(www.vknews. in) DKSC ಮದೀನಾ ಮುನವ್ವರ ಘಟಕದ ವತಿಯಿಂದ ವಿಜ್ರಂಭಣೆಯಿಂದ ನಡೆದ ನೂರೇ ಮದೀನ ಮಿಲಾದ್ ಕಾನ್ಫರೆನ್ಸ್
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ)ಮಂಗಳೂರು ಇದರ ಮಕ್ಕತುಲ್ ಮುಕ್ಕರ್ರಮ ವಲಯ ಸಮಿತಿಯ ಅದೀನದಲ್ಲಿರುವ ಮದೀನ ಮುನವ್ವರ ಘಟಕದ ಕಾರ್ಯಕ್ರಮವು ನಗರದ ರೈಲ್ವೇ ಸ್ಟೇಶನ್ ನ ಹತ್ತಿರದ ಇಸ್ತಿರಾಹ್ ಅಲ್ ರಖಿಯಾದಲ್ಲಿ ದಿನಾಂಕ 19/09/2024 ರ ಗುರುವಾರ ರಾತ್ರಿ 12 ಘಂಟೆಗೆ ವಲಯ ಅರ್ಗನೈಝರ್ ಬಹು॥ ಅಶ್ರಫ್ ಸಖಾಫಿ ಕುಂಬಕೋಡು ರವರ ನೇತ್ರತ್ವದಲ್ಲಿ ನಡೆಯಿತು, ಘಟಕ ಉಪಾದ್ಯಕ್ಷರಾದ ಬಹು॥ ಅಶ್ರಫ್ ಸಖಾಫಿ ನೂಜಿಯವರ ನೇತ್ರತ್ವದಲ್ಲಿ ಬುರ್ದಾ ಆಲಾಪಣೆ ಮತ್ತು ಇಸ್ಲಾಮಿಕ್ ಕ್ವಿಝ್ ಗಳು ಕಾರ್ಯಕ್ರಮಕ್ಕೆ ಇನಷ್ಟು ಮೆರುಗು ನೀಡಿತು,ವಲಯ ಸಮಿತಿ ಅದ್ಯಕ್ಷ ಇಸ್ಮಾಯಿಲ್ ಮೂಡಿಗೆರೆ,ಕೇಂದ್ರ ಸಮಿತಿ ಉಪಾದ್ಯಕ್ಷ ಶರೀಫ್ ಮರವೂರು,ಕೇಂದ್ರ ಸಮಿತಿ ಸದಸ್ಯ ಜಮಾಲ್ ಕಣ್ಣಂಗಾರ್ ಹಾಗೂ ಘಟಕ ಸಮಿತಿ ಅದ್ಯಕ್ಷ ಶರ್ಫ್ರಾಝ್ ಕುಪ್ಪೆಪದವು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸುರಿಬೈಲ್, ಮುಹಮ್ಮದಾಲಿ ಪಾಣೆಮಂಗಳೂರು, ಇಕ್ಬಾಲ್ ಕುಪ್ಪೆಪದವು, ಮನ್ಸೂರ್ ಉಚ್ಚಿಲ, ಬದ್ರುದ್ದೀನ್ ಕಬಕ ಮತ್ತು ಇತರ ನೇತಾರರೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮಹಿಳೆಯರಿಗೆ ಪ್ರತ್ಯೇಕ ಸ್ಥಳವಕಾಶ ಮಾಡಲಾಗಿತ್ತು ಪುಠಾಣಿ ಮಕ್ಕಳು ಮತ್ತು ಮಹಿಳೆಯರಿಗೂ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.