(www.vknews.in) : ಇತ್ತೀಚೆಗೆ ನಳಿನ್ ಕುಮಾರ್ ಕಟೀಲು ರವರು ವ್ಯತ್ಯಯದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಟೋಲ್ ತೆರವು ಹೋರಾಟಕ್ಕೆ ಮಖಾಡೆ ಮಲಗಿದ ಜಿಲ್ಲಾ ಬಿ.ಜೇ.ಪಿ ಗೆ ಜಿಲ್ಲೆಯ ಜನ ಉಗಿದು ಹಾಕಿರುತ್ತಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಯಿಂದ ಮತ್ತು ಲವ್ ಜಿಹಾದ್ ಪ್ರಹಸನ ದಿಂದ ಕಂಗೆಟ್ಟ ಜಿಲ್ಲೆಯ ಜನ ಬೀದಿಗೆ ಇಳಿಯುತ್ತಿಲ್ಲ,ಜಿಲ್ಲೆಯ ಸರಕಾರಿ ಪ್ರಾಯೋಜಿತ ಮತೀಯ ಗಲಭೆಗೆ ಇತ್ತೀಚೆಗೆ ಒಂದು ಜೀವ ಹಾನಿ ಯು ಕೂಡಾ ಸೇರ್ಪಡೆ ಗೊಂಡಿದೆ.
ಜನರು ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡಿದ್ದಾರೆ.ನಳಿನ್ ಕುಮಾರ್ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಮುಖ್ಯಮಂತ್ರಿ ವಸ್ತ್ರ ಹೊಲಿಸಿ ಕೊಂಡು ಇಟ್ಟಿದ್ದಾರೆ ಎಂದು ವ್ಯಂಗ್ಯ ವಾಡಿದ್ದರೆ. ನಳಿನ್ ಕುಮಾರ್ ತಾಕತ್ತು ಇದ್ದರೆ,ಜಿಲ್ಲೆಯ ಅಭಿವೃದ್ಧಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಜಿಲ್ಲೆಯಲ್ಲಿ ಟೆಕ್ನೋ ಪಾರ್ಕ್ ಬಗ್ಗೆ ಮಾನ್ಯ ವೈದ್ಯಕೀಯ ಶಿಕ್ಷಣ ಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ ಹೊರತು ಈ ಯೋಜನೆಯ ವಿವರಣೆ ನೀಡಲಿಲ್ಲ.
ನಳಿನ್ ಕುಮಾರ್ ಗೆ ಜಿಲ್ಲೆಯಲ್ಲಿ ಇನ್ನೊಂದು ಸುತ್ತಿನ ಮತೀಯ ಉದ್ವಿಗ್ನತೆಯನ್ನು ಅಗತ್ಯತೆ ಇದ್ದ ಹಾಗೆ ಇದೆ. ಇದಕ್ಕೆ ಜಿಲ್ಲೆಯ ಜನತೆ ಟೋಲ್ ತೆರವಿನ ರೀತಿಯ ಉತ್ತರವನ್ನು ಮುಂದಿನ ಚುನಾವಣೆಯಲ್ಲಿ ನೀಡಲಿದ್ದಾರೆ.ಜನರ ಅತೀ ಅಪೇಕ್ಷಿತ ಮೂಲ ಸೌಕರ್ಯ ವಾದ ರಸ್ತೆ,ಸಾರಿಗೆ ವ್ಯವಸ್ಥೆ ಯ ಸುಧಾರಣೆ ಬಗ್ಗೆ ಜನರು ಪ್ರಸ್ತಾಪಿಸುವುದು ಬೇಡ,ರಸ್ತೆ ಗುಂಡಿ,ಚರಂಡಿ,ಮೋರಿಯ ಬಗ್ಗೆ ಚಿಂತಿಸಬೇಡಿ ಲವ್ ಜಿಹಾದ್ ಬಗ್ಗೆ ಜನರು ಹೆಚ್ಚಿನ ಗಮನ ಕೊಡಿ ಎಂದು ಹೇಳುವ ನೀಚ ಸ್ಥಿತಿಗೆ ಬಂದ ನಮ್ಮ ಸಂಸದರು ತೆತ್ರಾ ಯುಗದಲ್ಲಿ ಇದ್ದಂತಿದೆ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.