ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ಕೊಟ್ಟಾರ ಬಳಿ ಭಿನ್ನ ಕೋಮಿನ ಯುವಕ ಯುವತಿಯರ ಗುಂಪನ್ನು ಹಿಂದೂ ಸಂಘಟನೆಗಳ ಸದಸ್ಯರು ಅಡ್ಡಗಟ್ಟಿ ಕಿರುಕುಳ ನೀಡಿರುವ ಘಟನೆ ಶನಿವಾರ ತಡರಾತ್ರಿ ವರದಿಯಾಗಿದೆ. ವರದಿಗಳ ಪ್ರಕಾರ, ಸಂಘಪರಿವಾರದ ಸದಸ್ಯರು ಯುವಕರನ್ನು ತಡೆದು ನೈತಿಕ ಪೊಲೀಸ್ ಗಿರಿ ನಡೆಸಿದಾಗ ಯುವಕರು ಹೋಟೆಲ್ನಲ್ಲಿ ಊಟ ಮಾಡಲು ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಹಿಂದುತ್ವ ಕಾರ್ಯಕರ್ತರು ಮಧ್ಯರಾತ್ರಿಯಲ್ಲಿ ಸುತ್ತಮುತ್ತಲಿನ ಯಾವುದೇ ಹೋಟೆಲ್ಗಳು ತೆರೆದಿರಲಿಲ್ಲ ಎಂದು ತಮ್ಮ ಹೇಳಿಕೆಯನ್ನು ಪ್ರತಿಪಾದಿಸಿದರು.
ಸ್ಥಳೀಯ ಪೊಲೀಸ್ ಗಸ್ತು ತಂಡವು ಸ್ಥಳಕ್ಕೆ ತಲುಪಿ ಮಧ್ಯಪ್ರವೇಶಿಸುವ ಮೊದಲು ಹಿಂದುತ್ವ ಕಾರ್ಯಕರ್ತರು ಯುವಕರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು ಎಂದು ವರದಿಗಳು ಹೇಳುತ್ತವೆ. ನಂತರ ಪೊಲೀಸ್ ತಂಡ ಸಮಸ್ಯೆ ಬಗೆಹರಿಸಿ ಪರಿಸ್ಥಿತಿ ನಿಯಂತ್ರಿಸಿದರು. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲವಾದರೂ, ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಖಂಡನೆ ವ್ಯಕ್ತವಾಗುತ್ತಿದೆ.
An incident of moral policing reported in #Mangalore. #bajrangdal members harassed an interfaith couple for roaming in the night. They beat up the #Muslim boy before he was handed over to police. #Karnataka pic.twitter.com/2eTGCKo4Xt — Imran Khan (@KeypadGuerilla) December 11, 2022
An incident of moral policing reported in #Mangalore. #bajrangdal members harassed an interfaith couple for roaming in the night. They beat up the #Muslim boy before he was handed over to police. #Karnataka pic.twitter.com/2eTGCKo4Xt
— Imran Khan (@KeypadGuerilla) December 11, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.