(www.vknews. in) DKSC ಪಡುಬಿದ್ರಿ ಘಟಕದ ವತಿಯಿಂದ ನಡೆದ ಬ್ರಹತ್ ನೂರೇ ಮದೀನ ಮೀಲಾದ್ ಕಾನ್ಫರೆನ್ಸ್ ಮೌಲಿದ್ ಮತ್ತು ಬುರ್ದ್ದಾಹ್ ಮಜ್ಲೀಸ್
DKSC ಪಡುಬಿದ್ರಿ ಘಟಕದ ವತಿಯಿಂದ ನೂರೇ ಮದೀನ ಮೀಲಾದ್ ಕಾನ್ಫರೆನ್ಸ್ ದಿನಾಂಕ 28/09/2024 ರಂದು ಉರ್ದು ಸ್ಕೂಲ್ ಮೈದಾನದಲ್ಲಿ ಘಟಕಾಧ್ಯಕ್ಷರಾದ ಅಬ್ದುಲ್ ಖಾದರ್ ಪಡುಬಿದ್ರಿ ಯವರ ಅದ್ಯಕ್ಷತೆಯಲ್ಲಿ ನಡೆಯಿತು
ಮಗ್ರಿಬ್ ನಮಾಝಿನ ಬಳಿಕ ಮರ್ಕಝ್ ವಿದ್ಯಾರ್ಥಿಗಳಿಂದ ಮೌಲಿದ್ ಮತ್ತು ಬುರ್ದಾಃ ಮಜ್ಲೀಸ್ ನಡೆಯಿತು.
ಜಿಲ್ಲಾ ಸಮಿತಿಯ ಅದ್ಯಕ್ಷರಾದ ಬಹುಮಾನ್ಯ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್ ರವರು ಅರ್ಥಗರ್ಭಿತವಾದ ದುಆ ದೊಂದಿಗೆ ಸಭೆಯನ್ನು ಧನ್ಯಗೊಳಿಸಿದರು, ದಅವಾ ಕಾಲೇಜು ಪ್ರಿನ್ಸಿಪಾಲ್ ಬಹುII ಸ್ವಾಬಿರ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ ಇಹ್ಸಾನ್ ಮುಳೂರು ವ್ಯವಸ್ಥಾಪಕರಾದ ಬಹು॥ ಮೌಲಾನ ಯು. ಕೆ. ಮುಸ್ತಫ ಸಅದಿ ಪ್ರಾಸ್ಥಾವಿಕ ಬಾಷಣಗೈದರು, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್,ದಮ್ಮಾಮ್ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಬೊಳ್ಳಾಯಿ ಅಥಿತಿ ಬಾಷಣಗೈದರು ಪಡುಬಿದ್ರಿ ಘಟಕದ ಉಪಾಧ್ಯಕ್ಷರಾದ ಮೊಯಿದಿನ್ ಪಡುಬಿದ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ನೇತಾರರು ಪಡುಬಿದ್ರಿ ಘಟಕದ ಸದಸ್ಯರು ಪರಿಸರದ ಉಲಮಾ ಉಮರಾಗಳು, ಹಿತೈಷಿಗಳು ಹಾಜರಿದ್ದರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಘಟಕದ ಪ್ರಧಾನ ಕಾರ್ಯದರ್ಶಿ ಕೌಸರ್ ಪಡುಬಿದ್ರಿ ಸ್ವಾಗತಿಸಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.