(www.vknews.in) ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ-ಕರ್ನಾಟಕ ಇವರ ಅಧೀನದಲ್ಲಿ
ದಿನಾಂಕ ೨೧.೧೨.೨೦೨೨ ರಂದು ಶಾಸಕರ ಭವನದಲ್ಲಿ ಡಾ.ನಿರಂಜನಾರಾಧ್ಯ ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞರು ಮತ್ತು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರು ಇವರ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಕ್ಷೇತ್ರದ ಜಲ್ವಂತ ಸಮಸ್ಯೆಗಳ ಕುರಿತು ಚರ್ಚಿಸಲು ಒಂದು ದಿನದ ದುಂಡುಮೇಜಿನ ಸಭೆ ನಡೆಯಿತು. ಕಳೆದ ಮೂರು-ನಾಲ್ಕು ವರ್ಷಗಳಿಂದ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಅಸಂವಿಧಾನಿಕ ಹಾಗು ಮಕ್ಕಳ –ಪಾಲಕ ವಿರೋಧಿ ನೀತಿಗಳಿಂದಾಗಿ ಶಾಲಾ ಶಿಕ್ಷಣ ಕೇತ್ರ ನಲುಗಿದ್ದು , ಶಿಕ್ಷಣಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಂಘಟನೆಗಳು ಒಗ್ಗಟ್ಟಿನ ಮೂಲಕ ಶಾಲಾ ಶಿಕ್ಷಣ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲು ಈ ದುಂಡು ಮೇಜಿನ ಸಭೆಯನ್ನು ಆಯೋಜಿಸಲಾಗಿತ್ತು.
ಕೇಂದ್ರ ಸರ್ಕಾರವು ಸಂವಿಧಾನದ ಭಾಗವಾಗಿರುವ ಶಿಕ್ಷಣದ ಮೂಲಭೂತ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲು ಶಿಕ್ಷಣದ ಹಕ್ಕನ್ನು ಕಸಿಯು ಹಾಗು ಗೌಣಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಕೇವಲ ಪ್ರತಿಷ್ಠೆ ಹಾಗು ತನ್ನ ಗೌಪ್ಯ ಅಜೆಂಡಾವನ್ನು ಎಳೆಯ ಮಕ್ಕಳ ಮೇಲೆ ಹೇರುವ ಭಾಗವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಸರದಲ್ಲಿ ಬದಲಾಯಿಸುವ ಮೂಲಕ ಕಳೆದ ೭೫ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರ ಒಳಗೊಳ್ಳುವಿಕೆಗೆ ಪೂರಕವಾಗಿ ಸಾಧಿಸಿದ್ದ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಇಲ್ಲವನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ಅನೇಕ ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿದ್ದು ಅವಕಾಶ ವಂಚಿತ ಮಕ್ಕಳ ಶಾಲಾ ಶಿಕ್ಷಣಕ್ಕೆ ಪೂರಕವಾಗಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮತ್ತು ಅಲ್ಪ ಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ಮೌಲನಾ ಅಝಾದ್ ರಾಷ್ಟ್ರೀಯ ಫೆಲೋಷಿಪ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಅವಕಾಶ ವಂಚಿತ ಹಾಗು ಅಲ್ಪ ಸಂಖ್ಯಾತ ವರ್ಗದ ಮಕ್ಕಳ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ .
