(www.vknews.in) : ಭಾನುವಾರ ನಮ್ಮನ್ನಗಲಿದ ಆತ್ಮೀಯ ಮಿತ್ರರೂ, ಸಮಾಜ ಸೇವಕರೂ, ಧಾರ್ಮಿಕ ಮುಖಂಡರೂ , ಸರಳ ಸಜ್ಜನಿಕೆಯ ಸಕಾರ ಮೂರ್ತಿಯೂ, ಬಡ ಹೆಣ್ಣುಮಕ್ಕಳ ಕಲ್ಯಾಣ ಭಾಗ್ಯದ ರುವಾರಿಯೂ , ಸದಾ ಹಸನ್ಮುಖಿಯೂ, ಕೊಡುಗೈ ದಾನಿಯೂ, ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ ಮೆಂಟ್ ಇದರ ಅಧ್ಯಕ್ಷರೂ , ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಪ್ರಮುಖ ನೇತಾರರೂ ದಾರುನ್ನೂರ್ ಕಾಶಿಪಟ್ಣ ಇದರ ಸ್ಥಾಪಕ ಸದಸ್ಯ ಮತ್ತು ಪ್ರಸಕ್ತ ಕಾರ್ಯದರ್ಶಿಯೂ, ದಾರುಸ್ಸಲಾಂ ಬೆಳ್ತಂಗಡಿ ಟ್ರಸ್ಟ್ ಇದರ ಕೋಶಾಧಿಕಾರಿಯೂ , ಎಲ್ಲಾ ಸಂಘ ಸಂಸ್ಥೆಗಳ ಪೋಷಕ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರ ಹಿರಿಯ ಸಹೋದರರೂ ಆದ ಜನಾಬ್ ನೌಶಾದ್ ಹಾಜಿ ಸೂರಲ್ಪಾಡಿಯವರ ವಿದಾಯಕ್ಕೆ ಅನಿವಾಸಿ ಸಂಘ ಸಂಸ್ಥೆಗಳ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಪಾರತ್ರಿಕ ವಿಜಯಕ್ಕೆ ಎಲ್ಲಾ ಸಹೃದಯರು ಪ್ರಾರ್ಥನೆ ಮಾಡಬೇಕೆಂದು ವಿನಂತಿಸಿದರು. ಮರ್ಹೂಂ ನೌಶಾದ್ ಹಾಜಿ ಸೂರಲ್ಪಾಡಿ, ಅನಿವಾಸಿ ಧಾರ್ಮಿಕ, ಸಾಮಾಜಿಕ ಸಕ್ರೀಯ ಕಾರ್ಯಕರ್ತ ಅಶ್ರಫ್ ಪರ್ಲಡ್ಕ ಅವರ ತಾಯಿ ಮರ್ಹೂಂ ಮರಿಯಮ್ಮ ಗೋಳಿಕಟ್ಟೆ ಪರ್ಲಡ್ಕ, ನೌಶಾದ್ ಹಾಜಿ ಸೂರಲ್ಪಾಡಿ ಅವರ ಆಪ್ತ ಸಹಾಯಕ SKSSF ಸಕ್ರೀಯ ಕಾರ್ಯಕರ್ತ ಮುಶರ್ರಫ್ ಉಳಾಯಿಬೆಟ್ಟು ಅವರ ಮೇಲೆ ದುಆ ಮಜ್ಲಿಸ್ , ಖತಮುಲ್ ಕುರ್ ಆನ್ , ತಹಲೀಲ್ ಸಮರ್ಪಣೆ ಮತ್ತು ಅನುಸ್ಮರಣೆ ಕಾರ್ಯಕ್ರಮವನ್ನು SKSSF ಕರ್ನಾಟಕ ಸ್ಟೇಟ್ ಯುಎಇ ಸಮಿತಿ ಇದರ ಅಧೀನದಲ್ಲಿ ಸಯ್ಯದ್ ಆಸ್ಕರ್ ಅಲಿ ತಂಗಳ್ ಕೋಲ್ಪೆಯವರ ನೇತೃತ್ವದಲ್ಲಿ ಇದೇ ಬರುವ ಮಂಗಳವಾರ ರಾತ್ರಿ 9:00 ಗಂಟೆಗೆ ಸರಿಯಾಗಿ ಅಬುಹೈಲ್ ನಲ್ಲಿರುವ KMCC ಹಾಲ್ ನಲ್ಲಿ ನಡೆಸಲಾಗುವುದು.
ಎಲ್ಲಾ ಸಂಘ ಸಂಸ್ಥೆಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಮೃತರ ಪಾರತ್ರಿಕ ವಿಜಯಕ್ಕಾಗಿ ಮಾಡುವ ದುಆ ಕಾರ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕಾಗಿ ವಿನಂತಿಸಿದರು.
SKSSF ಕರ್ನಾಟಕ ಸ್ಟೇಟ್ ಯುಎಇ ಅಧ್ಯಕ್ಷ ಸೈಯದ್ ಅಸ್ಕರ್ ಅಲಿ ತಂಙಳ್, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಅಧ್ಯಕ್ಷ ಜನಾಬ್ ಜನಾಬ್ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ , ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಯುಎಇ ಅಧ್ಯಕ್ಷ ಮೊಹಮ್ಮದ್ ಹಾಜಿ ಮಾಡಾವು ಶಂಸುಲ್ ಉಲಮಾ ಎಜುಕೇಷನ್ ಟ್ರಸ್ಟ್ ತೋಡಾರ್ ಯುಎಇ ಅಧ್ಯಕ್ಷ ಜನಾಬ್ ಸಲೀಂ ಮೂಡುಬಿದಿರೆ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಯುಎಇ ಅಧ್ಯಕ್ಷ ಜನಾಬ್ ಶೆರೀಫ್ ಕಾವು, ದಾರುಸ್ಸಲಾಮ್ ಎಜುಕೇಷನ್ ಟ್ರಸ್ಟ್ ಬೆಳ್ತಂಗಡಿ ಯುಎಇ ಕೋಶಾಧಿಕಾರಿ ಜನಾಬ್ ಇಬ್ರಾಹಿಂ ಆತೂರ್, ದಾರುಲ್ ಹಸನಿಯಾ ಎಜುಕೇಷನ್ ಟ್ರಸ್ಟ್ ಸಾಲ್ಮರ ಯುಎಇ ಅಧ್ಯಕ್ಷ ಜನಾಬ್ ಅನೀಸ್ ಪುರುಷರಕಟ್ಟೆ SKSSF ವಿಖಾಯ ವಿಂಗ್ ಯುಎಇ ಸಮಿತಿ ಅಧ್ಯಕ್ಷ ಜನಾಬ್ ನವಾಝ್ ಬಿಸಿ ರೋಡ್, ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.