(www.vknews.in) ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ ಹರ್ಷ
ದಕ್ಷಿಣ ಕನ್ನಡ ಕರ್ನಾಟಕ ಜಾನಪದ ಪರಿಷತ್ತಿನಿಂದ ಮೆಚ್ಚುಗೆ
ಮಂಗಳೂರು : ಜಾನಪದ ಪರಂಪರೆ ಸಂರಕ್ಷಣೆ ಮಾಡಿಕೊಂಡು ಬರುತ್ತಿರುವ ಉದ್ದೇಶದಿಂದ ಯುನೆಸ್ಕೋ ಸಂಸ್ಥೆಯು ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ಮಾನ್ಯತೆ ನೀಡಿದ್ದು, ದಕ್ಷಿಣ ಕನ್ನಡ ಕರ್ನಾಟಕ ಜಾನಪದ ಪರಿಷತ್ತಿನಿಂದ ಹರ್ಷ ವ್ಯಕ್ತಪಡಿಸಲಾಗಿದೆ. ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಪ್ರೊ.ಹಿ.ಚಿ ಬೋರ ಲಿಂಗಯ್ಯ ಹಾಗೂ ಆಡಳಿತಾಧಿಕಾರಿ ನಂದಕುಮಾರ ಅವರ ಶ್ರಮದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಷತ್ತು ತನ್ನ ವರ್ಚಸ್ಸು ಬೆಳೆಸಿಕೊಂಡಂತಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿ ವರ್ಷ ಹತ್ತಾರು ಜಾನಪದ ಕಾರ್ಯಕ್ರಮಗಳನ್ನು ಆಯೋ ಜಿಸುತ್ತಾ ಜನಪದ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ.
ರಾಮನಗರ ಸಮೀಪದ ‘ಜಾನಪದ ಲೋಕ’ ದಲ್ಲಿ 2,500 ಗಂಟೆಗಳ ಕಾಲ ಕೇಳಬಹುದಾದ ಗೀತ ಸಾಹಿತ್ಯ, 800 ಗಂಟೆಗಳ ಕಾಲ ನೋಡಬಹುದಾದ ವಿವಿಧ ಸಮುದಾಯದ ಸಂಸ್ಕೃತಿಯ ವಿಡಿಯೋ ಚಿತ್ರೀಕರಣ ಇಲ್ಲಿರುವುದರಿಂದ ಯುನೆಸ್ಕೋ ಮಾನ್ಯತೆ ನೀಡಿದೆ ಎಂದು ಹೇಳಿದರು.
ಯುನೆಸ್ಕೋ ಸಂಸ್ಥೆಯು ವಿಶ್ವದ 58 ಸೇವಾ ಸಂಸ್ಥೆಗಳಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ವಿಶೇಷ ಸ್ಥಾನಮಾನದೊಂದಿಗೆ ಮಾನ್ಯತೆ ನೀಡಿದ್ದಕ್ಕಾಗಿ ಪರಿಷತ್ತಿನ ಜಿಲ್ಲೆಯ ಸರ್ವ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.