(www.vknews. in) ಪೆಟ್ಟಾಯಿ_ಪಿಲಿ- 3…..ಪಿಲಿ ಕುಲೆಗು ಕುಲ ಬೋಡಾ ?
ಬಿರುವೆರ್ ಕುಡ್ಲದ ದಶಮಾನದ ಹುಲಿವೇಷ ಊದು ಪೂಜೆಗೆ ಬಾಲಿವುಡ್ ನಟ ಸಂಜಯದತ್ ಬಂದಿರುವ ಕುರಿತು ಒಂದು ವರ್ಗದ ಬೆಂಬಲಿಗರ ಆಕ್ಞೇಪ ಟೀಕೆ ಹೆಚ್ಚುತ್ತಾ ಹೋಗಿ…
ಒಂದು ಹಂತದಲ್ಲಿ ಸಂಜಯದತ್ ಕರೆಸಿರುವುದು ದೇಶದ್ರೋಹ ಎಂಬಂತೆ ದೇಶಭಕ್ತರು ಜೋಶ್ ನ ಗುಂಪು ಜಾಲತಾಣದಲ್ಲಿ ಪುಂಖಾನುಪುಂಖವಾಗಿ ಟೀಕಾ ಪ್ರಹಾರ ನಡೆಸಿತು ಯಾವುದೊ ಒಂದು ಕಾಲದಲ್ಲಿ ರೈಫಲ್ ಇಟ್ಟುಕೊಂಡ ಕಾರಣಕ್ಕೆ ಜೈಲಿಗೂ ಹೋಗಿ ಬಂದ ಸಂಜು ಬಾಬ ಮತ್ಯಾವತ್ತೂ ಕ್ರಿಮಿನಲ್ನಂತೆ ವರ್ತಿಸಿದ ಉದಾಹರಣೆಗಳಿಲ್ಲ.
ಹಾಗೆ ನೋಡಿದರೆ ಕಾಂತಾರ ಖ್ಯಾತಿಯ ಶ್ರೇಷ್ಠ ನಟ ರಿಷಬ್ ಶೆಟ್ಟಿ ವಿರುದ್ಧ ತುಳುನಾಡಿನ ಒಂದು ವರ್ಗ (ಸೀಮಿತ) ವೇದಿಕೆಗಳಲ್ಲಿ ರೀಲ್ಸ್ಗಳಲ್ಲಿ ದೈವಗಳ ಅಪಮಾನಕ್ಕೆ ಕಾರಣ ಎಂಬಂತೆ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾ ವಿಕೃತ ರೀಲ್ಸ್ಗಳಿಗೆ ಮತ್ತಷ್ಟು ಪ್ರಚಾರ ನೀಡಿದ್ದರು. ಹಾಗೆ ನೋಡಿದರೆ ರಿಷಬ್ಗೂ ಅವಕಾಶ ಇಲ್ಲ. ಈಗ ಸೆಲೆಬ್ರಿಟಿಗಳ ಕ್ರಿಮಿನಲ್ ಹಿನ್ನೆಲೆ ಕುರಿತು ತಗಾದೆ ಮಾಡುತ್ತಿರುವವರು ನಾಳೆ ಹುಲಿ ವೇಷ ಹಾಕುವವರಿಗೂ ಕ್ರಿಮಿನಲ್ ಹಿನ್ನಲೆ ಇರಬಾರದು
ಕಾರ್ಯಕ್ರಮ ಸಂಘಟಿಸುವವರ ಮೇಲೂ ಕೇಸ್ ಆಗಿರಬಾರದು ಎಂಬ ನಿಯಮಗಳನ್ನು ಮಾಡುತ್ತಾ ಹೋದರೆ_ಉದಯಪೂಜಾರಿ ಅಂಥ ಸಂಘಟಕರಿಗೆ ಹುಲಿ ವೇಷ ಮಾಡುವುದಾದರೂ ಹೇಗೆ ?
ಸಾವಿಲ್ಲದ_ಮನೆಯಿಂದ_ಸಾಸಿವೆ_ತಾ ಎಂದಂತೆ ಅಲ್ಲವೇ?
ಹುಲಿ ಕುಣಿತ ಎಂದರೆ ಅದೊಂದು ಜೋಶ್, ಎನರ್ಜಿ ವೇಷ ಹಾಕುವವರು, ಸಂಘಟಿಸುವವರಿಗೂ ಹುಲಿಯ ಗುಣ ಸ್ವಲ್ಪ ಆದರೂ ಮೈ-ಮನದೊಳಗೆ ಇದ್ದೇ ಇರುತ್ತದೆ. ಹೀಗಾಗಿ ಕೇಸ್, ಗಲಾಟೆ ಹಿಂದೆ ಹುಲಿ ತಂಡ ಮುನ್ನಡೆಸುತ್ತಿದ್ದ ಕುಡ್ಲದ ಅನಭಿಷಿಕ್ತ ಡಾನ್ಗಳಲ್ಲಿಯೂ ಇತ್ತು. ಹೀಗಾಗಿ ಹುಲಿ ವೇಷವನ್ನು ಮಡಿವಂತಿಕೆಗೆ ಒಳಪಡಿಸುವುದು ಕಷ್ಟ.
