ಭೋಪಾಲ್ (ವಿಶ್ವ ಕನ್ನಡಿಗ ನ್ಯೂಸ್) : ಮಧ್ಯಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ನದಿ ಉಕ್ಕಿ ಹರಿದಿದ್ದರಿಂದ ಸುಮಾರು 50 ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿ ಅರಣ್ಯದ ಸಮೀಪವಿರುವ ಎತ್ತರದ ಪ್ರದೇಶಕ್ಕೆ ಓಡಿಹೋದರು. ಈ ಘಟನೆ ಭಾನುವಾರ ನಡೆದಿದೆ.
ಖಾರ್ಗೋನ್ ಜಿಲ್ಲೆಯಲ್ಲಿ, ಭಾರೀ ಮಳೆಯ ನಂತರ ಸುಖ್ದಿ ನದಿ ಇದ್ದಕ್ಕಿದ್ದಂತೆ ಪರ್ವತದ ನೀರಿನಲ್ಲಿ ಹರಿಯಿತು. ಇಂದೋರ್ನಿಂದ ಪ್ರವಾಸಕ್ಕೆಂದು ಬಂದಿದ್ದ ಮಹಿಳೆಯರು ಮತ್ತು ಮಕ್ಕಳ ಗುಂಪು ಸಿಕ್ಕಿಬಿದ್ದಿದೆ. ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ಅವರು ಪ್ರಯಾಣಿಸುತ್ತಿದ್ದ 14 ಕಾರುಗಳು ನದಿಯಲ್ಲಿ ಕೊಚ್ಚಿ ಹೋಗಿವೆ.
ನದಿ ತುಂಬಿ ಹರಿಯುತ್ತಿರುವುದನ್ನು ಕಂಡ ಪ್ರವಾಸಿಗರು ಎತ್ತರದ ಪ್ರದೇಶಕ್ಕೆ ಓಡಿ ಹೋಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ 10 ಕಾರುಗಳನ್ನು ತೆಗೆಯಲಾಗಿದೆ. ಆದರೆ ಕಾರಿನೊಳಗೆ ನೀರು ನುಗ್ಗಿದ್ದರಿಂದ ಕಾರು ಸಂಪೂರ್ಣ ಕೆಟ್ಟಿದೆ ಎಂದು ಹೇಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.