ದುಬೈ (www.vknews.in) : ಯಸ್ ಕೆ ಯಸ್ ಯಸ್ ಯಫ್ ದುಬೈ ಕರ್ನಾಟಕ ಸ್ಟೇಟ್ ಇದರ ಅಧೀನದಲ್ಲಿ ದಿನಾಂಕ 03/01/2023 ನೇ ಮಂಗಳವಾರದಂದು ರಾತ್ರಿ ದೇರಾ ದುಬೈಯ ಅಬುಹೈಲ್ ನಲ್ಲಿರುವ ಕೆ ಎಂ ಸಿ ಸಿ ಹಾಲ್ ನಲ್ಲಿ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ ಯವರ ನೇತೃತ್ವದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಾಮಾಜಿಕ ಮತ್ತು ಧಾರ್ಮಿಕ ನೇತಾರ ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿಯವರ 3 ನೇ ದುಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ರಾತ್ರಿ 09:00 ಗಂಟೆಗೆ ಸರಿಯಾಗಿ ಸಯ್ಯದ್ ಅಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ಖತಮುಲ್ ಕುರ್ ಆನ್ ಆರಂಭಿಸಲಾಯಿತು. ಬಳಿಕ ತಹಲೀಲ್ ಮತ್ತು ಇಸ್ತಿಗ್ಫಾರ್ ಹೇಳಲಾಯಿತು. ಬಳಿಕ ಅನುಸ್ಮರಣೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.
ವೇದಿಕೆಯಲ್ಲಿ ಸಯ್ಯದ್ ಅಸ್ಕರ್ ಅಲಿ ತಂಗಳ್ ಕೋಲ್ಪೆ ಅದ್ಯಕ್ಷರು ಯಸ್ ಕೆ ಯಸ್ ಯಸ್ ಯಫ್ ದುಬೈ ಕರ್ನಾಟಕ ಸ್ಟೇಟ್ ಮತ್ತು ದಾರುಸ್ಸಲಾಮ್ ಎಜುಕೇಷನ್ ಟ್ರಸ್ಟ್ ಬೆಳ್ತಂಗಡಿ, ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ್ ಉತ್ತರಾಧಿಕಾರಿ ಅತ್ತಿಪ್ಪೆಟ್ಟ ಉಸ್ತಾದ್ ಧಿಕ್ರ್ ಮಜ್ಲಿಸ್ ಶಾರ್ಜಾ, ಉಸ್ತಾದ್ ಅಬ್ಬಾಸ್ ದಾರಿಮಿ ವಿಟ್ಲ, ಉಸ್ತಾದ್ ಅಬ್ದುಲ್ ಖಾದರ್ ಅಲ್ ಅಸ್ ಅದಿ ದುಬೈ ಸುನ್ನಿ ಸೆಂಟರ್, ಅಲಿ ಹಸನ್ ಫೈಝಿ ಅಲ್ ಮಅಬರಿ ಅದ್ಯಕ್ಷರು ಶಂಸುಲ್ ಉಲಮ ಅರಬಿಕ್ ಕಾಲೇಜ್ ದುಬೈ ಸ್ಟೇಟ್ , ಉಸ್ತಾದ್ ಬದ್ರುಲ್ ಮುನೀರ್ ಫೈಝಿ ಅಲ್ ಮಅಬರಿ, ಜನಾಬ್ ಮಹಮ್ಮದ್ ಮಾಡಾವು ಅದ್ಯಕ್ಷರು ದಾರುನ್ನೂರ್ ಕಲ್ಚರಲ್ ಸೆಂಟರ್ ಯು ಎ ಇ, ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ ಗೌರವಾದ್ಯಕ್ಷರು ದಾರುನ್ನೂರ್ ಯು ಎ ಇ, ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ ಉಪದೇಶಕರು ದಾರುನ್ನೂರ್ ಯು ಎ ಇ, ಜನಾಬ್ ಯೂಸುಫ್ ಈಶ್ವರ ಮಂಗಲ ಉಪದೇಶಕರು ದಾರುನ್ನೂರ್ ಯು ಎ ಇ, ಜನಾಬ್ ಅಶ್ರಫ್ ನಾಟೆಕಲ್ ಉಪದೇಶಕರು