ಬಿಜೆಪಿಯ ಮುಖಂಡರು ಕಾಂಗ್ರೆಸ್ ಮುಖಂಡ ಮಿಥುನ್ ರೈಗಳ ಪಿಲಿ ನಲಿಕೆಗೆ ಹೋಗಲು ಯಾರಲ್ಲಿಯೂ ಹೇಳಲಾಗದ ಕಾರಣ ಇದೆ. ವೇದವ್ಯಾಸ ಕಾಮತ್ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಪಿಲಿ ಪರ್ಬ ಬಿಜೆಪಿಯದ್ದೇ ಮತ್ತು ಬಿರುವೆರ್ ಕುಡ್ಲದ ಉದಯ ಪೂಜಾರಿ ಅವರ ಹುಲಿ ಕುಣಿತ ನೇತೃತ್ವ ಕೂಡಾ ಬಿಜೆಪಿಯವರದ್ದು ಎಂದು ಹೇಳಬಹುದು.
ಏಕೆಂದರೆ ಸಂಜಯದತ್ ಅವರನ್ನು ಬರಮಾಡಿಕೊಳ್ಳಲಲು ಮುಂಬಯಿ-ಕಾರ್ಕಳ ಉದ್ಯಮಿ ಬಿಜೆಪಿ ಮುಖಂಡ ಮಹೇಶ್_ಶೆಟ್ಟಿ_ತೆಳ್ಳಾರ್. ಅದೂ ಅಲ್ಲದೆ ಉದಯ ಪೂಜಾರಿ ಅವರು ನಳಿನ್ ಕಟೀಲ್, ಮೋದಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿದವರು.
ಜತೆ ಪಿಲಿ_ನಲಿಕೆ ಗೆ ಹೋದ ಬಿಜೆಪಿ ಮುಖಂಡರಿಗೆ ಪಿಲಿ ಪರ್ಬ ಮತ್ತು ಬಿರ್ವೆರ್_ಕುಡ್ಲ ತಂಡಗಳ ಮುಖಂಡರ ಜತೆ ವೈರ ಇರದಿದ್ದರೂ ಗ್ರಹಗಳ ಮೈತ್ರಿ ಅಂಶಗಳು ಪೂರ್ಣ ಕೂಡಿ ಬರುತ್ತಿಲ್ಲ.
ಲೇಡಿಹಿಲ್ ಸರ್ಕಲ್ ಗೆ ಶ್ರೀನಾರಾಯಣಗುರು ವೃತ್ತ ನಾಮಕರಣ ಮಾಡುವಾಗ ಈ ಕುರಿತು ಹೋರಾಟ ಮಾಡಿದ್ದ ಬಿರ್ವೆರ್ ಕುಡ್ಲ ತಂಡಕ್ಕೆ ಮನ್ನಣೆ ನೀಡಲಿಲ್ಲ ಎಂದು ಉದಯ ಪೂಜಾರಿಗೆ ಕೋಪ ಇತ್ತು. ಆಗ ಬಹಿರಂಗವಾಗಿಯೇ ಚೌಟರ ವಿರುದ್ದ, ಬಿಜೆಪಿ ಜಿಲ್ಲಾಧ್ಯಕ್ಷರು, ಸ್ವಜಾತಿ ಬಾಂಧವರೂ ಆದ ಕುಂಪಲ ವಿರುದ್ದವೂ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.
ಚೌಟರೂ ಕೂಡಾ “೧೫ ವೋಟು ಕಮ್ಮಿ ಆದ್ರೆ ಏನೂ ಆಗೋದಿಲ್ಲ” ಎಂದು ಎದೆ ಸೆಟೆದು ಹೇಳಿದ್ದರು.
ಹೀಗಾಗಿ ತಮ್ಮ (ಬಿಜೆಪಿ) ಕುಟುಂಬದೊಳಗೆ ಚಿರಿ ಪಿರಿ ಆದಾಗ ಇನ್ನೊಬ್ಬ ತಮ್ಮ ಸಿದ್ದಾಂತ ವಿರೋಧಿಯಾದರೂ ಕರೆದಾಗ… ತಕ್ಷಣ ಹೋಗಲೇ ಎಂದು ಮನಸ್ಸಾಗುವುದು ಸಹಜ { ಬಿಜೆಪಿ ಮುಖಂಡರನ್ನು ಕರೆದಿರೋದು ಹೌದಾ/ ಅಲ್ವಾ ರೈಗಳೇ @highlight ಮಾಡಿ ಹೇಳಬೇಕು).
ಜಿತೇಂದ್ರ ಕುಂದೇಶ್ವರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.