(www.vknews.in) ಬೋಳಿಯಾರು ಗ್ರಾಮ ನೇತ್ರಾವತಿ ನಧಿತೀರ ಪ್ರದೇಶದ ಹಚ್ಚ ಹಸಿರಿನ ಸೊಬಗಿನಲ್ಲಿ ಕಂಗೊಳಿಸುತ್ತಿರುವ ಇತಿಹಾಸ ಪ್ರಸಿದ್ಧ ಅಮ್ಮೆಂಬಳ ಕೇಂದ್ರ ಜುಮ್ಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 30/12/2022 ರಂದು ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಮಹಲ್ ಖಾಝಿ ಹಾಗೂ ಮಸೀದಿ ಗೌರವಾಧ್ಯಕ್ಷರಾದ ಖುರ್ರತುಸ್ಸಾದಾತ್ ಸೆಯ್ಯಿದ್ ಕೂರತ್ ತಂಗಲ್ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ಆಯ್ಕೆ ಮಾಡಲಾಯಿತು.
ಮಸೀದಿ ಖತೀಬ್ ಸಯ್ಯಿದ್ ಆಮೀರ್ ಅಸ್ಸಖಾಫ್ ತಂಗಲ್ ರವರು ದುಆ ಮಾಡಿದರು. ವಾರ್ಷಿಕ ಮಹಾಸಭೆಯ ಸಭಾದ್ಯಕ್ಷತೆಯನ್ನು ಕುರಾ ತಂಗಲ್ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸಬೀರ್ k ವರದಿ ವಾಚಿಸಿದರು.
2023 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಖುರ್ರತುಸ್ಸಾದಾತ್ ಸೆಯ್ಯಿದ್ ಕೂರತ್ ತಂಗಲ್, ಅಧ್ಯಕ್ಷರಾಗಿ ಸತತ 3ನೆ ಬಾರಿಗೆ ಉಬೈದ್ BH, ಉಪಾಧ್ಯಕ್ಷರನ್ನಾಗಿ ಕರೀಮ್ G, ಪ್ರಧಾನ ಕಾರ್ಯದರ್ಶಿಯಾಗಿ ಸಬೀರ್ , ಜೊತೆ ಕಾರ್ಯದರ್ಶಿ ಯಾಗಿ ರಫೀಕ್ H, ಕೋಶಾಧಿಕಾರಿಯಾಗಿ ಆಸಿಫ್ T, ಲೆಕ್ಕಪರಿಶೋಧಕರಾಗಿ ಸಿರಾಜುದ್ದೀನ್ MSA, ಮನ್ಸೂರ್ G ಹಾಗೂ ನೂತನ ಕಾರ್ಯಕಾರಿ ಸದಸ್ಯರನ್ನಾಗಿ ಸಿದ್ಧೀಕ್ G, ಹನೀಫ್ bit, ಅಬ್ಬಾಸ್.S, ರಿಯಾಝ್ T, ನಿಜಾಮುದ್ದೀನ್ , ಪರ್ವೀಝ್ ,ನಬೀಲ್, ಇವರನ್ನು ನೇಮಕ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.