ಇನ್ನು ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣದಲ್ಲಿ , ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಾಗುತ್ತಿರುವ ಏಕಪಕ್ಷೀಯ ಬದಲಾವಣೆ, ಅವೈಜ್ಞಾನಿಕ ಬೆಳವಣಿಗೆ ಹಾಗು ಮೂಲ ವಾರಸುದಾರರನ್ನು ಕಡೆಗೆಣಿಸಿ ತೆಗೆದುಕೊಳ್ಳುತ್ತಿರುವ ತೀರ್ಮಾನಗಳು , ದೀರ್ಘಕಾಲದಲ್ಲಿ ನಾವು ಈ ಹಿಂದೆ ಸಾಧಿಸಿದ್ದ ಸ್ವಲ್ಪಮಟ್ಟಿನ ಬದಲಾವಣೆಗಳನ್ನು ತಿಳಿಗೊಳಿಸಿ ವ್ಯವಸ್ಥೆಯನ್ನು ಮತ್ತಷ್ಟು ದುರ್ಬಲಗೊಳಿಸುವ ಎಲ್ಲಾ ಕುರುಹುಗಳು ಕಾಣಿಸತೊಡಗಿವೆ. ಈ ಎಲ್ಲಾ ಜ್ವಲಂತ ಸಮಸ್ಯೆಗಳನ್ನು ದುಂಡು ಮೇಜಿನ ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿ ಬೆಳೆಸಿ ಬಲವರ್ಧಿಸುವ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸಂಘಟನೆಗಳು ಸರ್ವಾನುಮತದಿಂದ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮಂಡಿಸಿ ಅಂಗೀಕರಿಸಿದರು.
1. ೫ ಮತ್ತು ೮ ನೇ ತರಗತಿಯ ಮಕ್ಕಳಿಗೆ ನಡೆಸಲು ಉದ್ದೇಶಿಸಿರುವ ಅವೈಜ್ಞಾನಿಕ ಪರೀಕ್ಷೆಯನ್ನು ಕೈಬಿಟ್ಟು ವ್ಯಾಪಕ ಹಾಗು ನಿರಂತರ ಮೌಲ್ಯಮಾಪನದ ಆಧಾರದಲ್ಲಿ ಮಕ್ಕಳ ಕಲಿಕೆಯನ್ನು ಶಾಲಾ ಹಂತದಲ್ಲಿ ಸಿಸಿಇ ಅನ್ವಯ ಮೌಲ್ಯಾಂಕನ ಮಾಡಿ ಅಗತ್ಯ ಕ್ರಮ ವಹಿಸಬೇಕು
2. ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮತ್ತು ಅಲ್ಪ ಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ಮೌಲನ ಅಬುಲ್ ಕಲಾಂ ಅಜಾದ್ ಫೆಲೋಷಿಪ್ ಕಾರ್ಯಕ್ರಮಗಳನ್ನು ರಾಜ್ಯ ಅನುದಾನದಲ್ಲಿ ಮುಂದುವರಿಸಬೇಕು
3. ಅಂಗವಿಕಲ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳ ಕಲಿಕೆ ಒತ್ತು ನೀಡುವ ಮೂಲಕ ಶಿಕ್ಷಣ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಹಾಗು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು
4. ರಾಜ್ಯದಲ್ಲಿ ಅಪೌಷ್ಠಿಕತೆ ತೊಡೆದು ಹಾಕಲು ಅಂಗನವಾಡಿಯಿಂದ ೧೦ ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಕನಿಷ್ಠ ಮೂರು ಬಾರಿ ಮೊಟ್ಟೆ ವಿತರಿಸಬೇಕು.
5. ಇತರೆ ರಾಜ್ಯಗಳಲ್ಲಿರುವಂತೆ ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಯಂತ್ರಣ ಮತ್ತು ಪಾಲಕರ ಭಾಗವಹಿಸುವಿಕೆಗೆ ಪೂರಕವಾದ ಶುಲ್ಕ ನಿಯಂತ್ರಣ ಕಾಯಿದೆ ರೂಪಿಸಿ ಜಾರಿಗೊಳಿಸಬೇಕು
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮವಹಿಸಬೇಕೆಂದು ಸಭೆಯು ಒಕ್ಕೊರಲಿನಿಂದ ತೀರ್ಮಾನಿಸಿತು.ಈ ಎಲ್ಲಾ ವಿಷಯಗಳು ಹಾಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆಯಾಗಬೇಕೆಂದು ಸಭೆ ಒತ್ತಾಯಿಸಿತು. ಈ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಈ ವಿಷಯಗಳನ್ನು ಪ್ರಧಾನ ವಿಷಯಗಳನ್ನಾಗಿ ಪ್ರಸ್ತಾಪಿಸುವ ಮೂಲಕ ಸರಿಸುಮಾರು ಮೂರು ಕೋಟಿಯಿರುವ ಪಾಲಕರು ಪೋಷಕರು ನಿರ್ಣಾಯಕ ರೀತಿಯಲ್ಲಿ ಮತ ಚಲಾಯಿಸಬೇಕೆಂದು ಸಭೆ ಒಮ್ಮತದಿಂದ ತೀರ್ಮಾನಿಸಿತು.
