ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):- ಆಸ್ಪತ್ರೆಗಳ ಉದ್ಘಾಟನೆ ಸಾರ್ವಜನಿಕರ ಪವಿತ್ರವಾದ ಕಾರ್ಯಕ್ರಮ . ನಾನೂ 4 ಬಾರಿ ಶಾಸಕನಾಗಿದ್ದೇನೆ . ಆರೋಗ್ಯ ಸಚಿವರು ಬರುತ್ತಿದ್ದಾ ರೆಂದು ತಿಳಿದು ಜನರ ಅಭಿಪ್ರಾ ಯದ ಮೇರೆಗೆ ಆಗಮಿಸಿದ್ದೇನೆ. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಪಡೆದುಕೊಂಡಿಲ್ಲ ವೆಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು , ಇಲ್ಲಿ ಪ್ಲೆಕ್ಸ್ಗಳನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ . ಬಿಜೆಪಿ ಸೇರ್ಪಡೆ ಇನ್ನೊಂದು ಮತ್ತೊಂದು ಯಾವುದೂ ಇಲ್ಲವೆಂದು ಸ್ಪಷ್ಟ ಪಡಿಸಿದರು. ಕಾರ್ಯಕ್ರಮಕ್ಕೆ ಹೋಗು ತ್ತಿರುವುದಾಗಿ ಎಚ್.ಡಿ.ಕುಮಾರ ಸ್ವಾಮಿಗೂ ಮಾಹಿತಿ ನೀಡಿದ್ದೇನೆ.
ಒಂದೇ ಆಸ್ಪತ್ರೆಯನ್ನು ಎರಡು ಬಾರಿ ಉದ್ಘಾಟನೆ ಮಾಡುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಆರೋಗ್ಯ ಸಚಿವರನ್ನು ಕೇಳಬೇಕು ಅಷ್ಟೇ. ಕಾರ್ಯಕ್ರಮಕ್ಕೆ ಬನ್ನಿ ಎಂದು ಯಾರನ್ನೂ ನಾನು ಕರೆದಿಲ್ಲ. ಕರ ಪತ್ರವನ್ನೂ ಮುದ್ರಿಸಿಲ್ಲ. ಸಾರ್ವಜನಿಕರಂತೆ ಆಗ ಮಿಸಿದ್ದೇನೆ. ವೆಂಕಟಶಿವಾರೆಡ್ಡಿಗೆ 50 ವರ್ಷ ರಾಜಕಾರಣದ ಅನುಭವವಿದೆ. ಯಾವಾಗಲೂ ನಾನು ಚುನಾ ವಣೆಗೆ ಸಿದ್ಧ ಎಂದರು.
ಸುದಾಕರ್ ಅವರು ನನ್ನನ್ನು ಬಳಸಿಕೊಳ್ಳುತ್ತಿಲ್ಲ . ಜೆಡಿಎಸ್ , ಕಾಂಗ್ರೆಸ್ , ಬಿಜೆಪಿಯವರೆಲ್ಲರೂ ಪಕ್ಷಾತೀತವಾಗಿ ಬಂದಿದ್ದೇವೆ. ಶ್ರೀನಿವಾಸಪುರ ಕ್ಷೇತ್ರದ ಹಲವಾರು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ . ಇಂತಹ ಸಮಸ್ಯೆಗಳನ್ನು ಹೇಳಿ ಕೊಳ್ಳಲು ಒಂದು ಅವಕಾಶ ಸಿಕ್ಕಿದೆಯಷ್ಟೇ . 4 ಬಾರಿ ಶಾಸಕರಾದವರು ಸುಮ್ಮನೆ ಕೂರಬಾರದು . ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕಾಗುತ್ತದೆ ಎಂದರು.
ಸುಧಾಕರ್ ಅವರಿಗೆ ರಮೇಶ್ಕುಮಾರ್ ಮೇಲೆ ಕೋಪ ಇದೆಯೋ , ಸಂತೋಷ ಇದೆಯೋ , ಪ್ರೀತಿ ಇದೆಯೋ ನನಗೆ ಗೊತ್ತಿಲ್ಲ . ರಮೇಶ್ ಕುಮಾರ್ ವಿಚಾರವಾಗಿ ಶ್ರೀನಿವಾಸಗೌಡರ ಹೆಸರು ಬಳಕೆ ಬೇಡ , ಯಾವುದೇ ರೀತಿಯ ಒಳ ರಾಜಕೀಯವಿಲ್ಲ. ಅವರ ಮೇಲೆ ಕೋಪವೂ ಇಲ್ಲ. ಪಾಪ ಶ್ರೀನಿವಾಸಗೌಡರು , ಅಮಾಯಕರು ಎಂದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಕದಲ್ಲಿ ಬಿಜೆಪಿ ಇರುತ್ತೋ , ಯಾವುದು ಇರುತ್ತೋ ಗೊತ್ತಿಲ್ಲ . ಅದರ ಬಗ್ಗೆ ನಾನು ಮಾತನಾಡಲ್ಲ. ಕೋವಿಡ್ ನಿಯಂತ್ರಣವೇ ದೊಡ್ಡ ಕೆಲಸವಾಗಿದ್ದು , ರಾಜ್ಯ ಸರಕಾರದ ಬಗ್ಗೆ ಮಾತನಾಡಲ್ಲ. ಆರೋಗ್ಯ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
2023 ರ ಚುನಾವಣೆಗೆ ಇದು ಮೊದಲ ವೇದಿಕೆಯಲ್ಲ . ಈಗಾಗಲೇ ಅನೇಕ ಕೆಲಸಗಳನ್ನು ಮಾಡುತ್ತಿದ್ದೇನೆ . ಬಿಜೆಪಿ ಪಕ್ಷವು ಮುಳುಗುತಿರುವ ಹಡಗು ಎಂದು ಮೈಸೂರಿನಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ವೆಂಕಟಶಿವಾರೆಡ್ಡಿ , ಅವರ ಹೇಳಿಕೆಗೆ ಇಲ್ಲಿ ನಾನು ಹೇಗೆ ಉತ್ತರ ನೀಡಲಿ . ಬೇರೆ ಪಕ್ಷದ ಬಗ್ಗೆ ಮಾತನಾಡುವುದಿಲ್ಲ . ವರಿಷ್ಠರು ಮಾತನಾಡಿ ಕೊಳ್ಳುತ್ತಾರಷ್ಟೇ ಎಂದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.