(www.vknews. in) ನರಿಮೊಗರು ಹಿತರಕ್ಷಣಾ ವೇದಿಕೆಯ ಮುತುವರ್ಜಿಯಲ್ಲಿ 15 ವರ್ಷದಿಂದ ಬಗೆಹರಿಯದ ಸಮಸ್ಯೆ ಮೇಘ ಇಂಡಸ್ಟ್ರೀಸ್ (ಬಿಂದು ) ಮಾಲಕರ ಮೂಲಕ ಶಾಶ್ವತ ಪರಿಹಾರದ ಭರವಸೆ.
ದಿನಾಂಕ 20/08/2024 ರಂದು ಗ್ರಾಮ ಸಭೆಯಲ್ಲಿ ಸರ್ವಾನುಮತದ ನಿರ್ಣಾಯದಂತೆ ನರಿಮೊಗರು ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುಭಾಷ್ ಚಂದ್ರ ಜೈನ್, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ನಿರ್ದೇಶಕರು ಹಾಗೂ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷರಾದ ಸಲೀಮ್ ಮಾಯಾಂಗಳ, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ನಿರ್ದೇಶಕರು ಹಾಗೂ ಹಿತರಕ್ಷಣಾ ವೇದಿಕೆಯ ಉಸ್ಮಾನ್ ನೆಕ್ಕಿಲು,ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಚಂದ್ರಮ್ ಸಾಗ್ ನೇತೃತ್ವದಲ್ಲಿ
ದಿನಾಂಕ 29/9/2024 ರಂದು ಸಭೆಯನ್ನು ಕರೆದು ಬಿಂದು ಸಂಸ್ಥೆಯ ಮಾಲಕರು, ತಜ್ಞರು ಮತ್ತು ಗ್ರಾಮ ಪಂಚಾಯತ್, ಸಂತ್ರಸ್ತರು ಮತ್ತು ಊರ ಪ್ರಮುಖರು ಸೇರಿ 15 ವರ್ಷದಿಂದ ನರಕ ಸದೃಶ ಜೀವನ ನಡೆಸುತ್ತಿದ್ದ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುಮಾರು 3 ಗಂಟೆಗಳ ಕಾಲ ಚರ್ಚಿಸಿರುತ್ತಾರೆ. ಮುಂದಿನ ಮೂರು ತಿಂಗಳ ಒಳಗಾಗಿ ಅದಕ್ಕೆ ಬೇಕಾದ ಕ್ರಮವನ್ನು ಕೈಗೊಂಡು ಪರಿಹಾರ ಮಾಡಿಕೊಡುತ್ತೇನೆ ಎಂದು ಸಂಸ್ಥೆಯ ಮಾಲಕರು ಭರವಸೆ ನೀಡಿರುತ್ತಾರೆ.
ಮಾಲಕರು ಕೊಟ್ಟ ಭರವಸೆಗಳು :ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತೇನೆ. : ಈಗಾಗಲೇ ಕಲುಷಿತಗೊಂಡ ಕಾಲುವೆಯನ್ನು (ತೋಡು ) ಜೆಸಿಬಿ ಮೂಲಕ ಸ್ವಚ್ಛ ಮಾಡಿಕೊಡುತ್ತೇನೆ. : ಅಂತರ್ಜಲವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನದಿ ನೀರಿನ್ನು ಉಪಯೋಗಿಸುವುದು. : ಕಾರ್ಖಾನೆಗೆ ಬರುವ ಟ್ರಕ್ ಗಳು ( ಲಾರಿ ) ಮತ್ತು ಅದರ ಚಾಲಕ ನಿರ್ವಾಹಕರಿಂದ ಆಗುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಬಿಂದು ಸಂಸ್ಥೆಯ ಮಾಲಕರು ಸಭೆಯಲ್ಲಿ ಭರವಸೆಯನ್ನು ನೀಡಿರುತ್ತಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.