ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಸುರತ್ಕಲ್ ಕಾಟಿಪಳ್ಳ ದಲ್ಲಿ ಅಂಗಡಿಯಲ್ಲಿ ಕೆಲಸಕ್ಕಿರುವ ಜಲೀಲ್ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಖಂಡನೀಯ, ದ ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅನೈತಿಕ ಪೊಲೀಸ್ ಗಿರಿ ಘಟನೆಗಳು ನಡೆದಾಗ, ಹಲವು ಬಾರಿ ಜಿಲ್ಲಾಡಳಿತ ದೊಂದಿಗೆ ಎಚ್ಚರವಹಿಸಲು ಮನವಿಯನ್ನು ನೀಡಿದ್ದೆವು, ಆರೋಪಿಗಳಿಗೆ ಸಣ್ಣ ಪುಟ್ಟ ಕೇಸು ಹಾಕಿ ಬಿಡುಗಡೆಯಾಗುವಂತೆ ಪೊಲೀಸ್ ಇಲಾಖೆ ಸಹಕರಿಸಿದ್ದೇ ದುಷ್ಕರ್ಮಿಗಳಿಗೆ ಕ್ರಿಮಿನಲ್ ಗಳಲ್ಲಿ ಭಾಗವಹಿಸಲು ಪ್ರೇ ರಣೆ ನೀಡಿದಂತಾಗಿ, ಕಾನೂನಿನ ಹೆದರಿಕೆ ಇಲ್ಲದಂತಾಗಿದೆ.
ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹೇಳಿಕೆಯೂ ಇದಕ್ಕೆ ನೇರ ಪ್ರೇರಣೆಯಾಗಿದೆ. ಅನೈತಿಕ ಪೊಲೀಸಗಿರಿ ಮತ್ತು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಸರಕಾರ ನೇರ ಹೊಣೆ. ಜಿಲ್ಲಾಡಳಿತ ಕೂಡಲೇ ಮದ್ಯೆ ಪ್ರವೇಶಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ದಕ್ಷಿಣ ಕನ್ನಡ ಮುಸ್ಲಿಂ ಸಂಘಟನೆಗಳ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಕೆ .ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.