(www.vknews.in) ಭದ್ರಾವತಿ: ಕಡದಕಟ್ಟೆಯ ನವಚೇತನ ಕನ್ನಡ ಶಾಲೆಯ ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ರವರ ಶಿಕ್ಷಣ ಕ್ಷೇತ್ರದಲ್ಲಿನ ಅಮೋಘ ಸೇವೆ,ಸಾಹಿತ್ಯ ಸೇವೆ,ಕನ್ನಡ ನಾಡು-ನುಡಿಯ ಬಗ್ಗೆ ಇರುವ ವಿಶೇಷ ಕಾಳಜಿ ಗುರುತಿಸಿ ಹಾವೇರಿ ಜಿಲ್ಲೆಯ ಹೊಸರತ್ತಿಯ ಶ್ರೀ ಶ್ರೀ ಡಾ.ಸುಬುಧೇಂದ್ರ ತೀರ್ಥ
ವಿದ್ಯಾ ಸಂಸ್ಥೆಯು ಶ್ರೀಯುತರನ್ನು ಶ್ರೀ ಸುಬುಧೇಂದ್ರ ತೀರ್ಥ ಡಾ. ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ದಿನಾಂಕ : 8-1-2023 ನೇ ಭಾನುವಾರ ಹೊಸರತ್ತಿಯ ಶ್ರೀ ಮೈಲಾರ ಮಹಾದೇವ ಸಭಾ ಭವನದಲ್ಲಿ ಶ್ರೀ ಶ್ರೀ 1008 ಡಾ.ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರು ಮಂತ್ರಾಲಯ ಹಾಗೂ ಗುದ್ದಲಿಂಗೇಶ್ವರ ಮಠ ಹೊಸರಿತ್ತಿಯ ಶ್ರೀ ಶ್ರೀ ಮ.ನಿ.ಪ್ರ. ಗುದ್ದಲೀಶ್ವರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಶ್ರೀಯುತರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿಜಯ ನಗರ ಜಿಲ್ಲೆಯ ಮ.ಸಾ.ಪ. ಅಧ್ಯಕ್ಷರಾದ ಡಾ.ವೆಂಕಟೇಶ್ ಬಡಿಗೇರ್ ಡಾ.ಮಾಂತೇಶ್ ಅಣ್ಣಿಗೇರಿ. ಬೆಳಗಾವಿ ಸಾಹಿತಿಗಳು ಮತ್ತು ಸಂಸ್ಥಾಪನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಶ್ವರ ಅಂಕಲಕೋಟಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.