ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದುಬೈನ ಅತಿ ದೊಡ್ಡ ಹಿ೦ದೂ ದೇವಾಲಯವನ್ನು ಭಕ್ತರಿಗೆ ಸಮರ್ಪಿಸಲಾಯಿತು. ಜಿಬೆಲ್ ಅಲಿಯಲ್ಲಿನ ಹಿಂದೂ ದೇವಾಲಯವು ಮಂಗಳವಾರ ಭಕರಿಗೆ ತನ್ನ ಬಾಗಿಲುಗಳನ್ನು ತೆರೆದಿದೆ. ಯುಎಇ ಮುಂದಿಟ್ಟಿರುವ ಸಹಿಷ್ಣುತೆ ಮತ್ತು ಜಾತ್ಯತೀತ ಚಿ೦ತನೆಗೆ ಅನುಗುಣವಾಗಿ ಸಿಖ್ ಗುರುದ್ದಾರ ಮತ್ತು ಕ್ರಿಶ್ಚಿಯನ್ ಮಸೀದಿಗಳ ಸಮೀಪದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲಾಗಿದೆ. ಉದ್ಭಾಟನಾ ಸಮಾರ೦ಭವು ಮುಖ್ಯ ಪ್ರಾರ್ಥನಾ ಮಂದಿರದಲ್ಲಿ ನಡೆಯಿತು.
ಯುಎಇಯ ಗೌರವಾನ್ವಿತ ಸಚಿವರಾದ ಘನತೆವೆತ್ತ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ದೀಪವನ್ನು ಬೆಳಗಿಸಿ ಔಪಚಾರಿಕವಾಗಿ ಉದ್ಭಾಟಿಸಿದರು. ಶೇಖ್ ನಹ್ಯಾನ್ ಅವರೊ೦ದಿಗೆ ಭಾರತೀಯ ರಾಯಭಾರಿ ಸ೦ಜಯ್ ಸುಧೀರ್, ಸಮುದಾಯ ಅಭಿವೃದ್ಧಿ ಪ್ರಾಧಿಕಾರದ (ಸಿಡಿಎ) ಸಿಇಒ ಡಾ. ಸ೦ಜೀವ್ ಕುಮಾರ್, ಸಮುದಾಯ ಅಭಿವೃದ್ಧಿ ಪ್ರಾಧಿಕಾರದ ಮಹಾನಿರ್ದೇಶಕ ಅಹ್ಮದ್ ಅಬ್ದುಲ್ ಕರೀ೦ ಉಪಸ್ಥಿತರಿದ್ದರು.
ರಾಜತಾ೦ತ್ರಿಕರು, ಧಾರ್ಮಿಕ ನಾಯಕರು, ವ್ಯಾಪಾರ ಮಾಲೀಕರು ಮತ್ತು ಭಾರತೀಯ ಸಮುದಾಯದ ಸದಸ್ಯರು ಸೇರಿದಂತೆ 200 ಕ್ಕೂ ಹೆಚ್ಚು ಗಣ್ಯರು ಉದ್ಭಾಟನಾ ಸಮಾರ೦ಭದಲ್ಲಿ ಭಾಗವಹಿಸಿದ್ದರು. ದೇವಾಲಯದ ಧರ್ಮದರ್ಶಿ ರಾಜು ಶ್ರಾಫ್ ಸ್ವಾಗತಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.