ಸಿಎಂ ಇಬ್ರಾಹಿಂ ಅವರನ್ನು ಹಿಂದೆಯೂ ಪಕ್ಷ ಗುರುತಿಸಿದೆ, ಮುಂದೆಯೂ ಗುರುತಿಸಲಿದೆ – ಯು.ಟಿ.ಖಾದರ್
ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನನ್ನನ್ನು ವಿಧಾನಸಭೆಯ ಉಪನಾಯಕನನ್ನಾಗಿ ಮಾಡಿದ್ದಕ್ಕೂ ಸಿಎಂ ಇಬ್ರಾಹಿಂ ಅವರ ಅಸಮಾಧಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನಸಭೆಯ ಉಪನಾಯಕ, ಶಾಸಕ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಎಂದಿಗೂ ಅಂಬೇಡ್ಕರ್ ಅವರ ಸಂವಿಧಾನ, ಮಹಾತ್ಮ ಗಾಂಧಿಯವರ ತತ್ವ ಸಿದ್ಧಾಂತಗಳ ಆಧಾರದಲ್ಲಿ ಕಾರ್ಯಾಚರಿಸುತ್ತದೆ. ಸಿಎಂ ಇಬ್ರಾಹಿಂ ಅವರನ್ನು ಹಿಂದೆಯೂ ಪಕ್ಷ ಗುರುತಿಸಿದೆ. ಮುಂದೆಯೂ ಗುರುತಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಪ ಸಂಖ್ಯಾತ ನಾಯಕರನ್ನು ಕಾಂಗ್ರೆಸ್ ಬದಿಗೊತ್ತುತ್ತಿದೆ ಎಂಬ ಆರೋಪಗಳನ್ನು ನಿರಾಕರಿಸಿದ ಅವರು, ಎಸ್ಎಂ ಕೃಷ್ಣಾ, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ 5-7 ಸಚಿವರು ಮುಸ್ಲಿಂ ಸಮುದಾಯದವರಾಗಿದ್ದರು. ಒಂದೇ ಬಾರಿ ಎಲ್ಲವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.