(www.vknews. in) ಕಲ್ಲಡ್ಕ: ಆಯಿಷಾ ಇಬ್ರಾಹಿಂ ಜುಮಾ ಮಸ್ಜಿದ್ ಕೆ.ಸಿ ರೋಡ್ ಇದರ ವತಿಯಿಂದ 3 ದಿವಸಗಳ ಇಶಲ್ ಮಿಲಾದ್ ಫೆಸ್ಟ್ – 2024 ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು
ಕಲ್ಲಡ್ಕ : ಆಯಿಷಾ ಇಬ್ರಾಹಿಂ ಜುಮಾ ಮಸ್ಜಿದ್ ಕೆ.ಸಿ ರೋಡ್ ವತಿಯಿಂದ ಲೋಕ ಪ್ರವಾದಿ ಮಹಮ್ಮದ್ ಮುಸ್ತಫ (ಸ ಅ) ಹೆಸರಿನಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುವ ಇಶಲ್ ಮಿಲಾದ್ ಫೆಸ್ಟ್ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು
ದಿನಾಂಕ 27 ರಂದು ನೂರುಲ್ ಉಲೂಮ್ ಮದ್ರಸ ಕೆ.ಸಿ ರೋಡ್ ವಿದ್ಯಾರ್ಥಿನಿಗಳಿಂದ ಪ್ರತಿಭಾ ಪ್ರದರ್ಶನ ಹಾಗು ಹಲವು ಧಾರ್ಮಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
ದಿನಾಂಕ 28 ರಂದು ಆಯಿಷಾ ಜುಮಾ ಮಸ್ಜಿದ್ ಕೆ.ಸಿ ರೋಡ್ ಇದರ ಅಧ್ಯಕ್ಷರಾದ ಎಫ್ .ಕೆ ಖಾದರ್ ಇವರ ಅಧ್ಯಕ್ಷತೆಯಲ್ಲಿ ಮತ್ತು ಖತೀಬ್ ಉಸ್ತಾದ್ ಯಾಹ್ಯಾ ದಾರಿಮಿ ಯವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮ ನೂರುಲ್ ಉಲೂಮ್ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ಬುರ್ದಾ ಮಜ್ಲಿಸ್. ದಫ್ ಪ್ರದರ್ಶನ ಅದರಲ್ಲೂ ವಿಶೇಷವಾಗಿ ಪುಟಾಣಿ ಮಕ್ಕಳ ದಫ್ ಪ್ರದರ್ಶವಂತೂ ವರ್ಣಿಸಲಸಾದ್ಯ ವೇದಿಕೆಯಲ್ಲಿ ಪಿ.ಎಚ್ ಶೇಖಬ್ಬ ಕೆ.ಸಿ ರೋಡ್ ,ವಿ ಕೆ ಖಾದರ್ , ಕುಂಞ ಮೋನು ಹಾಜಿ , ರಹಿಮಾನ್ campco , ಚೆರೆಮೋನಾಕ , ಉಸ್ತಾದ್ ಜಾಫರ್ ಷರೀಫ್ , ಉಸ್ತಾದ್ ಅಬ್ಬಾಸ್ ಮುಸ್ಲಿಯಾರ್ , ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ , ಹಲವಾರು ಘಣ್ಯ ಅತಿಥಿಗಳ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು
ದಿನಾಂಕ 29 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ , ಧಾರ್ಮಿಕ ಸಭಾ ಕಾರ್ಯಕ್ರಮ ಹಾಗು ದುವಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೇಂದ್ರಬಿಂದು ವಿಶೇಷ ಅತಿಥಿಯಾಗಿ ಸಯ್ಯದ್ ಕುಟುಂಬದ ಕಣ್ಮಣಿ ಬಹುಮಾನ್ಯರಾದ ಅಸ್ಸಯ್ಯದ್ ಇಬ್ರಾಹಿಂ ತಂಙಲ್ ಆನೆಕಲ್ಲು ರವರು ನೂರುಲ್ ಉಲೂಮ್ ಮದ್ರಸ ಮಕ್ಕಳ ದಫ್ ನೊಂದಿಗೆ ವೇದಿಕೆಗೆ ಆಗಮಿಸಿದರು ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ MJM ಇದರ ನೂತನ ಅಧ್ಯಕ್ಷರಾದ ಅಬ್ದುಲ್ಲಾ ಕೋಡಿ ಅದೇ ರೀತಿ ಕೆ.ಸಿ ರೋಡ್ ಮಸ್ಜಿದ್ ಇದರ ಖತೀಬರಾದ ಯಾಹ್ಯಾ ದಾರಿಮಿ , ಪ್ರಾಸ್ತಾವಿಕ ಭಾಷಣಗಾರಾಗಿ ಬಹುಮಾನ್ಯರಾದ ಉಸ್ಮಾನ್ ದಾರಿಮಿ ಖತೀಬರು ಕಲ್ಲಡ್ಕ , ಕಾರ್ಯಕ್ರಮದಲ್ಲಿ ಬಹುಮಾನ್ಯರಾದ ಉಸ್ತಾದ್ ಅಬ್ದುಲ್ ಹಮೀದ್ ದಾರಿಮಿ ಖತೀಬರು ಗೋಳ್ತಮಜಲ್ ರವರು ಚುಟುಕು ಸಂದೇಶವನ್ನು ನೀಡಿದರು ವೇದಿಕೆಯಲ್ಲಿ ಸಿದ್ದೀಕ್ ಪನಾಮ MJM ಕಾರ್ಯದರ್ಶಿ , ಕೆ.ಎಂ ಶಾಫಿ ಹಾಜಿ ,ಇಕ್ಬಾಲ್ ಕೆ.ಸಿ ರೋಡ್ , ಇಬ್ರಾಹಿಂ ಸರಪಾಡಿ , ಮಜೀದ್ ಉಸ್ತಾದ್ ಕೆ.ಸಿ ರೋಡ್ ,ಅದೇ ರೀತಿ MJM ಇದರ ನೂತನ ಸದಸ್ಯರಾದ ದಾವೂದ್ ಮಾಣಿಮಜಲ್ , ಪಿ ಎಚ್ ಲತೀಫ್ ಕೆ.ಸಿ ರೋಡ್ , ಜವಾಝ್ ಕಲ್ಲಡ್ಕ , ಝಕಾರಿಯಾ ಗೋಳ್ತಮಜಲ್ , ಭಾಗವಹಿಸಿದ್ದರು
ಕಾರ್ಯಕ್ರಮವನ್ನು ಸಂಶುದ್ದೀನ್ ನಿರೂಪಿಸಿದರೆ ಫವಾಝ್ ಸನ್ಲೈಟ್ ವಂದಿಸಿದರು
ವರದಿ : ಕೆ.ಕೆ ಜಬ್ಬಾರ್ ಕಲ್ಲಡ್ಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.