(www.vknews. in) ಉಳ್ಳಾಲ: ಕೋಟೆಕಾರ್ ತಾಜುಲ್ ಉಲಮಾ ಎಜ್ಯುಕೇಷನ್ ಸೆಂಟರ್ ಮತ್ತು ಕೆಎಂಜೆ, ಎಸ್ ವೈಎಸ್ , ಎಸ್ಸೆಸ್ಸೆಫ್ ಜಂಟಿ ಆಶ್ರಯದಲ್ಲಿ ಗ್ರ್ಯಾಂಡ್ ಮೌಲಿದ್ ಸಮಾರೋಪ ಸಮಾರಂಭ ಅ.5ರಂದು ಅಜ್ಜಿನಡ್ಕದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಸದಸ್ಯ ನಾಸಿರ್ ಅಜ್ಜಿನಡ್ಕ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಪ್ರಯುಕ್ತ ಅಪರಾಹ್ನ 2 ಗಂಟೆಗೆ ತಾಜುಲ್ ಉಲಮಾ ಎಜ್ಯುಕೇಷನ್ ಸೆಂಟರ್ ವಿದ್ಯಾರ್ಥಿಗಳಿಂದ ವಿವಿಧ ಮೀಲಾದ್ ಕಾರ್ಯಕ್ರಮಗಳು ನಡೆಯಲಿವೆ. ಕೆ.ಪಿ ಹುಸೈನ್ ಸಅದಿ ಕೆ.ಸಿ.ರೋಡ್ ಕಾರ್ಯಕ್ರಮ ಉದ್ಘಾಟಿಸುವರು. ಇಬ್ರಾಹೀಂ ಸಿ.ಎಚ್. ಅಧ್ಯಕ್ಷತೆ ವಹಿಸುವರು ಎಂದರು,
ಸಂಜೆ 4 ಗಂಟೆಗೆ ಗ್ರ್ಯಾಂಡ್ ಮೌಲಿದ್ ಸಮಾರೋಪ ಸಮಾರಂಭವು ಇಬ್ರಾಹೀಂ ಪೈಝಿ ಉಚ್ಚಿಲ ನೇತೃತ್ವದಲ್ಲಿ ನಡೆಯಲಿದ್ದು, ಸಂಜೆ 7 ಗಂಟೆಗೆ ಮದನೀಯಂ ಮಜ್ಜಿಸ್ ಕಾರ್ಯಕ್ರಮ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ನಡೆಯಲಿದೆ. ರಾತ್ರಿ 9:30ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು
ಸುದ್ದಿ ಗೋಷ್ಠಿ ಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಇಬ್ರಾಹೀಂ ಸಿ.ಎಚ್., ಅಜ್ಜಿನಡ್ಕ ಕರ್ನಾಟಕ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಹಂಝ ಕೋಟೆಕಾರ್, ಎಸ್ ವೈಎಸ್ ಅಧ್ಯಕ್ಷ ಕಮಾಲ್,
ಎಸ್ಸೆಸ್ಸೆಫ್ ಮುಖಂಡ ಮುಸ್ತಫ ಕೆ.ಪಿ. ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.