ಮೂಲ್ಕಿ (www.vknews. in) : ಕೊಲ್ನಾಡ್ ಫ್ರೆಂಡ್ಸ್ ಕೊಲ್ನಾಡ್ ಇವರ ನೇತೃತ್ವದಲ್ಲಿ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಮಕ್ಕಳಿಗೆ ಮತ್ತು ಹಿರಿ ಯರಿಗೆ ಆಯೋಜಿಸಿರುವ ಹಗ್ಗ ಜಗ್ಗಟ,ಬಲೂನ್ ಒಡೆತ,ಗೋಣಿಚೀಲಓಟ,ಚಮಚ ಲಿಂಬೆಆಟ ಇನ್ನೂ ಹಲವಾರು ಕ್ರೀಡಾಕೂಟವು ಕೆ.ಇ.ಬಿ ವಠಾರದಲ್ಲಿ ನಡೆಯಿತು
ಬೆಳಿಗ್ಗೆ 10ಗಂಟೆಗೆ ಕ್ರೀಡಾ ಕೂಟವು ಪ್ರಾರಂಭವಾಗಿ ಸಂಜೆ ಸಮಾರೋಪ ಸಮಾರಂಭವು ನಡೆಯಿತು.ನಂತರ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳಿಗಳಿಗೆ ಬಹುಮಾನ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ BM.ಇದ್ದೀನಬ್ಬಾ,ಶರೀಫ್ ಧಾರಿಮಿ ಅಲ್ ಹೈತಮಿ,ಡೆನ್ ಲಾಕ್ ಮಾಲಕರಾದ ರೈಝ್,ಅಬ್ದುಲ್ಲಾ ಮಹಮ್ಮದ್,ಖಾದರ್ah,ಅಹಮ್ಮದ್ ನೌಝಲ್,ಇಮ್ರಾನ್ ರೋಯಲ್,ಇಮ್ರಾನ್, ಮಹಮ್ಮದಾಲಿ, ಬಶೀರ್ ಕುಳಾಯಿ, ಅಲ್ತಾಫ್, ತಾವುಸೀಫ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಇದ್ದೀನಬ್ಬಾ ಹಾಗೂ ಸಮಾಜ ಸೇವಕರಾದ ತಾವುಸೀಫ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಶಾಯೀರ್ ಕೊಲ್ನಾಡ್ ಸ್ವಾಗತಿಸಿ ಅನಿಸ್ ಕೊಲ್ನಾಡ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.