(www.vknews.in)
ಮಂಗಳೂರು :ಕರ್ನಾಟಕ ರಾಜ್ಯವು ಸೌಹಾರ್ದತೆಯ ನೆಲೆಯಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಬುದ್ದಿವಂತರ ಜಿಲ್ಲೆ ಎಂಬ ಖ್ಯಾತಿ ಇದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆ ಸಮೇತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಲವ್ ಜಿಹಾದ್, ಮಹಿಳಾ ದೌರ್ಜನ್ಯ ಎಂಬ ನೆಪವೊಡ್ಡಿ ಮರಣಾಂತಿಕ ಗುಂಪು ಹಲ್ಲೆಗಳು ನಡೆಯುತ್ತಿದೆ. ಸಮಾಜಘಾತುಕ ಶಕ್ತಿಗಳಿಂದ ಈ ಕೃತ್ಯಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ ಬಲಿಷ್ಠ ರಕ್ಷಣಾ ಪಡೆ ಇದ್ದರೂ ಅಶಾಂತಿ ತಲೆದೋರುತ್ತಲೇ ಇದೆ. ಇದೀಗ ಸ್ತ್ರೀಯರನ್ನು ಮುಂದಿಟ್ಟು ಹಲ್ಲೆಗಳಾಗುತ್ತಿದೆ. ಇದರಿಂದ ಹಲ್ಲೆಗೊಳಗಾದವನೇ ಅಪಾರಾಧಿಯಾಗಿ ಬಿಂಬಿಸುತ್ತಾನೆ. ಹಿಂಸಾಕೃತ್ಯಗಳಿಗೆ ಸುಲಭ ಜಾಮೀನು ದೊರಕುತ್ತದೆ. ಇದರಿಂದ ಮುಂದೆ ಇಂತಹ ಅನಾಗರಿಕ ಕೃತ್ಯಗಳಿಗೆ ಸಹಕಾರಿಯಾಗುತ್ತಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ ಹಾಗೂ ಹಲ್ಲೆ ಗೊಳಗಾದವನು ದೂರು ನೀಡುವಂತಿಲ್ಲ. ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ ಗಳನ್ನು ತಡೆಹಿಡಯಬೇಕು. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ನಿಯೋಗ ಪೋಲೀಸ್ ಅಧಿಕಾರಿ ಗಳಾದ ನಗರ ಪೊಲೀಸ್ ಕಮಿಷನರ್, ಡಿ. ಐ. ಜಿ. ಪಿ, ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್, ಪ್ರಧಾನ ಕಾರ್ಯದರ್ಶಿ ಟಿ ಯು ಇಸ್ಮಾಯಿಲ್ ಬಿ ಸಿ ರೋಡ್, ಕಾರ್ಯದರ್ಶಿ ರಿಯಾಝ್ ಹರೇಕಳ, ಹೆಚ್ ಇಸ್ಮಾಯೀಲ್ ಬಂದರ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.