ಭಾಗವಹಿಸಿ ಅನುಮೋದಿಸಿದ ಸಂಘಟನೆಗಳ ವಿವರ
01. ಡಾ.ನಿರಂಜನಾರಾಧ್ಯ ವಿ.ಪಿ ಅಭಿವೃದ್ಧಿ ಶಿಕ್ಷಣ ತಜ್ಞರು ಮತ್ತು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕರು
02. ಬಿ.ಎಸ್.ಯೋಗಾನಂದ ಅಧ್ಯಕ್ಷರು̧ ಕರ್ನಾಟಕ ರಾಜ್ಯ ಶಾಲಾ ಕಾಲೇಜುಗಳ ಪೋಷಕರ ಸಂಘಟನೆಗಳ ಸಮನ್ವಯ ವೇದಿಕೆ
03. ಲೋಕೇಶ್ ತಾಳೀಕಟ್ಟೆ ಅಧ್ಯಕ್ಷರು̧ ಗ್ರಾಮೀಣ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ(ರೂಪ್ಸ)
04. ಕುಮಾರ ಸ್ವಾಮಿ ಶಿಕ್ಷಣ ಮುಖ್ಯಸ್ಥರು ಮಗು ಮತ್ತು ಕಾನೂನು ಕೇಂದ್ರ ,ಎನ್ ಎಲ್ ಎಸ್ ಐ ಯು, ಬೆಂಗಳೂರು
05.ನವಾಝ್ ನಾಯಕರು ಸ್ಟೂಡೆಂಟ್ ಇಸ್ಲಾಮಿಕ್ ಸಂಘಟನೆ
06.ಮಂಜುಶ್ರೀ ಅಧ್ಯಕ್ಷರು̧ ಆದಿವಾಸಿ ಬುಡಕಟ್ಟು ಮಹಾಸಭಾ
07.ಮಲ್ಲಿಗೆ ಸಿರಿಮನೆ ನಾಯಕರು ಕರ್ನಾಟಕ ಜನಶಕ್ತಿ.
08.ಬೆಂಕಿ ಸರೋವರ ನಾಯಕರು ಕರ್ನಾಟಕ ವಿದ್ಯಾರ್ಥಿ ಶಕ್ತಿ
09.ಜಿ.ರವಿ ಮುಖ್ಯಸ್ಥರು ಫೋರ್ತ್ ವೇವ್ ಫೌಂಡೇಶನ್
10.ಸುರೇಶ್ ಅರಳಕುಪ್ಪೆ ಕಾರ್ಯದರ್ಶಿ ಕರ್ನಾಟಕ ವಿಚಾರವಾದಿ ವೇದಿಕೆ
11. ಡಾ.ಅರ್ಚನ ಲೇಖಕರು ಹಾಗು ಶಿಕ್ಷಣ ತಜ್ಞರು
12. ಸೌಮ್ಯ ಲೇಖಕರು ಹಾಗು ಶಿಕ್ಷಣ ತಜ್ಞರು
13.ಉಷಾ ಮೋಹನ್ ಲೇಖಕರು ಹಾಗು ಶಿಕ್ಷಣ ತಜ್ಞರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.