(www.vknews. in)‘ ಜೈ…ಘೋಷಣೆ ‘ ತಪ್ಪಲ್ಲ ತೀರ್ಪಿನಲ್ಲಿ ತುಂಬಿ ತುಳುಕುತ್ತಿರುವ ಸೌಹಾರ್ದತೆಯ ಪಾಠ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ: ಕೆ.ಅಶ್ರಫ್.
ಮಂಗಳೂರು: ಇತ್ತೀಚೆಗೆ ದ.ಕ.ಜಿಲ್ಲೆಯ ನಿರ್ಧಿಷ್ಟ ಶ್ರದ್ಧಾ ಕೇಂದ್ರದ ಮುಂದೆ ಕೆಲವು ದುಷ್ಕರ್ಮಿಗಳು ಕೂಗಿದ ಪ್ರಚೋದನಾತ್ಮಕ ಘೋಷಣೆಗೆ ಸಂಬಂಧಿಸಿದಂತೆ ಪೋಲೀಸ್ ದಾಖಲಿಸಿದ ಪ್ರಕರಣ ರದ್ದು ಕೋರಿದ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ನಮೂದಿಸಿದ ಅಭಿಪ್ರಾಯದ ಸೌಹಾರ್ದತೆ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಆ ರೀತಿಯ ಒಂದು ಅತಿ ಸೌಹಾರ್ದತೆ ಮುಸ್ಲಿಮರಿಗೆ ಅಗತ್ಯವೂ ಇಲ್ಲ ಅಂತಹ ಸಂದರ್ಭ ಸೃಷ್ಟಿ ಆದರೆ ಅಂತಹ ಸೌಹಾರ್ಧ ಪ್ರಿಯರಿಗೆ ನಾವು ಅಲ್ಲಾಹು ಅಕ್ಬರ್ ಎಂಬ ಏಕದೇವ ವಿಶ್ವಾಸದ ಪಾಠ ಹೇಳಿಕೊಡಲು ಹಿಂಜರಿಯುವುದಿಲ್ಲ. ಮಾನವ ಸೌಹಾರ್ಧ ಬಯಸುವ ಯಾವುದೇ ವ್ಯಕ್ತಿಗೆ ಯಾವುದೇ ಧಾರ್ಮಿಕ ಶ್ರದ್ಧಾ ಕೇಂದ್ರದ ಪರಿಮಿತಿ ಅಗತ್ಯವೂ ಇಲ್ಲ. ‘ ಜೈ..ಘೋಷಣೆ ‘ ಎಂಬುದು ಅವರವರ ಶ್ರದ್ಧಾ ಕೇಂದ್ರಕ್ಕೆ ಮಾತ್ರಾ ಸೀಮಿತವಾಗಿರಲಿ.
ಕೆ.ಅಶ್ರಫ್ ( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.