ಬೆಳ್ತಂಗಡಿ (www.vknews.in) : ಪುರಾಣ ಪ್ರಸಿದ್ಧ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಫೆಬ್ರವರಿ 12 ರಿಂದ 21 ರ ತನಕ ವೈಭವದಿಂದ ನಡೆಯಲಿದೆ.
ಶನಿವಾರ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಾನದಲ್ಲಿ ಬೆಳಿಗ್ಗೆ ಪ್ರಶ್ನಾ ಚಿಂತನ, ಗೊನೆ ಮುಹೂರ್ತ , ತೋರಣ ಮುಹೂರ್ತ, ನವಕಲಶ , ಧ್ವಜಾರೋಹಣ , ಪ್ರಸನ್ನ ಪೂಜೆ ಜರುಗಿತು.
ಈ ಸಂದರ್ಭದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಕೆಲ್ಲಗುತ್ತು ಸಬ್ರಬೈಲು ಕೆ.ಜಯವರ್ಮರಾಜ ಬಳ್ಳಾಲ್ ಹಾಗೂ ಸಹೋದರ, ಸಹೋದರಿಯರು , ಕುಟುಂಬಸ್ಥರು ಮತ್ತು ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.