(www.vknews. in) ವಕೀಲರಿಗೆ ಮತ್ತು ನ್ಯಾಯಾಂಗ ಇಲಾಖೆ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ: ಮಂಗಳೂರು ವಕೀಲರ ಸಂಘ, ನ್ಯಾಯಾಂಗ ಇಲಾಖೆ ನೌಕರರ ಸಂಘ ಇದರ ಜಂಟಿ ಆಶ್ರಯದಲ್ಲಿ, ಕೆ ಎಂ ಸಿ ಮಂಗಳೂರು ಇದರ ಸಹಯೋಗದೊಂದಿಗೆ ಮತ್ತು ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಸಹಕಾರದೊಂದಿಗೆ ವಕೀಲರು, ನ್ಯಾಯಾಂಗ ಇಲಾಖೆಯ ನೌಕರರು ಮತ್ತು ಅವರ ಮನೆಯವರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಎಚ್ ಎಸ್ ಮಲ್ಲಿಕಾರ್ಜುನ ಸ್ವಾಮಿ ಅವರು ಉದ್ಘಾಟಿಸಿ ದಿನನಿತ್ಯದ ಒತ್ತಡದಲ್ಲಿ ಆರೋಗ್ಯದ ಕಾಳಜಿಯ ಬಗ್ಗೆ ಗಮನಹರಿಸುವುದು ಬಹಳ ಮುಖ್ಯವಾಗಿದ್ದು, ಆರೋಗ್ಯ ತಪಾಸಣಾ ಶಿಬಿರದಂತಹ ಒಳ್ಳೆಯ ಕೆಲಸವನ್ನು ನ್ಯಾಯಾಲಯದ ಆವರಣದಲ್ಲಿ ಆಯೋಜಿಸುವ ಮೂಲಕ ಹಾಗೂ ವಕೀಲರು, ನ್ಯಾಯಾಂಗ ಇಲಾಖೆ ನೌಕರರು ಮತ್ತು ಕುಟುಂಬದವರಿಗೆ ವೈದ್ಯಕೀಯ ತಪಾಸಣೆಗೆ ಅವಕಾಶ ಕಲ್ಪಿಸುವ ಮೂಲಕ ಮಂಗಳೂರು ವಕೀಲರ ಸಂಘ ಶ್ಲಾಘನೀಯ ಕೆಲಸವನ್ನು ಮಾಡಿದೆ ಎಂದು ಅಭಿಪ್ರಾಯಪಟ್ಟರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀಹೆಚ್ ವಿ ರಾಘವೇಂದ್ರ ಇವರು ಪ್ರಸ್ತಾವಿಕ ಮಾತನಾಡಿ ಇತ್ತೀಚಿನ ಆಹಾರ ಪದ್ಧತಿ, ಮಾನಸಿಕ ಒತ್ತಡಗಳ ನಡುವೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ, ದಿನನಿತ್ಯದ ಕೆಲಸದ ಒತ್ತಡಗಳಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳದೆ ನಿರ್ಲಕ್ಷಿಸುತ್ತಿದ್ದು, ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಇಂತಹ ಶಿಬಿರವನ್ನು ಆಯೋಜಿಸಿ ಮೂಲಕ ಆರೋಗ್ಯದ ಬಗ್ಗೆ ಗಮನಹರಿಸಲು ಸಹಕಾರವಾಗುತ್ತದೆ. ಇಂತಹ ಸಾಮಾಜಿಕ ಕೆಲಸಗಳ ಮೂಲಕ ಮಂಗಳೂರು ವಕೀಲರ ಸಂಘ ಮುಂಚೂಣಿಯಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಬಿ ಸುಧಾಕರ್ ಬಾಳಿಗ, ಲ್ಯಾನ್ತ್ರಿಸ್ನ ಕಾರ್ಯನಿರ್ವಹಣಾಧಿಕಾರಿ ರಮಿತ್ ಕುಮಾರ್, ಕೆಎಂಸಿ ವೈದಾಧಿಕಾರಿ ಡಾಕ್ಟರ್ ಚಿನ್ಮಯಿ, ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀ ಸುಜಿತ್ ಕುಮಾರ್, ಕೋಶಾಧಿಕಾರಿ ಗಿರಿಶ್ ಶೆಟ್ಟಿ, ಸಮಿತಿಯ ಸದಸ್ಯರಾದ ಶ್ರೀ ಪುರುಷೋತ್ತಮ ಭಟ್, ಶ್ರೀ ದೇವದಾಸ್ ರಾವ್, ಶ್ರೀ ಮಹಮ್ಮದ್ ಅಸ್ಗರ್,ಮುಡಿಪು,ಶ್ರೀ ರವಿರಾಜ್, ಶ್ರೀಮತಿ ಸುಮನಾ ಶರಣ್, ಶ್ರೀ ಕುಶಾಲಪ್ಪಗೌಡ, ಶ್ರೀ ರವಿರಾಜ್, ಹರೀಶ್ ಕುಮಾರ್, ಕುಮಾರಿ ಅಕ್ಷತಾ, ಸಂಘದ ಸದಸ್ಯರು, ನ್ಯಾಯಾಂಗ ಇಲಾಖೆ ನೌಕರರ ಸಂಘದ ಸದಸ್ಯರು ಭಾಗವಹಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಶ್ರೀಧರ್ ಹೊಸಮನೆ ಇವರು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಸುವರ್ಣ ವಂದಿಸಿದರು, ಕಾರ್ಯಕ್ರಮನ್ನು ಹಿರಿಯ ವಕೀಲರಾದ ಶ್ರೀಮತಿ ಆಶಾ ನಾಯಕ್ ಇವರು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.