ ಉಸ್ತಾದರುಗಳು,ಊರಿನ ಹಿರಿಯ ಕಿರಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಮದರಸದ ಸದರ್ ಉಸ್ತಾದ್ ರಾದ ಇಮ್ರಾನ್ ದಾರಿಮಿಯವರು ಸರ್ವರಿಗೂ 78ನೇ ಸ್ವಾತಂತ್ರೋತ್ಸವದ ಶುಭಾಶಯ ಕೋರಿ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.