ದಾರುನ್ನೂರ್ ಯು ಎ ಇ, ಜನಾಬ್ ಶರೀಫ್ ಕಾವು ಅದ್ಯಕ್ಷರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಯು ಎ ಇ , ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್ ಅದ್ಯಕ್ಷರು ದಾರುನ್ನೂರ್ ಶಾರ್ಜಾ ಸ್ಟೇಟ್, ಜನಾಬ್ ಅಬ್ದುಲ್ ಸಲಾಮ್ ಬಪ್ಪಳಿಗೆ ಕೋಶಾಧಿಕಾರಿ ದಾರುನ್ನೂರ್ ಯು ಎ ಇ, ಜನಾಬ್ ಅಬ್ದುಲ್ ರಹ್ಮಾನ್ ಸಜಿಪ ಅದ್ಯಕ್ಷರು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ, ಜನಾಬ್ ಅಬ್ದುಲ್ ರಝಾಕ್ ಸೋಂಪಾಡಿ ಕೋಶಾಧಿಕಾರಿ ದಾರುಸ್ಸಲಾಂ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೇಂದ್ರ ಬಿಂದು ಮರ್ಹೂಂ ನೌಷಾದ್ ಹಾಜಿ ಸೂರಲ್ಪಾಡಿಯವರ ಹೃಸ್ವ ಪರಿಚಯ ಮತ್ತು ವೇದಿಕೆಯಲ್ಲಿರುವ ಉಲಮಾ ಉಮರಾ ನೇತಾರರನ್ನು ಮತ್ತು ನೌಷಾದ್ ಹಾಜಿಯವರ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಲು ಕೇವಲ ವಾಟ್ಸ್ ಆಪ್ ಸಂದೇಶವನ್ನು ಪರಿಗಣಿಸಿ ಮರುದಿವಸ ನೌಕರಿ ಇದ್ದೂ ಸಹ ಅದನ್ನು ಪರಿಗಣಿಸದೆ ಆಗಮಿಸಿದ ಯು ಎ ಇ ಯ ವಿವಿಧ ಕಡೆಯ ನೂರಕ್ಕಿಂತಲೂ ಅಧಿಕ ಸಹೋದರರನ್ನು ಜನಾಬ್ ಬದ್ರುದ್ದೀನ್ ಹೆಂತಾರ್ ರವರು ಸ್ವಾಗತಿಸಿದರು.
ಉದ್ಘಾಟನೆಯನ್ನು ಸಯ್ಯದ್ ಅಸ್ಕರ್ ಅಲಿ ತಂಗಳ್ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ನೌಷಾದ್ ಹಾಜಿ ಎಂಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಮಾಜಿಕ ಸೇವೆ ನಡೆಸಿದ್ದರಿಂದಾಗಿ ಅವರಿಗಾಗಿ ಲಕ್ಷಾಂತರ ಮನಸ್ಸುಗಳು ಮಿಡಿಯುವುದರೊಂದಿಗೆ ಅವರಿಗಾಗಿ ಕೈ ಎತ್ತಿ ದೇಶ ವಿದೇಶಗಳಲ್ಲಿ ಅಲ್ಲಾಹನೊಂದಿಗೆ ದುಆ ಮಾಡಿ ಪ್ರಾರ್ಥಿಸುತ್ತಿರುವುದನ್ನು ನಮ್ಮಿಂದ ಕಾಣಲು ಸಾಧ್ಯವಾಗಿದೆ. ಅದಕ್ಕಾಗಿ ಎಲ್ಲರೂ ಪರೋಪಕಾರ ಮನೋಭಾವವನ್ನು ಮೈಗೂಡಿಸಿ ಇತರಿಗಾಗಿ ಜೀವಿಸಲು ಪ್ರಯತ್ನಿಸಬೇಕು ಎಂದು ಉಪದೇಶಿಸಿದರು.
