(www.vknews.in) SDTU ಮಂಗಳೂರು, ನೂತನ ಕಚೇರಿ ಉದ್ಘಾಟನೆ
ಮಂಗಳೂರು, ಅ.6: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ಕ್ಷೇತ್ರ ಸಮಿತಿಯ ನೂತನ ಕಚೇರಿ ಬಂದರ್ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಯೋನಿಯರ್ ಕಾಂಪ್ಕೆಕ್ಸ್ ನ ಎರಡನೇ ಮಹಡಿಯಲ್ಲಿ ಉದ್ಘಾಟನೆಗೊಂಡಿತು
ಹಿರಿಯ ಕಾರ್ಮಿಕರಾದ ರಿಕ್ಷಾ ಚಾಲಕ ರಜಾಕ್ ಎಮ್ಮೆಕೆರೆ ರವರು ಉದ್ಘಾಟನೆಗೈದರು SDTU ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಕಾರ್ಮಿಕರ ಹಿತ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ಈ ಕಚೇರಿ ಕಾರ್ಯನಿರ್ವಹಿಸಬೇಕು ಕಚೇರಿ ಚಿಕ್ಕದಾದರೂ ಕಾರ್ಮಿಕರಿಗಾಗಿ ವಿಶಾಲವಾದ ಭರವಸೆಯ ಬೀಜ ಬಿತ್ತುವ ಕಾರ್ಯಯೋಜನೆಗಳು ಈ ಕಚೇರಿಯಿಂದ ನಡೆಯಬೇಕು ಮಾತ್ರವಲ್ಲ ಕಾರ್ಮಿಕರ ಶಕ್ತಿ ಕೇಂದ್ರ ಕೂಡಾ ಆಗಬೇಕು ಎಂದರು ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, SDTU ಕ್ಷೇತ್ರ ಉಪಾಧ್ಯಕ್ಷ ಮುಸ್ತಫಾ ಪಾರ್ಲಿಯಾ ಈ ಸಂದರ್ಭದಲ್ಲಿ ಮಾತನಾಡಿದರು ಕ್ಷೇತ್ರ ಜೊತೆ ಕಾರ್ಯದರ್ಶಿ ಸ್ವಾಗತಿಸಿದರು ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ ಧನ್ಯವಾದಗೈದರು ಬಳಿಕ ಆಟೋ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ರಾಜ್ಯ ಸರಕಾರದ ವಿದ್ಯಾನಿಧಿ ಯೋಜನೆಗೆ ಉಚಿತ ಅರ್ಜಿ ಸಲ್ಲಿಸುವ ಅಭಿಯಾನ ನಡೆಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.