ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ನವೆಂಬರ್ 21 ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದರಿಂದ ತಾಲ್ಲೂಕಿನ ಎಲ್ಲಾ ಕಸಾಪ ಸದಸ್ಯರು ನನ್ನ ಗೆಲುವಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ಮನವಿ ಮಾಡಿದ್ದಾರೆ.
ಮಾಲೂರು ಪಟ್ಟಣ್ಣಕ್ಕೆ ಆಗಮಿಸಿದ ವ.ಚ.ಚನ್ನೇಗೌಡ ರವರು ಹಾಗೂ ತಂಡ ವಿಶ್ವಮಾನವ ಕುವೆಂಪು ಫೌಂಡೇಶನ್ ನ ಕೇಂದ್ರ ಕಚೇರಿಗೆ ಆಗಮಿಸಿ ಭರ್ಜರಿಯಾದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಪಟ್ಟಣ್ಣದ ಎಲ್ಲೆಡೆ ಪ್ರಚಾರ ಕಾರ್ಯ ಬಹಳ ಉತ್ಸುಕತೆಯಿಂದ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಅಭ್ಯರ್ಥಿ ವ.ಚ.ಚನ್ನೇಗೌಡ ರವರು ಮಾತನಾಡಿ “ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯವನಾದ ನಾನು, ಕಳೆದ 5-6 ದಶಕಗಳಿಂದ ಕನ್ನಡ ನಾಡು-ನುಡಿಯ ಹಿತಕ್ಕಾಗಿ, ನಾಡಿನೆಲ್ಲೆಡೆ ಪ್ರಮುಖ ಚಳುವಳಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಕನ್ನಡ ಕಾಯಕ ಮಾಡುವ ಆಶಯಕ್ಕೆ ನೀರೆರೆಯುವ ಕೆಲಸಕ್ಕೆ ತಾಲ್ಲೂಕಿನ ಎಲ್ಲಾ ಸಾಹಿತಿಗಳು, ಹೋರಾಟಗಾರರು, ಸಹಕಾರ ನೀಡಬೇಕು, ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ ಸಬಲೀಕರಣ ಸಮಿತಿ ವರದಿ ಅನುಷ್ಟಾನವಾಗುವಂತೆ ನೋಡಿಕೊಳ್ಳಲು ಪ್ರಥಮ ಆದ್ಯತೆ ನೀಡುವುದು. ರಾಜ್ಯದ ಯುವ ಬರಹಗಾರರ, ಮಹಿಳಾ ಸಾಹಿತಿಗಳಿಗೆ ಪರಿಷತ್ತಿನ ವೇದಿಕೆಗಳಲ್ಲಿ ಅವಕಾಶಗಳನ್ನು ಒದಗಿಸಿಕೊಡುವ ಕಾರ್ಯ ಮಾಡುತ್ತೇನೆ” ಎಂದರು.
ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾದ ರಾ.ನಂ.ಚಂದ್ರಶೇಖರ್ ರವರು ಮಾತನಾಡಿ “ಕನ್ನಡ-ನಾಡು ನುಡಿಯ ಬಗ್ಗೆ ಸದಾ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಾ, ರಾಜ್ಯ ಗೌರವ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಬಂದ ಗೌರವಧನ ₹ 7.20 ಲಕ್ಷ ಕಸಾಪದಲ್ಲಿ ಕನ್ನಡ ಕಾಯಕ ದತ್ತಿ ಪ್ರಶಸ್ತಿ ಸ್ಥಾಪಿಸಿದ್ದಾರೆ. ನೃಪತುಂಗ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ನೀಡುವ ಮೂಲಕ ಕನ್ನಡ ಕ್ರಿಯಾ ಸಮಿತಿಯ ಮೂಲಕ ಕನ್ನಡ ಕೆಲಸ ಮಾಡಿರುವ ಇವರಿಗೆ ಮೊದಲ ಆದ್ಯತೆ ನೀಡಿ. ನಡೆ-ನುಡಿ ಒಂದಾಗಿ ಅಹರ್ನಿಶಿ ದುಡಿದಿರುವ ಇವರನ್ನು ಕಸಾಪ ಅಭ್ಯರ್ಥಿಗಳು ಬೆಂಬಲಿಸಿ ಆಶೀರ್ವಾದಿಸಿ” ಎಂದರು.
ಈ ಸಂದರ್ಭದಲ್ಲಿ ಕಸಾಪ ಸದಸ್ಯರುಗಳಾದ ಮಾಸ್ತಿ ಕೃಷ್ಣಪ್ಪ, ಹಿರಿಯ ಸಾಹಿತಿಗಳಾದ ಕೆ.ಮುನಿಕೃಷ್ಣಪ್ಪ (ಕೆ.ಮು.ಕೃ), ಗಜಲ್ ಕವಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಚೈತನ್ಯ ಕಲಾನಿಕೇತನ ಸಂಸ್ಥೆಯ ಜಯಮಂಗಲ ಚಂದ್ರಶೇಖರ್,ರೋಣೂರು ವೆಂಕಟೇಶ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಅನಂತರಾಜು, ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್, ಜಿಲ್ಲಾ ಗೌರವ ಅಧ್ಯಕ್ಷ ಮಾ.ವೆ.ಪ್ರಕಾಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಎಸ್.ಜಿ ಹಾಗೂ ಅನೇಕ ಕಸಾಪ ಮತದಾರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.