ಬಳಿಕ ಉಸ್ತಾದ್ ಅಬ್ಬಾಸ್ ದಾರಿಮಿ, ಉಸ್ತಾದ್ ಸಿರಾಜುದ್ದೀನ್ ಫೈಝಿ, ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ, ಜನಾಬ್ ಮಹಮ್ಮದ್ ಮಾಡಾವು, ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ, ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ಮೊದಲಾದವರು ನೌಷಾದ್ ಹಾಜಿಯವರೊಂದಿಗಿರುವ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಲ್ಲರ ಬಾಯಲ್ಲೂ ಅವರ ಬಗ್ಗೆ ಉತ್ತಮ ಅಭಿಪ್ರಾಯ ಮತ್ತು ಅವರ ಗುಣ ಸ್ವಭಾವ, ಪರೋಪಕಾರ ಮನೋಭಾವ, ಹಸನ್ಮುಖ, ವಿದ್ವಾಂಸರೊಂದಿಗಿರುವ ನಿಕಟ ಸಂಪರ್ಕ, ಬಡವರೊಂದಿಗಿರುವ ಅನ್ಯೋನ್ಯತೆ, ಅನಾಥ ಮಕ್ಕಳೊಂದಿಗಿರುವ ಪ್ರೀತಿ, ಸಂಘ ಸಂಸ್ಥೆಗಳ ನಿರ್ಮಾಣ ಮತ್ತು ಅದಕ್ಕಾಗಿ ಶತತ ಪ್ರಯತ್ನ ಮತ್ತು ಸಹಕಾರ, ವಯಸ್ಸು ಮೀರಿಯೂ ವಿವಾಹವಾಗದ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಆಹೋ ರಾತ್ರಿ ಪ್ರಯತ್ನ, ಧಾರ್ಮಿಕ ಸ್ಥಳಗಳಿಗೆ ಭೇಟಿ, ಧಾರ್ಮಿಕ ಕಾರ್ಯಕ್ರಮ ಎಷ್ಟೇ ದೂರವಿದ್ದರೂ ಅಲ್ಲಿಗೆ ಪ್ರಯಾಣ, ರಾಜಕಾರಣಿಗಳನ್ನು ಭೇಟಿಯಾಗಿ ಜಟಿಲ ಪ್ರಶ್ನೆಗಳಿಗೆ ಪರಿಹಾರ ಕಂಡು ಹಿಡಿಯುವುದು, ವಿದ್ವಾಂಸರುಗಳು ಸಿಕ್ಕಿದರೆ ಆಂತರಿಕ ಪ್ರಶ್ನೆಗಳನ್ನು ಪರಿಹರಿಸಲು ವಿನಂತಿಸುವುದು, ಉತ್ತರ ಕರ್ನಾಟಕದ ಮಕ್ಕಳ ಮದ್ರಸಾ ವಿದ್ಯಾಭ್ಯಾಸಕ್ಕಾಗಿ ಮಾರ್ಗೋಪಾಯ ಕಂಡುಹಿಡಿಯುವುದು, ಬಡವರ ಮನೆ ಬಾಗಿಲಿಗೆ ಆಹಾರದ ಕಟ್ಟನ್ನು ಸರಬರಾಜು ಮಾಡುವುದು, ವಿದೇಶಗಳಲ್ಲಿರುವ ನಾಡಿನ ಯುವಕರಿಗೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಲು ಪ್ರೇರೇಪಿಸುವುದು, ವಿವಾಹ ಮತ್ತು ಮರಣದ ಮನೆ ಎಷ್ಟೇ ದೂರವಿದ್ದರೂ ಪಾಲ್ಗೊಳ್ಳುವುದು, ಮನಸ್ಥಾಪ ಬಾರದ ಹಾಗೆ ಹೆಜ್ಜೆ ಇಡುವುದು, ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವುದು, ದಾನ ಧರ್ಮದಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು, ಮುತ್ತು ನೆಬಿಯವರ ಆದರ್ಶ ಹಿಂಬಾಲಿಸುವುದು ಹೀಗೆ ಎಲ್ಲರೂ ಅವರ ಸಾಮಾಜಿಕ ಮತ್ತು ಧಾರ್ಮಿಕ ಕಾಳಜಿಯನ್ನು ಹೊಗಳಿ ಅವರಂತಹ ಆತ್ಮ ಶುದ್ಧಿಯ ಗುಣ ಸ್ವಭಾವ ನಮ್ಮೆಲ್ಲರಲ್ಲೂ ಮೂಡಬೇಕು ಎಂದು ಹೇಳುತ್ತಾ ಅವರ ಪಾರತ್ರಿಕ ವಿಜಯಕ್ಕಾಗಿ ಪ್ರಾರ್ಥಿಸಿದರು. ಬಳಿಕ ಗಫೂರ್ ಕಾಟಿಪಳ್ಳ ರವರು ಬರೆದ “ ನೌಶಾದ್ ಹಾಜಿಡೊ ನೆನಪುಲು” ಎಂಬ ಬ್ಯಾರಿ ಕವನವನ್ನು ಬದ್ರುದ್ದೀನ್ ಹೆಂತಾರ್ ರವರು ವಾಚಿಸಿದರು.
