(www.vknews. in) ಪುದು, ಪಾಲು ಬಿದ್ದ ಸಾರ್ವಜನಿಕ ಶೌಚಾಲಯವನ್ನು ದುರಸ್ಥಿಗೊಳಿಸಲು ಅಗ್ರಹಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ ಎಸ್ಡಿಪಿಐ ನಿಯೋಗ
ಫರಂಗಿಪೇಟೆ, ಅ.22: ಪಾಲುಬಿದ್ದ ಸಾರ್ವಜನಿಕ ಶೌಚಾಲಯವನ್ನು ದುರಸ್ಥಿಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಎಸ್ಡಿಪಿಐ ಪುದು ಗ್ರಾಮ ಸಮಿತಿ ನಿಯೋಗ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿತು
ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಫರಂಗಿಪೇಟೆ ವಸತಿ ಸಮುಚ್ಚಯ, ವಾಣಿಜ್ಯ ವಹಿವಾಟುಗಳು ನಡೆಯುವ ಮುಂದುವರಿಯುತ್ತಿರುವ ಪಟ್ಟಣವಾಗಿದೆ ಜನನಿಭಿಡ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಜನರು ದಿನ ನಿತ್ಯ ಪರದಾಡುವಂತಾಗಿದೆ ಹಾಗಾಗಿ ಸಾರ್ವಜನಿಕರಿಗಾಗಿ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಬೇಕು ಅಥವಾ ಪಾಲುಬಿದ್ದು ಉಪಯೋಗ ಶೂನ್ಯವಾದ ಶೌಚಾಲಯವನ್ನು ದುರಸ್ಥಿಗೊಳಿಸಿ ನಾಗರಿಕರಿಗೆ ಮೂಲಭೂತ ಸೌಕರ್ಯದ ವ್ಯವಸ್ಥೆ ಗೊಳಿಸಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿತು
ಎಸ್ಡಿಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಅಮೆಮ್ಮಾರ್, ಕಾರ್ಯದರ್ಶಿ ಅನ್ಸಾರ್ ಫರಂಗಿಪೇಟೆ, ಸದಸ್ಯರಾದ ಸಿರಾಜ್ ಕುಂಪನಮಜಲ್, ಮನ್ಸೂರ್ ಅಮೆಮ್ಮಾರ್, ಇಕ್ಬಾಲ್ ಅಮೆಮ್ಮಾರ್, ರಿಯಾಜ್ ಪೇರಿಮರ್ ನಿಯೋಗದಲ್ಲಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.