(www.vknews.in) ಎಸ್ಡಿಎಂಸಿ ಕರ್ನಾಟಕದಲ್ಲಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಖ್ಯಾತ ರಂಗಕರ್ಮಿ, ಕನ್ನಡ ರಂಗಭೂಮಿಯ ಹಿರಿಯ ರಂಗ ನಿರ್ದೇಶಕ , ತನ್ನದೇ ಆದ ವಿಶಿಷ್ಟ ರೀತಿಯ ನಾಟಕಗಳಿಗೆ ಮತ್ತು ನಿರ್ದೇಶನಕ್ಕೆ ಹೆಸರಾಗಿದ್ದ, ಹಾಗೂ ೨೦೦೭ ರಲ್ಲಿ ಅವರು ಕಟ್ಟಿಕೊಟ್ಟ ಎಸ್ಡಿಎಂಸಿ ಪ್ರತಾಪ ಎಂಬ ಯಕ್ಷಗಾನ ರೂಪದ ನಾಟಕ ಎಸ್ಡಿಎಂಸಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದುಕೊಟ್ಯಾಂತಹ. ಗೋಪಾಲಕೃಷ್ಣ ನಾಯರಿ ಅವರು ಇಂದು ಬೆಳಿಗ್ಗೆ 5.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಅವರಿಗೆ 68 ವರುಷ ಈ ವರುಷದ ಫೆಬ್ರವರಿ ತಿಂಗಳಿಗೆ ತುಂಬುತ್ತಿತ್ತು. ಸ್ವಲ್ಪ ಸಮಯದ ಅನಾರೋಗ್ಯದಿಂದ ಬಳಲುತ್ತಿದ್ದ ನಾಯರಿ, ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಎಸ್ಡಿಎಂಸಿ ಸಮನ್ವಯ ವೇದಿಕೆಯ ಮಹಾ ಪೋಷಕರಾದ ನಿರಂಜನ್ ಆರಾಧ್ಯ ವಿ ಪಿ. ಹಾಗೂ ಎಸ್ಡಿಎಂಸಿ ಸಮನ್ವಯ ವೇದಿಕೆಯು ಸಂತಾಪವನ್ನು ಸೂಚಿಸಿದ್ದು, ಇವರ ಮರಣವು ಸರಕಾರಿ ಶಾಲೆಗಳ ಬೆಳವಣಿಗೆಗೆ ತೀರಾ ನಷ್ಟವಾಗಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.