(www.vknews.in) ಕೆನರಾ ಉತ್ಸವ-೨೦೨೩ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ(ದಕ್ಷಿಣ) ದವರು ಮಾತೃಛಾಯ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿರುವ 5 ದಿನದ ‘ಕೆನರಾ ಉತ್ಸವ -೨೦೨೩’ ಅನ್ನು ಕೆನರಾ ಬ್ಯಾಂಕ್ ನ ಮುಖ್ಯ ಮಹಾ ಪ್ರಬಂಧಕರಾದ ಶ್ರೀ ದೇಬಾನಂದ ಸಾಹೂರವರು ಉದ್ಘಾಟಿಸಿದರು.
ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ಬನಶಂಕರಿ ಎರಡನೆಯ ಹಂತದ ಮಾತೃಛಾಯಾ ಆವರಣದಲ್ಲಿ ಜನವರಿ ೪ ರಿಂದ ಜನವರಿ ೮ ರವರೆಗೆ ಐದು ದಿವಸ ನಡೆಯಲಿರುವ ಈ ಉತ್ಸವದಲ್ಲಿ ಮಹಿಳೆಯರು ಉದ್ಯಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಐವತ್ತಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸಲಿರುವ ಈ ಉತ್ಸವದಲ್ಲಿ ಸಿದ್ಧಪಡಿಸಿದ ಉಡುಪುಗಳು, ಗೃಹಲಂಕಾರ, ಟೆರಾಕೋಟ, ಪರಿಸರ, ಕರಕುಶಲ, ಕೃತಕ ಆಭರಣ, ಪ್ರಸಾದನ ಇತ್ಯಾದಿ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿದೆ. ಇದರ ಜೊತೆಗೆ ಬಿಡದಿ ಕೆ ಪಿ ಜೆ ಪ್ರಭು ಕರಕುಶಲ ಸಂಸ್ಥೆಯವರಿಂದ ಸುಂದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವೂ ಇರುತ್ತದೆ. ಈ ಉದ್ಘಾಟನಾ ಸಂದರ್ಭದಲ್ಲಿ ಬ್ಯಾಂಕ್ ನ ಉಪ ಮಹಾ ಪ್ರಬಂಧಕರಾದ ಶ್ರೀ ಟಿ ಜಿ ಬೋರಯ್ಯ, ಶ್ರೀಮತಿ ಪ್ರೇಮಾ ರತ್ನಾಕರ್, ಶ್ರೀ ಪ್ರಕಾಶ ಮಲ್ಯ, ಶ್ರೀ ಡಿ ಎಸ್ ಆನಂದಮೂರ್ತಿ, ಶ್ರೀ ಕೆ ಎಸ್ ಎಸ್ ಕಾಮತ್ ಮತ್ತು ಶ್ರೀಮತಿ ಸುಮಂಗಲ ಅಂಗಡಿಯವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.