(www.vknews. in) ಸಂತ ಶಿಶುನಾಳ ಶರೀಫರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ
ಚಿಕ್ಕಬಳ್ಳಾಪುರ : ರಾಜ್ಯ ಕಂಡ ಶ್ರೇಷ್ಠ ಮಹಾನ್ ಸಂತ ಪುರುಷ ಶಿಶುನಾಳ ಶರೀಫರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಬೇಕೆಂದು ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ(ರಿ) ರಾಜ್ಯಾದಕ್ಷ ಎಂ ಎಂ ಬಾಷಾ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರ ಉಸುವಾರಿ ಸಚಿವರಾದ ಡಾ ಎಂ.ಸಿ ಸುಧಾಕರ್ ಮತ್ತು ಶಾಸಕರಾದ ಪ್ರದೀಪ್ ಈಶ್ವರ್ ಅವರಿಗೆ ಇಂದು ಮನವಿ ಪತ್ರವನ್ನು ಸಲ್ಲಿಸಿದರು.ರಾಜ್ಯಾದ್ಯಂತ ಶಿಶುನಾಳ ಶರೀಫ ರವರ ಅನುಯಾಯಿಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ ಇದೇ ಉದ್ದೇಶದಿಂದ ನಾವು ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಶಾಸಕರಾದ ಪ್ರದೀಪ್ ಈಶ್ವರ್ ರವರಿಗೆ ಮನವಿ ಪತ್ರ ನೀಡಿ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಮಹಾನ್ ಸಂತ ಪುರುಷ ಶಿಶುನಾಳ ಶರೀಫರ ಜಯಂತಿ ಸರ್ಕಾರದ ವತಿಯಿಂದ ಆಚರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಎಲ್ಲಾ ಜಾತಿ ಎಲ್ಲಾ ವರ್ಗದ ಜನಾಂಗದ ಹೃದಯದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿ ಎಲ್ಲರ ಪ್ರೀತಿ,ಗೌರವಕ್ಕೆ ಪಾತ್ರರಾದಂತಹ ಕನ್ನಡ ಸಾಹಿತ್ಯ ತತ್ವ ಪದಗಳ ರುವಾರಿ ಹಾವೇರಿ ಜಿಲ್ಲೆಯ ಶಿಗಾವಿ ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಕ್ರಿ.ಶ.1819 ಜುಲೈ 03 ರಂದು ಜನಿಸಿದ ಮಹಾನ್ ಚೇತನ ಸಂತ ಶಿಶುನಾಳ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕೆಂದು ಚಿಕ್ಕಬಳ್ಳಾಪುರ ಮತ್ತು ರಾಜ್ಯದ ಎಲ್ಲಾ ಶಿಶುನಾಳ ಶರೀಫರ ಅನುಯಾಯಿಗಳ ಅಭಿಮಾನಗಳ ಮತ್ತು ಭಕ್ತರ ಕೋರಿಕೆಯಾಗಿದೆಎಂದು ರಾಜ್ಯದಕ್ಷ ಎಂ ಎಂ ಬಾಷಾ ತಿಳಿಸಿದರು. ಈ ಸಂದರ್ಭದಲ್ಲಿ ಡಾ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂಬನ್ನೂರು, ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.