(www.vknews. in) ಇನ್ನು ಮುಂದೆ ಮೊಹಲ್ಲಾ ವ್ಯಾಪ್ತಿಯಲ್ಲಿ ಯಾರೇ ಮರಣ ಹೊಂದಿದರೂ ಮೂರನೇ ದುಹಾದ ಆಯೋಜನೆ! ಮಾದರಿ ಸೃಷ್ಟಿಸಿದ ಎಸ್ಕೆಎಸ್ಸೆಸ್ಸೆಪ್ ಉಪ್ಪಿನಂಗಡಿ ನಿನ್ನಿಕಲ್ ಶಾಖೆ
ಪೂರ್ವ ಕಾಲದಲ್ಲಿ ಮರಣ ಹೊಂದಿದವರ ಹೆಸರಲ್ಲಿ ಮೂರನೇ ದುಹಾ ಮನೆಯಲ್ಲೋ ಮಸೀದಿಯಲ್ಲೋ ಮಾಡುವುದಾರೆ ನೆರೆಕರೆಯವರು,ಸಂಭಂದಿಕರು ಬಗೆಬಗೆಯ ಸಿಹಿ ತಿಂಡಿಗಳು ತಂದು ಅವಲಕ್ಕಿ ಜೊತೆ ಸೇರಿಸಿ ಸೀರಣಿ ಕೊಡುವ ರೂಡಿಯಿತ್ತು. ಎಲ್ಲೆಲ್ಲೂ ಬಡತನವೇ ಇದ್ದ ಆ ಕಾಲದಲ್ಲಿ ಹಾಗೇ ಕೊಟ್ಟ ಸೀರಣೆಯನ್ನು ಜನ ತಿನ್ನುತ್ತಲೂ ಇದ್ದರು. ಮರಣ ಸಂಭವಿಸಿದ ಮನೆಯವರು ದುಖಃದಲ್ಲಿರುವ ವೇಳೆ ಮೂರನೇ ದಿನ ಪ್ರಾರ್ಥನೆಗೆ ಸೇರುವ ಜನರಿಗೆ ಏನಾದರೂ ತಿನಿಸು ಸಿದ್ದ ಪಡಿಸಲು ಅವರಿಂದ ಕಷ್ಟ ಸಾಧ್ಯವಾಗುವುದರಿಂದ ಇಂತಹ ಪದ್ದತಿ ರೂಡಿಗೆ ಬಂದಿರಲೂ ಬಹುದು.ಅದು ಮಾತ್ರವಲ್ಲದೇ ಪರಸ್ಪರ ಸಂಬಂಧವನ್ನು ಅದು ಗಟ್ಟಿಗೊಳಿಸುತ್ತಿತ್ತು. ಆದರೆ ಯಾವಾಗ ಜನರಿಗೆ ಆರ್ಥಿಕ ಅನುಕೂಲ ಉಂಟಾಯಿತೋ ನಂತರ ಹಳೆಯ ರೂಡಿಗಳು ಒಂದೊಂದಾಗೇ ಮಾಯವಾಗುತ್ತಾ ಬಂತು. ಇಲ್ಲಿ ಮೂರನೇ ದುಹಾದಲ್ಲಿ ಅವಲಕ್ಕಿ ಸೀರಣಿಯ ಸ್ಥಾನವನ್ನು ರೊಟ್ಟಿ ,ಕರಿ ಅಕ್ರಮಿಸಿತು. ಅದನ್ನು ತಪ್ಪು ಎನ್ನಲಾಗದು. ಅದು ಅನಿವಾರ್ಯವಾದ ಕಾಲದ ಬದಲಾವಣೆಯೂ ಹೌದು. ಜನರು ತಿನ್ನುವಂತಹ ಉತ್ತಮ ಭಕ್ಷ್ಯ ಮಾಡಿ ನೀಡುವುದೇ ಸರಿಯಾದ ಕ್ರಮ. ಈಗ ಇಲ್ಲಿ ಇಷ್ಟು ಬರೆದದ್ದು ಯಾಕೆಂದರೆ ಮೂರನೇ ದುಅ ಕಾರ್ಯ ನೆರವೇರಿಸಲು ಮರಣದ ಮನೆಯವರು ದುಖಃದ ಮಧ್ಯೆ ಪರದಾಟ ನಡೆಸುವ ಪರಿಸ್ಥಿತಿ ಸದ್ಯ ಉಂಟಾಗಿದೆ. ಕುಟುಂಬಿಕರು ನೆರೆಕರೆಯವರು ಹೆಲ್ಪ್ ಗೆ ಸಿಗದ ಅವಸ್ಥೆ. ಹೀಗಿರುವಾಗ ಇದನ್ನು ಮನಗಂಡ ಸ್ಥಳೀಯ ಉಪ್ಪಿನಂಗಡಿ ನಿನ್ನಿಕಲ್ ಎಸ್ಕೆ ಎಸ್ಸೆಸ್ಸೆಪ್ ಶಾಖೆ ಒಂದುತ್ತಮ ನಿರ್ಣಯವನ್ನು ಕೈಗೊಂಡಿದೆ. ಮೊಹಲ್ಲಾ ವ್ಯಾಪ್ತಿಯ ಯಾರೇ ಮರಣ ಹೊಂದಿದರೂ ಅವರ ಹೆಸರಲ್ಲಿ ಮಸೀದಿಯಲ್ಲಿ ಮೂರನೇ ದುಹಾ ಆಯೋಜಿಸಲು ಸಂಘಟನೆ ಮುಂದೆ ಬಂದಿದೆ. ಮುಂದೆ ಮರಣಿಸಿದವರ ನೆರೆಕರೆಯವರು ಮತ್ತು ಸಂಭಂದಿಕರು ದುಹಾ ಗೆ ಬರುವಾಗ ರೊಟ್ಟಿ ತಂದರೆ ಕರಿಯ ವ್ಯವಸ್ಥೆ ಸಂಘಟನೆ ಮಾಡಲಿಕ್ಕಿದೆ. ಆಗ ಹಳೆಯ ರೂಡಿಯನ್ನು ಮರಳಿ ತಂದಂತೆಯೂ ಆಗುತ್ತದೆ. ದುಖಃ ತೃಪ್ತ ಮೃತರ ಮನೆಯವರಿಗೂ ಸೌಖರ್ಯವಾಗುತ್ತದೆ. ಮೊನ್ನೆ ಇಲ್ಲಿ ನಿಧನರಾದ ಖಾಸಿಮಾಕರ ಮೂರನೇ ದುಹಾ ಮಸೀದಿಯಲ್ಲಿ ನಡೆಸುವ ಮೂಲಕ ಚಾಲನೆ ದೊರಕಿದೆ.ಅಲ್ ಅಂದುಲಿಲ್ಲಾ. ಮುಂದೆ ಇದಕ್ಕಾಗಿಯೇ ಒಂದು ನಿಧಿ ಸ್ಥಾಪಿಸುವ ಉದ್ದೇಶ ಇದೆ. ಈಗಾಗಲೇ ವಿಖಾಯ ಸೇವೆಯ ಮೂಲಕ ಜನರ ಮನೆ ಮಾತಾಗಿರುವ ಎಸ್ಕೆ ಎಸ್ಸೆಎಸ್ಸೆಪ್ ಈ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ.
*ಎಸ್ ಬಿ ದಾರಿಮಿ*
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.