ಯಸ್ ಕೆ ಯಸ್ ಯಸ್ ಯಫ್ ವಿಖಾಯ ಚೇರ್ಮೇನ್ ಜನಾಬ್ ನವಾಝ್ ಬಿ ಸಿ ರೋಡ್ ರವರು ವಂದನಾರ್ಪಣೆಗೈದರು. ಈ ಸಂದರ್ಭ ನೌಷಾದ್ ಹಾಜಿಯವರ ಮರಣ ಪ್ರತಿಯೊಬ್ಬರಿಗೂ ಒಂದು ಮುನ್ಸೂಚನೆಯಂತಿದ್ದು ಎಲ್ಲರೂ ಸಮಾಜಿಕ ಮತ್ತು ಧಾರ್ಮಿಕ ವಿಷಯಗಳು ಬರುವಾಗ ತಲೆ ತಗ್ಗಿಸದೆ ಮುಂದೆ ಬರಬೇಕೆಂದು ವಿನಂತಿಸಿದರು. ನೌಷಾದ್ ಹಾಜಿಯವರ ಡ್ರೈವರ್ ಮುಷರ್ರಫ್ ಉಳಾಯಿಬೆಟ್ಟು ರವರು ತುಂಬಾ ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಪರಿವಾರದ ಆಸರೆಯಂತೆ ಇದ್ದ ಒಬ್ಬನೇ ಮಗ ಮರಣ ಹೊಂದಿರುವಾಗ ಆ ಮನೆಗೆ ಸಾಂತ್ವನ ಹೇಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಸಹಕಾರದೊಂದಿಗೆ ಯಸ್ ಕೆ ಯಸ್ ಯಸ್ ಯಫ್ ವತಿಯಿಂದ ಒಂದು ಉತ್ತಮ ಧನ ಸಹಾಯವನ್ನು ಆ ಮನೆಗೆ ಕಳುಹಿಸಿಕೊಡಲು ನೆರವಾಗಬೇಕೆಂದು ವಿನಂತಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಯ್ಯಿತ್ ನಮಾಝ್ ಸಯ್ಯದ್ ಅಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ನೆರವೇರಿತು. ಇದೇ ಸಂದರ್ಭ ಸಮಸ್ತ ಸಂಘಟನೆಗಳ ನೇತಾರರಾದ ಜನಾಬ್ ಅಶ್ರಫ್ ಪರ್ಲಡ್ಕರವರ ತಾಯಿ ಮರಿಯಮ್ಮ ಗೋಳಿಕಟ್ಟೆ ಮತ್ತು ಜನಾಬ್ ಸಿರಾಜ್ ಬಿ ಸಿ ರೋಡ್ ರವರ ದೊಡ್ಡಮ್ಮನ ಮಗಳು ದುಲೈಖ ಎಂಬವರ ಮೇಲೂ ಹಾಗೂ ಅಲ್ಲಿ ಹೆಸರು ನೀಡಿದ ಹಲವರ ಮೇಲೂ ಮಯ್ಯಿತ್ ನಮಾಝ್ ನಿರ್ವಹಿಸಲಾಯಿತು. ಉಸ್ತಾದ್ ಅಬ್ದುಲ್ ಖಾದರ್ ಅಲ್ ಅಸ್ಅದಿ ಯವರಿಂದ ಭಕ್ತಿಪೂರ್ವಕ ದುಆ ಕಾರ್ಯ ನೆರವೇರಿತು. ರಾತ್ರಿ 11:30 ಕ್ಕೆ ಸರಿಯಾಗಿ ನೌಷಾದ್ ಹಾಜಿ ಅನುಸ್ಮರಣೆ ಕಾರ್ಯಕ್ರಮಕ್ಕೆ ಪೂರ್ಣವಿರಾಮವನ್ನು ನೀಡಲಾಯಿತು. ಜನಾಬ್ ಶರೀಫ್ ಕೊಡ್ನೀರ್ ರವರು ತಮ್ಮ ಮನೆಯಿಂದ ಪಾಯಸ ಮಾಡಿ ತಂದು ವಿತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನ ದಾನ ಮಾಡಲಾಯಿತು.
ಕಾರ್ಯಕ್ರಮಕ್ಕೆ ಯಸ್ ಕೆ ಯಸ್ ಯಸ್ ಕಾರ್ಯಕರ್ತರು, ದಾರುನ್ನೂರ್ ಎಜುಕೇಷನ್ ಸೆಂಟರ್, ಕರ್ನಾಟಕ ಇಸ್ಲಾಮಿಕ್ ಸೆಂಟರ್, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ, ಶಂಸುಲ್ ಉಲಮಾ ಅರಬಿಕ್ ಕಾಲೇಜ್, ದಾರುಸ್ಸಲಾಂ ಎಜುಕೇಷನ್ ಟ್ರಸ್ಟ್, ದಾರುಲ್ ಹಸನಿಯ್ಯ ಸಾಲ್ಮರ, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್, ಕೊಡಗು ಜಾಮಿಯಾ ಜೂನಿಯರ್ ಕಾಲೇಜ್, ಆತೂರ್ ವೆಲ್ಫೇರ್ ಕಮಿಟಿ, ಕೂರ್ನಡ್ಕ ಜಮಾಅತ್ ಕಮಿಟಿ ಮೊದಲಾದ ಸಂಘ ಸಂಸ್ಥೆಗಳ ಆಗಮಿಸಿದ್ದರು. ಯಸ್ ಕೆ ಯಸ್ ಯಸ್ ಯಫ್ ವಿಖಾಯ ಕಾರ್ಯಕರ್ತರು ಸ್ವಯಂಸೇವಕರಾಗಿ ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.